ಸೆರಗು ಒಡ್ಡಿ ಮಗನ ಪರ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ತಾಯಿ ಸಿದ್ದಮ್ಮ ಮನಗೂಳಿ- ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್ಸಿಗೆ ಮತ ಹಾಕಿ ಎಂದ ಸಿದ್ಧರಾಮಯ್ಯ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ತಾಯಿ ಮತ್ತು ದಿ. ಶಾಸಕ ಎಂ. ಸಿ. ಮನಗೂಳಿ ಅವರ ಪತ್ನಿ ಸಿದ್ದಮ್ಮ ಮನಗೂಳಿ ಇಳಿ ವಯಸ್ಸಿನಲ್ಲಿ ತಮ್ಮ ಸೆರಗನ್ನು ಚಾಚಿ ಮತದಾರರಿಂದ ಮತಭಿಕ್ಷೆ ಕೇಳಿದ ಪ್ಸಸಂಗ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ.

ಸಿಂದಗಿ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದಮ್ಮ ಮನಗೂಳಿ ಮಾಜಿ ಮುಖ್ಯಮಂತ್ರಿ ಎಸ್.ಸಿದ್ಧರಾಮಯ್ಯ ಸಮ್ಮುಖದಲ್ಲಿ ತಮ್ಮ ಮಗ ಅಶೋಕ ಮನಗೂಳಿ ಪರ ಸೆರಗನ್ನು ಒಡ್ಡಿ ಮತಯಾಚಿಸಿದರು.

ಇದಕ್ಕೂ ಮುನ್ನ ಬಹಿರಂಗ ಸಭೆಯನ್ನು ಉದ್ದೇಶಿ ಮಾಜಿ ಮುಖ್ಯಮಂತ್ರಿ ಎಸ್.ಸಿದ್ಧರಾಮಯ್ಯ ಭಾಷಣ ಮಾಡಿದರು.  ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆಹಾರ ಸಚಿವ ಉಮೇಶ ಕತ್ತಿ ಸೇರಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸದರಿ.ು

ಬಿಜೆಪಿಯವರು ನೀಡುವ ದುಡ್ಡು ತೆಗೆದುಕೊಂಡು ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಮತದಾರರಿಗೆ ಸಲಹೆ ನೀಡಿದ ಅವರು, ಕಾಂಗ್ರೆಸ್ ಅಬ್ಯರ್ಥಿ ಸೋಲಿಸಲು ಮುಸ್ಲಿಂ ಅಬ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ.  ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ.  ಬಿಜೆಪಿ ಹಾಗೂ ಜೆಡಿಎಸ್ ಗೆ ಯಾವುದೇ ವ್ಯತ್ಯಾಸ ಇಲ್ಲ.  ಬಿಜೆಪಿಯ ಬಿ ಟೀಮ್ ಜೆಡಿಎಸ್.  ಕಾಂಗ್ರೆಸ್ ಗೆ ಮತ ಹಾಕಿ ಅಶೋಕ ಮನಗೂಳಿ ಅವರಿಗೆ ಮತ ಕೊಡಿ ಎಂದು ಹೇಳಿದರು.

 

