ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಸಿದ್ಧು ಕಾರಣ- ಬಿಜೆಪಿ ಜೊತೆ ಸಿದ್ಧರಾಮಯ್ಯ ಒಳಒಪ್ಪಂದ ಮಾಡಿಕೊಂಡಿದ್ದಾರೆ- ಕುಮಾರಸ್ವಾಮಿ ವಾಗ್ದಾಳಿ

ವಿಜಯಪುರ: ಬೈ ಎಲೆಕ್ಷನ್ ಬಹಿರಂಗ ಪ್ರಚಾರಕ್ಕೆ ಬುಧವಾರ ಕೊನೆಯ ದಿನವಾಗಿದ್ದು, ಜೆಡಿಎಸ್-ಕಾಂಗ್ರೆಸ್ ಆರೋಪ- ಪ್ರತ್ಯಾರೋಪ ಮುಂದುವರೆದಿದೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ಜಮೀರ ಅಹ್ಮದಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಳೆಯ ನಾನಾ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸಿಂಧಗಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ.  ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿ ಗೆ ಮತ ಕೊಟ್ಟಂತೆ ಅಂತ ಪ್ರಚಾರ ಮಾಡಿದdojg.  ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂದವರು ನಮ್ಮ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಬಳಿ ಸರಕಾರ ರಚನೆ ಮಾಡಿ ಎಂದು ಬಂದಿದ್ದರು ನೆನಪಿಸಿದ್ದಾರೆ.  ದೇವೇಗೌಡರ ಜಾತ್ಯಾತೀತತೆ ಪ್ರಶ್ನಿಸಿದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು ನೀಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವೇ ದೊಡ್ಡದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಜೆಪಿ 105 ಸ್ಥಾನಕ್ಕೇರಲು ನಾವು ಕಾರಣವೇ? ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಆಗ ಪ್ರತಿಪಕ್ಷದ ನಾಯಕರಾಗಿದ್ದುಕೊಂಡು ಬಿಜೆಪಿಯ ಒಂದೇ ಒಂದು ದಾಖಲೆ ಬಹಿರಂಗ ಮಾಡಲಿಲ್ಲ.  ನಮ್ಮ ಹೋರಾಟದ ಫಲದಿಂದ ಆಗ ಬಿಜೆಪಿ‌ 40ಕ್ಕೆ ಕುಸಿಯಿತು ಎಂದು ತಿಳಿಸಿದರು.

ಸಿದ್ದರಾಮಯ್ಯ ನಡವಳಿಕೆಯಿಂದ ಜನರು ಕಾಂಗ್ರೆಸ್ ನಿಂದ ದೂರ ಹೋಗುತ್ತಿದ್ದಾರೆ.  ದೇವೇಗೌಡರು ಎಂದೂ ಸಹ ಬಿಜೆಪಿ ಜೊತೆ ಕೈ ಜೋಡಿಸಿಲ್ಲ.  ದೇವೇಗೌಡರ ಜಾತ್ಯತೀತತೆ ಪ್ರಶ್ನಿಸುವ ನೈತಿಕತೆ ಸಿದ್ರಾಮಯ್ಯ ಎಲ್ಲಿ ಉಳಿಸಿಕೊಂಡಿದ್ದಾರೆ? 1994ರಲ್ಲಿ ಜನತಾದಳ ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆ ಒಂದು ಕೈ ಹೆಚ್ಚಿದೆ.  ನಾನು ರಾಜಕಾರಣದಿಂದ ದೂರ ಇದ್ದರೂ ಸಹ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದೆ.  ಹೀಗಾಗಿ ಅಂದು ಜನತಾದಳ ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆ ಹೆಚ್ಚಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋ ಹುಚ್ಚು, ದುಡ್ಡು ಪಡೆದಿದ್ದಾರೆ ಎಂದು ಆರೋಪ

ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಹುಚ್ಚಿತ್ತು.  ನಾನು ಮುಖ್ಯಮಂತ್ರಿ ಆಗಲೇಬೇಕು ಎಂದು ಈ ಹಿಂದೆ ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ರಗ್ಗು ಹೊದ್ದು ಮಲಗಿದ್ದರು.  ಆಗ ಅವರನ್ನು ಕರೆದುಕೊಂಡು ಬಂದವನು ನಾನು.  ನಂತರ ಅವರು ಉಪಮುಖ್ಯಮಂತ್ರಿ ಆದರು.  2008 ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ನಡೆದ 20 ಕ್ಶೇತ್ರಗಳ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಲು ಸಿದ್ದರಾಮಯ್ಯ ದುಡ್ಡು ಪಡೆದಿದ್ದರು.  ಸಿದ್ದರಾಮಯ್ಯ ಅವರಿಗೆ ದುಡ್ಡು ತೆಗೆದುಕೊಂಡು ಹೋಗಿ ಕೊಟ್ಟವರೇ ನನಗೆ ಈ ವಿಷಯ ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.

