ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಇಂದು ಸಂಜೆಯ ವರೆಗೆ ಫುಲ್ ಫ್ರೀಡಂ ಇದೆ. ಅವರು ಏನೇನು ಹೇಳ್ತಾರೋ ಕೇಳಕೊಂಡು ಇರ್ತಿವಿ. ಏನಾದ್ರೂ ಮಿಸ್ಟೇಕ್ ಇದ್ರೆ ತಿದ್ಕೊತಿವಿ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಎಚ್. ಡಿ. ಕುಮಾರಸ್ವಾಮಿ ಅವರ ಬಗ್ಗೆ ಜಾಸ್ತಿ ಮಾತಾಡಲ್ಲ. ನಾನು ಕೂಡ ಅವರ ತಂದೆಯವರ ಗರಡಿಯಲ್ಲಿ ಬೆಳೆದವನು ಎಂದು ತಿಳಿಸಿದರು.
ಜಮೀರ ಅಹಮ್ಮದ ಖಾನ್ ಬಿಜೆಪಿ ಬಗ್ಗೆ ಕೀಳು ಮಟ್ಟದ ಪದ ಬಳಕೆ ವಿಚಾರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನಿಸಿದ ಅವರು, ಆ ರೀತಿಯ ಕೀಳು ಪದ ಬಳಸುವುದು ಸರಿಯಲ್ಲ. ನಾನು 40 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ಈ ರೀತಿ ಕೀಳು ಪದ ಬಳಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಮಾಜಿ ಸಚಿವ ಜಮೀರ ಅಹ್ಮದ ಖಾನ್ ಅವರು ಆಡಿರುವ ಭಾಷೆ, ಬಳಸಿರುವ ಪದ ಅವರ ವ್ಯಕ್ತಿತ್ವ ಹಾಗೂ ಅವರ ನಡುವಳಿಕೆಯನ್ನು ತೋರಿಸತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಈ ರೀತಿಯ ಪದ ಬಳಕೆ ಅವರಿಗೆ ಎಷ್ಟರ ಮಟ್ಟಿಗೆ ಸಂಸ್ಕಾರ ಇದೆ ಎಂಬುದನ್ನು ತೋರಿಸುತ್ತದೆ. ಜಮೀರ ಅಹ್ಮದ ಖಾನ್ ಅವರಿಗೆ ಇನ್ನು ಚಿಕ್ಕ ವಯಸ್ಸು. ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದು ಅವರು ಕಿವಿಮಾತು ಹೇಳಿದರು.
ಇಂದು ಕೊನೆ ದಿನ ರೋಡ್ ಶೋ ಇದೆ. ಆಲಮೇಲದಲ್ಲಿ 16 ಮತಗಟ್ಟೆಗಳಿವೆ. 14 ಸಾವಿರ ಜನ ಮತದಾರರು ಇದ್ದಾರೆ. ಈ ಸಲ ಅವರೆಲ್ಲರೂ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.
ಆಲಮೇಲ 50 ವರ್ಷದ ಆದರೂ ಮೇಲ್ದರ್ಜೆಗೆ ಬರಲ್ಲ. ಆದರೆ, ನಾವು ಬಿಜೆಪಿಯವರು ಆಲಮೇಲ ತಾಲೂಕನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಅವರು ಹೇಳಿದತು.
ಸಿಂದಗಿ ವಿಧಾನಸಭೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಟ್ಟಿದಾರೆ. ವೃದ್ಧರಿಗೆ ಮಾಶಾಸನ ಹೆಚ್ಚಿಗೆ ಮಾಡಿದಾರೆ. ಇವಿಷ್ಟೆ ಸಾಕು ಬಿಜೆಪಿ ಗೆಲ್ಲುವುದಕ್ಕೆ ಎಂದು ವಿ.ಸೋಮಣ್ಣ ಹೇಳಿದರು.
ಸಿಂದಗಿ ಮತಕ್ಷೇತ್ರದ ಹೆಣ್ಣುಮಕ್ಕಳು ಪಾತ್ರೆ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ. ಬೈ ಎಲೆಕ್ಷನ್ ಮುಗಿದ ಬಳಿಕ ನಾವುಬಮೂರ್ನಾಲ್ಕು ಜನ ಸಚಿವರು ಸಿಂದಗಿ ಮತಕ್ಷೇತ್ರಕ್ಕೆ ಬರುತ್ತೇವೆ. ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೆ ಸಿಂದಗಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.