ಬಿಜೆಪಿಯವರು ದುಡ್ಡು ಹಂಚತಾರ ಅದಕ್ಕೆ ಬಲಿಯಾಗಬೇಡಿ.  ಅವರಪ್ಪನ ಮನೆಯಿಂದ ದುಡ್ಡು ತರಲ್ಲ, ಅದನ್ನು ತಗೊಳ್ಳಿ  ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿದ ಅವರು, ಬಡವರಿಗೆ ನೀಡಲಾಗುತ್ತಿದ್ದ ಏಳು ಕೆಜಿಯಿಂದ 5 ಕೆಜಿ ಅಕ್ಕಿ ಇಳಿಸಿದ್ದು ಬಿಜೆಪಿಯವರು..  ಈ ಕುರಿತು ನಾನು ಮಿಸ್ಟರ್ ಯಡಿಯೂರಪ್ಪ ಗೆ ಹೇಳಿದೆ.  ಆಗ ಯಡಿಯೂರಪ್ಪ ಹೇಳಿದಾ ದುಡ್ಡಿಲ್ಲ, ಆಗ ನಾನು ಯಡಿಯೂರಪ್ಪ ಗೆ ಹೇಳಿದೆ ದುಡ್ಡಿಲ್ಲ ಎಂದರೆ ಕುರ್ಚಿ ಬಿಟ್ಟು ಇಳಿ ಎಂದು ಹೇಳಿದೆ.  ನಾನು ಲಾಕ್ ಡೌನ್ ಆದ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗುತ್ತಿದೆ, 10 ಕೆಜಿ ಅಕ್ಕಿ , 10 ಸಾವಿರ ಕೊಡಿ ಎಂದರು ಯಡಿಯೂರಪ್ಪ ಜಪ್ಪಯ್ಯ ಅನಲಿಲ್ಲ.  ಒಂದು ವೇಳೆ ನಮ್ಮ ಸರ್ಕಾರ ಇದ್ದರೆ 10 ಕೆಜಿ ಅಕ್ಕಿ ಜೊತೆಗೆ 10 ಸಾವಿರ ಕೊಡುತ್ತಿದ್ದೆ.  ಈ ಬಾರಿ ಅಶೋಕ ಮನಗೂಳಿ ಗೆಲ್ಲಿಸಿ, ಮುಂದಿನ ಚುನಾವಣೆಯಲ್ಲಿ ನಾವೇ ಗೆದ್ದು ಬರುತ್ತೇವೆ.  10 ಕೆಜಿ ಅಕ್ಕಿ ನಾವು ಕೊಡುತ್ತೇವೆ ಎಂದು ಅವರು ಹೇಳಿದರು.

 

 

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ 5 ಕೆಜಿ ಸಾಕು ಎಂದು ಹೇಳುತ್ತಾರೆ.  ಮಿಸ್ಟರ್ ಉಮೇಶ ಕತ್ತಿ, ನಿನಗೆ ಸುಗರ್ ಬಂದಿದೆ ನೀನು ಅಕ್ಕಿ ತಿನ್ನಲ್ಲ, ಬಡವರಿಗೆ ಉಪಯೋಗವಾಗತ್ತೆ.  ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಅವರು ಹೇಳಿದರು.