ನಾನ್ಯಾಕೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದೆ?

ಬಿಜೆಪಿ ಜೊತೆ ಸೇರಿ ತಾವು ಯಾಕೆ ಸಮ್ಮಿಶ್ರ ಸರಕಾರ ರಚನೆ ಮಾಡಬೇಕಾಯಿತು ಎಂಬುದನ್ನು ಬಹಿರಂಗ ಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ನಾನು ಬಿಜೆಪಿ ಜೊತೆ ಹೋಗಿ ಸರಕಾರ ರಚನೆ ಮಾಡಲು ಸಿದ್ಧರಾಮಯ್ಯ ಅವರೇ ಕಾರಣ.  ಆಗ ಸಿದ್ದರಾಮಯ್ಯ ಜೆಡಿಎಸ್ ಮುಗಿಸಲು ಅಹಿಂದ ರಚನೆ ಮಾಡಿದ್ದರು.  ಆಗ ನಾನು ಜೆಡಿಎಸ್ ಉಳಿಸಲು ಅನಿವಾರ್ಯವಾಗಿ ಬಿಜೆಪಿ ಜೊತೆ ಕೈ ಜೋಡಿಬೇಕಾಯಿತು.  ಬಿಜೆಪಿ ಮುಖಂಡರಾದ ವಾಮನಾಚಾರ್ಯ, ಅಗ್ನಿ ಶ್ರೀಧರ ಮತ್ತು ಅಭಿಮಾನಿ ಪ್ರಕಾಶನದ ಮಾಲೀಕರು ಅಂದು ಸಭೆ ಮಾಡಿದ್ದರು,  ಅವರನ್ನು ಕೇಳಿ ಬೇಕಿದ್ದರೆ ಕೇಳಬಹದು.  ನವೀನ ಪಟ್ನಾಯಕ ಜೊತೆ ಓರಿಸ್ಸಾದಲ್ಲಿ ಸಿಎೞ ಮಾಡಿದಂತೆ ನಿಮ್ಮನ್ನೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ಬಿಜೆಪಿಯವರೇ ದುಂಬಾಲು ಬಿದ್ದಿರು ಎಂದು ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ರಚನೆಗೆ ಕಾರಣವನ್ನು ಬಹಿರಂಗ ಪಡಿಸಿದರು.

ಸಿಎಂ ಆಗಿ ಮಾಡಿರುವ ಕೆಲಸದಿಂದ ಜೆಡಿಎಸ್ ಉಳಿದಿದೆ

ಸಿದ್ದರಾಮಯ್ಯ ಅವರಂಥವರು ಟೋಪಿ ಹಾಕಿ ಹೋದರೂ ಸಹ, ಚೂರಿ ಹಾಕಿ ಹೋದರೂ ಕೂಡ ಜೆಡಿಎಸ್ ಉಳಿದಿದ್ದು ನಾನು ಸಿಎಂ ಆಗಿ ಮಾಡಿರುವ ಕೆಲಸಗಲಿಂದ ಎಂದು ಹೇಳಿದ ಕುಮಾರಸ್ವಾಮಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನವಾಗುವಾಗ ನಾನು ಅಮೇರಿಕದಲ್ಲಿ ಇದ್ದೆ.  ಜಾರ್ಜ್ ಹಾಗೂ ಭೈರತಿ ಬಸವರಾಜ್ ನಡುವೆ ಒಂದು ಗಲಾಟೆ ಶುರುವಾಯ್ತು.  ಆಗ ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಸರಕಾರ ಉಳಿಸಬಹುದಿತ್ತು.  ಆದರೆ ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ ಎಂದು ಅವರು ತಿಳಿಸಿದರು.

ಜಾತ್ಯತೀತತೆ ಎಂದರೇ ಏನು?

