ರಾಜಕೀಯವಾಗಿ ಎಂಥವರನ್ನು, ಎಂಥ ಸಮಾಜವನ್ನು ಬೆಳೆಸಬೇಕು ಎಂಬುದನ್ನು ಕುಮಾರಸ್ವಾಮಿ ಇನ್ನು ಮುಂದಾದರೂ ಕಲಿಯಲಿ- ಶಾಸಕ ಯತ್ನಾಳ

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಅವರ ಒಂದು ಕಾಲದ ಪರಮಾಪ್ತ ಶಿಷ್ಯ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ ಖಾನ್ ತಿರುಗಿ ಬಿದ್ದಿರುವುದಕ್ಕೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬೈ ಪ್ರಚಾರದಲ್ಲಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಎಂಥವರನ್ನು ಮತ್ತು ಎಂಥ ಸಮಾಜದವರನ್ನು ಬೆಳೆಸಬೇಕು ಎಂಬುದನ್ನು ಇನ್ನು ಮುಂದಾದರೂ ಕಲಿಯಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿವಿಮಾತು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಈಗ ಜಮೀರ ಅಹ್ಮದ ಖಾನ್ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.  ಜಮೀರ ಅಹ್ಮದ ಖಾನ್ ಅಂಥವರನ್ನು ರಾಜಕೀಯವಾಗಿ ಬೆಳೆಸಿದವರೇ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ.  ಹೀಗಾಗಿ ಅವರು ಇನ್ನು ಮುಂದಾದರೂ ಒಳ್ಳೆಯವರನ್ನು ಒಳ್ಳೆಯದನ್ನು ಮಾಡುವವರ್ನು ಬೆಳೆಸುವ ಕೆಲಸ ಮಾಡಲಿ ಎಂದು ಹೇಳಿದರು.