ಸಿಂದಗಿ ವಿಧಾನ ಸಭೆಗೆ ಉಪಚುನಾವಣೆ ನಡೆಯುತ್ತಿದೆ‌.  ಈ ಚುನಾವಣೆ ನಾವು ಯಾರೂ ಬಯಸಿರಲಿಲ್ಲ.  ಎಂ ಸಿ ಮನಗೂಳಿ ಅವರ ನಿಧನದಿಂದ ಈ ಚುನಾವಣೆ ನಡೆಯುತ್ತಿದೆ.  ಮನಗೂಳಿ ಅವರು ನನಗೆ ಬಹಳ ಆತ್ಮೀಯರು.  ನನ್ನೊಂದಿಗೆ ಅವರು ಬಹಳ ಹತ್ತಿರದ ಒಡನಾಟ ಇಟ್ಕೊಂಡಿದ್ದರು.  ಜೆ ಎಚ್ ಪಟೇಲ ಕಾಲದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದರು.  ಸಿಂದಗಿ ಪಟ್ಟಣದ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಕೊಡುವಂತೆ ನನಗೆ ಹೇಳಿದ್ದರು.  ಆ ಬಳಿಕ ಕುಡಿಯುವ ನೀರಿನ ಯೋಜನೆ 7 ಕೋಟಿ ಮಂಜೂರು ಮಾಡಿ ಕೊಟ್ಟಿ.  ಯಾವುದೇ ಯೋಜನೆ ಹಾಕಿಕೊಂಡರೆ ಅದನ್ನು ಸಾಧಿಸುವ ಛಲ ಅವರಲ್ಲಿ ಇತ್ತು.  ಅವರು ಸಾಯುವ ಮುಂಚೆ ನನ್ನ ಮನೆಗೆ ಬಂದು ನನ್ನ ಮಗ ಅಶೋಕ ಮನಗೂಳಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.  ನನಗೂ ಡಿ. ಕೆ. ಶಿವಕುಮಾರ ಹಾಗೂ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ರಾಜು ಆಲಗೂರ ಅವರ ಮುಂದೆ ಸಹಿತ ಹೇಳಿದ್ದರು.  ಬಳಿಕ ಅಶೋಕ ಮನಗೂಳಿ ಕೂಡಾ ನನಗೆ ಭೇಟಿ ಆಗಿದ್ದರು.  ಮಾಜಿ ಶಾಸಕ ಮತ್ತು ವಿಜಯಪುರ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶರಣಪ್ಪ ಸುಣಗಾರ ಅವರು ಸಹಿತ ಈ ಭಾಗದ ಕಾಂಗ್ರೆಸ್ ಪ್ರಭಲ ಆಕಾಂಕ್ಷಿಯಾಗಿದ್ದರು.  ಅವರ ಮನವೊಲಿಸಿ ನಾವು ಅಶೋಕ ಮನಗೂಳಿ ಅವರಿಗೆ ಟಿಕೇಟ್ ಕೊಟ್ಟೆದ್ದೇವೆ.  ಸೂರ್ಯ ಪೂರ್ವದಲ್ಲಿ ಹುಟ್ಟುವದು ಎಷ್ಟು ಸತ್ಯವೋ.  ಅಷ್ಟೇ ಅಶೋಕ ಮನಗೂಳಿ ಗೆಲವು ಕೂಡಾ ಅಷ್ಟೇ ಸತ್ಯ ಎಂದು ಅವರು ಹೇಳಿದರು.

 

ಮಿಸ್ಟರ್ ಬಸವರಾಜ್ ಬೊಮ್ಮಾಯಿ ಒಂದು ಕೆಲಸ ಮಾಡಿಲ್ಲ.  ಕೆಲಸ ಮಾಡಿದ್ದರೆ ತಾನೇ ಹೇಳಬೇಕು.  ಒಂದೇ ವೇದಿಕೆಯ ಮೇಲೆ ಬನ್ನಿ ಸಣ್ಣಚರ್ಚೆ ಮಾಡೋಣ.  ಮಾಡಿರುವ ಕೆಲಸ ಹೇಳಬೇಕು ಎಂದರೆ ಧಮ್ ಬೇಕಲ್ಲ.  ಬಸವರಾಜ ಬೊಮ್ಮಾಯಿ ಸುಳ್ಳು ಹೆಳೋದು, ಹೀಗಾಗಿ ಚರ್ಚೆಗೆ ಬರುತ್ತಿಲ್ಲ.  ಇವರ ಸರಕಾರ ಬಂದ ಮೇಲೆ ನಮ್ಮ ಶಾಸಕರುಗಳಿಗೆ ಮತಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಕ್ಕಾಗಲಿಲ್ಲ.  ಪ್ರತಿ ವರ್ಷ 3 ಲಕ್ಷ ಮನೆ ನಾನು ಮಂಜೂರು ಮಾಡಿದ್ದೆ.  ನಾವು ಅರ್ದ ಕಟ್ಟಿದ ಮನೆಗಳಿಗೆ ದುಡ್ಡು ಕೊಡೋಕೆ ಇವರಿಂದ ಆಗುತ್ತಿಲ್ಲ.  ಮನೆ ಇಲ್ಲದವರಿಗೆ ಹಣ ಕೊಡೋದು ಲಾಕ್ ಮಾಡಿದರೆ, ಬಸವರಾಜ ಬೊಮ್ಮಾಯಿ ನಿಮಗೆ ಲಾಕ್ ಮಾಡುತ್ತಾರೆ.  ಬಡವರ ರೈತರ ವಿರೋಧಿ ಈ ಸರಕಾರ ತೊಲಗಿಸಬೇಕು.  ಎಲ್ಲ ಮಂತ್ರೀಗಳು ಹಣ ತಗೊಂಡು ಬಂದು ಇಲ್ಲಿ ಕೂತಿದ್ದೀರಿ.  ಕೊರೋನಾ ಸಂದರ್ಭದಲ್ಲಿ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರು ಯಾರಿಗೂ ಕೊಡಲಿಲ್ಲ ಎಂದು ಅವರು ಆರೋಪಿಸಿದರು.