ಡಿಎಂಕೆ ಜೊತೆ ಸೇರಿ ಸರಕಾರ ಮಾಡಿದ ನಿಮ್ಮದ್ಯಾವ ಜಾತ್ಯಾತೀತತೆ? ಶಿವಸೇನೆ ಜೊತೆ ಸೇರಿ ಸರಕಾರ ರಚನೆ ಮಾಡಿರುವ ನಿಮ್ಮದು ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡೊಣ ಎಂದು ನಾನು ಹೇಳಿದಾಗ ಸಿದ್ದರಾಮಯ್ಯ ಅಂದು ಟವಲ್ ಕೊಡವಿ ಹೆಗಲ ಮೇಲೆ ಹಾಕಿಕೊಂಡು ಎದ್ದು ಹೋಗಿದ್ದರು ಎಂದು ವಾಗ್ದಾಳಿ ನಡೆಸಿದರು.

ಜಮೀರ ಅಹ್ಮದಖಾನ್ ವಿರುದ್ಧ ವಾಗ್ದಾಲಿ

ಸಿದ್ದರಾಮಯ್ಯನವರೇ ನನ್ನ ರಾಜ ಗುರುಗಳು ಎನ್ನುವ ವ್ಯಕ್ತಿಯೇ ಅಂದು ನನಗೆ ಫೋನ್ ಮಾಡಿ ಗೋಪಲಯ್ಯನ ನಾನೇ ಕಳುಹಿಸಿದ್ದೇನೆ ಅಂತ ಥ್ರೆಟ್ ಮಾಡಿದ್ರು ಎಂದು ಕುಮಾರಸ್ವಾಮಿ ಮಾಜಿ ಸಚಿವ ಜಮೀರ ಅಹ್ಮದಖಾನ್ ಹೆಸರು ಹೇಳದೆ ಕಿಡಿ ಕಾರಿದರು.  ಈಗ ಜಮೀರ್ ಅಲ್ಪಸಂಖ್ಯಾತರ ಎದುರು ಹೋಗಿ ಹೇಳಲಿ.  ಬಿಜೆಪಿಗೆ ಅಧಿಕಾರ ಬಿಟ್ಟುಕೊಡಿ ಅಂತ ನನಗೆ ಥ್ರೆಟ್ ಮಾಡಿದ್ದನ್ನು ಹೋಗಿ ಈಗ ಹೇಳಲಿ ಎಂದು ಸವಾಲು ಹಾಕಿದ ಅವರು,

ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ.  ಕಸ ಹೊಡೆದಿದ್ದು ನಿಜ.  ಆದರೆ, ಆಗ ದೇವೇಗೌಡರು ನನ್ನನ್ನು ಕರೆದು ತಾವು ಅಧಿಕಾರದಲ್ಲಿ ಇರೋವಾಗ ಇದೆಲ್ಲ ಬೇಡ ಎಂದು ಹೇಳಿದಾಗ ಅದನ್ನು ಬಿಟ್ಟಿದ್ದೇನೆ ಎಂದು ಹೇಳಿದ ಅವರು, ಮಾಜಿ ಸಚಿವ ಜಮೀರ ಅಹ್ಮದಖಾನ್ ವಿರುದ್ಧ ಪರೋಕ್ಷವಾಗಿ ಮಾತನಾಡಿದ ಅವರು, ಅದೊಂದು ಕೊಚ್ಚೆ.  ಅದರ ಮೇಲೆ ಕಲ್ಲು ಹಾಕಿದರೆ ನಮ್ಮ ಮೇಲೆ ಬೀಳುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.  .

ಯಡಿಯೂರಪ್ಪ ಬಿಜೆಪಿ ಸರಕಾರ ರಚನೆ ವೇಳೆ ಬಾಂಬೆಗೆ ಶಾಸಕರನ್ನು ಕಳಿಸಿದ್ದು ಇವರೇ ಅಲ್ಲವೇ? ಅವರಿಬ್ಬರ ನೈಜ ಸಂಬಂಧ ಹೊರ ಬಂದರೆ ಬಹಳಷ್ಟು ವಿಚಾರಗಳು ಬಹಿರಂಗವಾಗಲಿವೆ ಎಂದು ಅವರು ಹೇಳಿದರು.

ನಾನು ಜಮೀರ್ ನಾ ಡ್ರೈವರ್ ಅಂತ ಹೇಳಿಲ್ಲ.  ಬೆಂಗಳೂರಿನಲ್ಲಿ ಕೂರೋಕೆ ಜಾಗ ಇಲ್ವಾ? ಬೆಂಗಳೂರು ಬಹಳ ದೊಡ್ಡದಾಗಿದೆ.  ಆ ಸದಾಶಿವನಗರ ಗೆಸ್ಟ್ ಹೌಸ್ ವಿಚಾರದಲ್ಲಿ ಎಷ್ಟು ಕೋಟಿ ದುಡ್ಡು ನಾನು ಕೊಟ್ಟಿದ್ದೆ,  ಅದೆಲ್ಲ ಬಹಳ ದೊಡ್ಡ ಕತೆ ಎಂದು ಕುಮಾರಸ್ವಾಮಿ ಅವರು ಜಮೀರ ಅಹ್ಮದಖಾನ್ ಗೆ ತಿರುಗೇಟು ನೀಡಿದರು.

