ಅವನು ಕುರುಬರಲ್ಲಿ ಹುಟ್ಟಿದ್ದಾನಾ? ನಾನು ಕುರುಬರಲ್ಲಿ ಹುಟ್ಟಿದ್ದೇನೆ- ಸಿದ್ಧರಾಮಯ್ಯ

ವಿಜಯಪುರ: ಅವನು ಕುರುಬರಲ್ಲಿ ಹುಟ್ಟಿದ್ದಾನಾ? ನಾನು ಕುರುಬರಲ್ಲಿ ಹುಟ್ಟಿದ್ದೇನೆ ರಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,
ನಾವ್ಯಾಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸಬೇಕು. ಅವರ ನಡವಳಿಕೆಗಳಿಂದ, ಅವುಗಳ ತತ್ವ ಸಿದ್ಧಾಂತಗಳಿಂದ ಅವರೇ ಮುಗಿದು ಹೋಗ್ತಾರೆ ಎಂದು ಮಾಜಿ ಪ್ರಧಾನಿ ಎಚ್. ಡಿ
ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ತೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾದೇಶಿಕ‌ ಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಆರೋಪಕ್ಕೆ ಸಿದ್ಧರಾಮಯ್ಯ ಈ ಮೂಲಕ ತಿರುಗೇಟು ನೀಡಿದರು.

ಚುನಾವಣೆ ಇದ್ದಾಗ ಅವರ ವಿರುದ್ಧ ಪ್ರಚಾರ ಮಾಡಲೇಬೇಕು. ನಾವು ಪ್ರಚಾರ ಮಾಡುತ್ತೇವೆ. ಈ ಬೈ ಎಲೆಕ್ಷನ್ ನಲ್ಲಿ ಸಿಂದಗಿ ಮತ್ತು ಹಾನಗಲ್ ಎರಡೂ ಕಡರ ಜೆಡಿಎಸ್ ಸೋಲುತ್ತದೆ ಎಂದು ಅವರು ಹೇಳಿದರು.

ಜೆಡಿಎಸ್ ಮುಗಿಸಲು ಬಿಡುವುದಿಲ್ಲ. ಅದಕ್ಕೆ ಅವಕಾಶ ನೀಡದೆ ಎಲ್ಲ ಕಡೆ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವುದಾಗಿ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಎಸ್. ಸಿದ್ಧರಾಮಯ್ಯ, ಮುಗಿಸುವುದು ಬೇಡ ಎನ್ನುವುದಾದರೆ ಅವರೆ ಇಟ್ಟುಕೊಳ್ಳಲಿ. ‌ನಾವೇನೂ ಬೇಡ ಎನ್ನುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ಸನ್ನು ನಾವ್ಯಾರು ಮುಗಿಸುವುದಿ ಬೇಡ. ಅದೇ ನಶಿಸಿ ಹೋಗಲಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ನುಡಿದಿರುವ ಭವಿಷ್ಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರೂ ಕಾಂಗ್ರೆಸ್ಸಿನಲ್ಲಿದ್ದವರು. ‌ಕಾಂಗ್ರಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವಾಗಿದೆ. ಹೀಗಾಗಿ ಕಾಂಗ್ರೆಸ್ ಜನರ ನಂಬಿಕೆಗೆ ಅರ್ಹ ಅಲ್ವಾ? ಜೆಡಿಎಸ್ ಸ್ಚಾತಂತ್ರ್ಯ ತಂದು ಕೊಟ್ಟಿದೆಯಾ? ಎಂದು‌ ಮರು ಪ್ರಶ್ನೆ ಹಾಕಿದರು.

ಕಂಬಳಿ ಹಾಕುವುದಕ್ಕೂ ಯೋಗ್ಯತೆ ಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಏನ್ ಕಂಬಳಿರಿ? ಅವನು ಕುರುಬರಲ್ಲಿ ಹುಟ್ಟಿದ್ದಾನಾ? ಎಂದು ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನಾನು ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ ನಡೀರಿ ಎಂದು ಹೇಳಿದ ಸಿದ್ಧರಾಮಯ್ಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದ ಕಡೆ ತೆರಳಿದರು.

ಈ ಸಂದರ್ಭದಲ್ಲಿ‌ ಕಾಂಗ್ರೆಸ್ ಮುಖಂಡರಾದ ಸೋಮನಾಥ ಕಳ್ಳಿಮನಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