 

ಕೊರೋನಾ ದಲ್ಲಿ 4 ಲಕ್ಷ ಜನ ಸತ್ತು ಹೋದರೆ, ಆದರೆ 40 ಸಾವಿರ ಜನ ಮಾತ್ರ ಸತ್ತರು ಎಂದು ಅವರು ವಾಗ್ದಾಳಿ ನಡೆಸಿದರು.  ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೇ ಸತ್ತರೆ 3 ಜನ ಸತ್ತರು.  ಕಾಂಗ್ರೆಸ್ ಪಕ್ಷದಿಂದ ಒಂದೋಂದು ಲಕ್ಷ ಪರಿಹಾರ ಕೊಟ್ಟಿದ್ದೇವೆ.  ನರೇಂದ್ರ ಮೋದಿ ಅಚ್ಚೇದಿನ ಆಯೇಂಗೇ ಎಂದು ಹೇಳುತ್ತಾ ಹೋದರು.  ಯಾವುದೇ ಅಚ್ಚೇದಿನ ಬರಲಿಲ್ಲ.  ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ರೂ. 47 ಇದ್ದದ್ದು ಇಂದು ರೂ. 111 ಆಗಿದೆ.  ಗ್ಯಾಸ್ ಬೆಲೆ ರೂ. 416 ಇದ್ದದ್ದು ಇಂದು ರೂ. 960, ಅಡುಗೆ ಎಣ್ಣೆ ರೂ. 40 ಇದ್ದದ್ದು ಇಂದು ರೂ. 200 ಆಗಿದೆ.  ಸಾಮಾನ್ಯ ಜನರ ರಕ್ತ ಹಿಂಡಬೇಡಿ ಎಂದರೆ, ರಸ್ತೆ ಅಭಿವೃದ್ಧಿ ಮಾಡಬೇಕು, ಹಿಂದಿನ ಸರಕಾರ ಸಾಲ‌ಮಾಡಿತ್ತು ಎಂದು ಹೇಳುತ್ತಾರೆ.  ಇಂದು ಡಿಸೇಲ್ ಮೇಲೆ ತೆರಿಗೆ 10 ಪಟ್ಟು ಜಾಸ್ತಿ ಆಯಿತು.  ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ತಾಯಿ ಮತ್ತು ದಿ. ಎಂ. ಸಿ. ಮನಗೂಳಿ ಅವರ ಪತ್ನಿ ಸಿದ್ದಮ್ಮ ಮನಗೂಳಿ ತಮ್ಮ ಸೆರಗುನ್ನು ಒಡ್ಡಿ ಮತದ ಭಿಕ್ಷೆ ಕೇಳಿದರು.  ತಮ್ಮ ಮಗ ಅಶೋಕ ಮನಗೂಳಿ ಅವರಿಗೆ ಮತ ಹಾಕುವಂತೆ ಬಹಿರಂಗ ಸಭೆಯಲ್ಲಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು ಮತ್ತು ಇತರ ಮಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