20-20 ಸರಕಾರದ ಆಡಿಯೋ ವಿಚಾರ ಕುರಿತು ಮಾಜಿ ಸಚಿವ ಜಮೀರ್‌ ಹೇಳಿಕೆಗೆ ಟಾಂಗ್ ನೀಡಿದ ಅವರು, ತಾಕತ್ ಇದ್ದರೆ ಆಡಿಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.  ಜಮೀರ್‌ ಬ್ಲ್ಯಾಕಮೇಲ್ ಜೀವನ ಮಾಡುತ್ತಾರೆ.  ಮಾರ್ಯಾದೆ ಇಲ್ಲದವರ ಜೊತೆಗೆ ನಾನು ಚರ್ಚೆ ಮಾಡಲ್ಲ.  ಕುಮಾರಸ್ವಾಮಿಗೆ ಬೆಂಗಳೂರಿನಲ್ಲಿ ಇರಲು ಜಾಗ ಇರಲಿಲ್ಲ ಎಂದು‌ ಜಮೀರ್ ಹೇಳಿದ್ದಾರೆ.  ಆದರೆ, ಬೆಂಗಳೂರು ಬಹಳ ದೊಡ್ಡದಿದೆ.  ಬೆಂಗಳೂರುನಲ್ಲಿ ನನಗೆ ಜಾಗವೇ ಇಲ್ವಾ? ಪಾಪ, ಜಮೀರ್‌ ಅಹ್ಮದಖಾನ್ ನನಗೆ ಜಾಗ ಕೊಡಬೇಕಾ? ಕೊಚ್ಚಯ ಮೇಲೆ ಕಲ್ಲು ಎಸೆದರೆ ನಮ್ಮ ಮೇಲೆ ಬೀಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಆರೋಪಕ್ಕೆ ಗದ್ಘದಿತರಾಗಿ ಭಾವುಕರಾದ ಕುಮಾರಸ್ವಾಮಿ

ಇದೇ ವೇಳೆ, ಕುಮಾರಸ್ವಾಮಿ ಕರ್ಚೀಫ್ ಗೆ ಗ್ಲಿಸರೀನ್ ಹಾಕಿಕೊಂಡು ಅಳ್ತಾರೆ ಎಂಬ ಟೀಕೆಗೆ ಕುಮಾರಸ್ವಾಮಿ, ತಮ್ಮ ಕೈಯಲ್ಲಿದ್ದ ಕರ್ಚೀಫ್ ಮುಂದೆ ಹಿಡಿದು ನೋಡಿ ತಗೊಳ್ಳಿ ಇದರಲ್ಲೇನಿದೆ ನೋಡಿ ಎಂದು ಪತ್ರಕರ್ತರ ಕೈಗೆ ಕರ್ಚೀಫ್ ಕೊಡಲು ಮುಂದಾದದರು.  ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು.  ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ ಎಂದು ಕುಮಾರಸ್ವಾಮಿ ಗದ್ಘದಿತರಾದರು.  ಕಣ್ಣೀರಿಗೆ ಗ್ಲೀಸರೀನ್ ಹಾಕ್ಕೋತಾರೆ ಅನ್ನೋದೆಲ್ಲವನ್ನು ಈ ಹಿಂದೆಯೇ ಹೇಳಿ ಬಿಟ್ಟಿದ್ದಾರೆ ಎಂದು ಅವರು ಕಣ್ಣೀರ ಟೀಕೆಗೆ ಮತ್ತೆ ಕಣ್ತುಂಬಿಕೊಂಡೇ ಉತ್ತರ ಕೊಟ್ಟರು.

ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಅವರು, ದೇವೇಗೌಡರು ಮುಖ್ಯಮಂತ್ರಿ ಆಗುವ ವೇಳೆ ಸಿದ್ದರಾಮಯ್ಯ ಜನತಾದಳದ ಕಚೇರಿಗೆ ಬಂದಿರಲಿಲ್ಲ.  ಅಂದು ಅವರು ಯಾವುದೇ ಖಾಸಗಿ ಹೊಟೇಲ್ ನಲ್ಲಿ ಹೋಗಿ ಕುಳಿತಿದ್ದರು.  ಅವರ ಜೊತೆ ಎಷ್ಟು ಶಾಸಕರಿದ್ದರು.  ದೇವೇಗೌಡರ ನಾನೇ ಸಿಎಂ ಮಾಡಿದ್ದು ಅಂತ ಸಿದ್ದರಾಮಯ್ಯ ಹೇಳುವುದಾದರೆ ದೇವೇಗೌಡರು ಪ್ರಧಾನಿಯಾಗಿ ಹೋದಾಗ ಇವರೇಕೆ ಸಿಎಂ ಆಗಲು ಸಾಧ್ಯವಾಗಲಿಲ್ಲ? ನಾನು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ.  ಒಂದು ಬಾರಿ ಸಿದ್ದರಾಮಯ್ಯ ಸಿಎಂ ಆಗದಂತೆ ಮಾಡಿದ್ದೇ ನಾನು.  ಅಂದು ಸಿದ್ದರಾಮಯ್ಯ ಒಂದು ಸಭೆ ಮಾಡಿ ಜೆ. ಎಚ್. ಪಟೇಲ ಅವರನ್ನು ರಾಜ್ಯಪಾಲರಾಗಿ ಕಳುಹಿಸುವ ಪ್ಲ್ಯಾನ್ ಮಾಡಿದ್ದರು.  ಆದರೆ, ಆಗ ನಾನೇ ಅದನ್ನು ತಡೆದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಸಿಂದಗಿ ಬೈ ಎಲೆಕ್ಷನ್ ಗೆಲ್ಲುತ್ತೇವೆ

ದೇವೇಗೌಡ ಮಾರ್ಗದರ್ಶನ, ಪರಿಶ್ರಮ, ಶಾಸಕರು, ಕಾರ್ಯಕರ್ತರ ಶ್ರಮದಿಂದಾಗಿ ಕಳೆದ ಚುನಾವಣೆಗಿಂತ ಈ‌ ಬಾರಿ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಹೆಚ್ಚು ಮತಗಳನ್ನು ಪಡೆಯುತ್ತೇವೆ.  ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಿತ್ತು.  ಜೆಡಿಎಸ್ ಬಿಜೆಪಿಯ ಬಿ ಟಿಂ ಎಂದು ಹೇಳಿದ್ದರು.  ಆದರೆ, ಚುನಾವಣೆ ಬಳಿಕ ಅವರೇ ನಮ್ಮ ಜೊತೆ ಸರಕಾರ ಮಾಡಿದರು.  ಕಾಂಗ್ರೆಸ್ ನಾಯಕರು 2018 ರಿಂದಲೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.  ಅವರೇ  ಬಿಜೆಪಿ ಸಮೀಪ ಇದ್ದಾರೆ.  ಜ್ಯಾತ್ಯಾತೀತ ನಿಲುವು ಎನ್ನುವ ಇವರು ಕೋಮುವಾದಿ ಪಕ್ಷದ ಜೊತೆಗಿದ್ದಾರೆ.  ಬಿಜೆಪಿಯವರು 2013 ರಲ್ಲಿ 40 ರಿಂದ 2018ರ ಚುನಾವಣೆಯಲ್ಲಿ 105 ಕ್ಕೆ ಹೋಗಲು ಜೆಡಿಎಸ್ ಕಾರಣವೇ ಎಂದು ಪ್ರಶ್ನಿಸಿದ ಅವರು, ಅದಕ್ಕೆ ಕಾಂಗ್ರೆಸ್ ಕಾರಣ.  2008 ರಲ್ಲಿ ಪ್ರತಿಪಕ್ಷದವರ ವಿರುದ್ಧ ಹಗರಣ‌ ಕಾಂಗ್ರೆಸ್ ಹೊರ ತೆಗೆಯಿಲಿಲ್ಲ.  ನಮ್ಮ ಹೋರಾಟದ ಪ್ರತಿಫಲ 2013ರಲ್ಲಿ  ಕಾಂಗ್ರೆಸ್ ಅಧಇಕಾರಕ್ಕೆ ಬಂದಿತು.  ಸಿದ್ದರಾಮಯ್ಯ ಅವರ ನಡುವಳಿಕೆಗಳು ಬಿಜೆಪಿಗೆ ವರವಾಗಿದೆ.  ಇಲ್ಲವಾದರೆ ಇಂದು ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದರು.

 

Leave a Reply

ಹೊಸ ಪೋಸ್ಟ್‌