ನಾನು ಎಚ್. ಡಿ. ಕುಮಾರಸ್ವಾಮಿ ಅವರ ಚರಿತ್ರೆ ಬಹಿರಂಗ ಪಡಿಸುವುದಾಗಿ ಹೇಳಿಲ್ಲ.  ನಾನು ಬ್ಲ್ಯಾಕ್ ಮೇಲೆ ತಂತ್ರ ಮಾಡಲ್ಲ.  ಅವರೂ ರಾಜಕೀಯವಾಗಿ ಯಾವ ಹೋರಾಟ ಮಾಡುತ್ತಾರೆ ಮಾಡಲಿ.  ಯಾವುದೇ ರೀತಿಯ ಗೊಂದಲ ಸೃಷ್ಛಿಸುವ ರಾಜಕೀಯ ಮಾಡುವುದು ಬೇಡ ಬೇಡ ಎಂದು ವಿನಂತಿ ಮಾಡುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಾನು ಯಾವಾಗಲು ವೈಯಕ್ತಿಕವಾಗಿ ಮಾತನಾಡಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ಸಿನವರು ಅಭಿವೃದ್ಧಿ, ಬಗ್ಗೆ ಮಾತನಾಡಲಿ,  ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಮಾತನಾಡಲಿ.  ಅವರು ಆರ್ ಎಸ್ ಎಸ್ ಮತ್ತು ಇತರರ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ ಮೇಲೆ ಬಿಜೆಪಿಯವರು ಮಾತನಾಡಿದ್ದಾರೆ.  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ ಗಾಂಧಿ ಅವರಿಂದಲೇ ವೈಯಕ್ತಿಕ ಆರೋಪಗಳು ಆರಂಭವಾಗಿವೆ.  ಮೌತ್ ಕಾ ಸೌದಾಗರ್ ಎಂದು ಪ್ರಧಾನಿಯವರ ಬಗ್ಗೆ ಅವರು ಹೇಳಿದರು.  ಚಹಾ ಮಾರುವವನು ದೇಶ ನಡೆಸಬೇಕಾ ಎಂದು ಅವರು ಪ್ರಶ್ನಿಸಿದರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿನವರುೇ ಇದನ್ನು ಮೊದಲ ಆರಂಭಿಸಿದ್ದಾರೆ.  ವಿಶ್ವ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ನಡೆಸಿದ್ದರಿಂದ ಅನಿವಾರ್ಯವಾಗಿ ಬಿಜೆಪಿ ಕಾರ್ಯಕರ್ತರು ಅನಿವಾರ್ಯವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದಾರೆ.  ವೈಯಕ್ತಿಕ ಟೀಕೆಯನ್ನು ಕಾಂಗ್ರೆಸ್ಸಿನವರೇ ಮೊದಲು ಪ್ರಾರಂಭ ಮಾಡಿದ್ದಾರೆ.  ಕಾಂಗ್ರೆಸ್ಸಿನವರು ಮೊದಲು ಮಾತನಾಡವವುದನ್ನು ಬಿಡಲಿ.  ಬಿಜೆಪಿಯವರೂ ಬಿಡುತ್ತಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಮಾಜಿ ಸಚಿವ ಜಮೀರ ಅಹ್ಮದ ಖಾನ್ ಮತ್ತು ಎ ಐ ಎಂ ಐ ಎಂ ಸಂಸ್ಥಾಪಕ ಅಸಾದೊದ್ದಿನ್ ಓವೈಸಿ ಹದ್ದು ಮೀರಿ ಮಾತನಾಡುತ್ತಿದ್ದಾರೆ.  ನಿನ್ನೆಯಷ್ಟೇ ಜಮೀರ್ ಅಹ್ಮದ್ ಖಾನ್ ಅವರು ಕುಮಾರಸ್ವಾಮಿ ಮತ್ತು ದೇವೇಗೌಡರ ಬಗ್ಗೆ ರಾಜಕೀಯ ಇತಿ ಮಿತಿ ಬಿಟ್ಟು ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು,  ಈ ರೀತಿ ಉದ್ದಟತನದ ಮಾತನಾಡಿದರೆ, ಅದಕ್ಕೆ ಉತ್ತರ ಕೊಡುವ ಶಕ್ತಿ ನಮಗೆ ಇದೆ.  ಬಿಜೆಪಿ ಮತ್ತು ಹಿಂದುಗಳ ವಿರುದ್ಧ ಮಾತನಾಡುವವರಿಗೆ ಇದು ನನ್ನ ಕೊನೆಯ ಎಚ್ಚರಿಕೆ ಎಂದು ತಿಳಿಸಿದರು.

ಈ ಹಿಂದೆ ಹಿಂದೂಗಳನ್ನು ನಾಶ ಮಾಡುವುದಾಗಿ ಹೇಳಿದ್ದರು. ಅವರು ಯಾವ ಧಾಟಿಯಲ್ಲಿ ಮಾತನಾಡುತ್ತಾರೋ ಅದೇ ದಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ.  ನಾವೆಲ್ಲ ರಾಷ್ಟ್ರಭಕ್ತರು.  ಬಿಜೆಪಿಯಲ್ಲಿ ಯಾವುದೇ ಭೇದ ಭಾವವಿಲ್ಲ.  ಭಾರತ ಮಾತೆಗೆ ಜೈಕಾರ ಹಾಕುವವರು ನಾವು.  ಇವರಂತೆ ದಿನಕ್ಕೊಬ್ಬರಿಗೆ ಜೈಕಾರ ಹಾಕುವುದಿಲ್ಲ.  ಜಮೀರ ಅಹ್ಮದ್ ಖಾನ್ ಈ ಹಿಂದೆ ದೇವೇಗೌಡರಿಗೆ ತಂದೆ ತಾಯಿ ಎನ್ನುತ್ತಿದ್ದರು.  ಈಗ ಸಿದ್ಧರಾಮಯ್ಯ ಅವರಿಗೆ ತಂದೆ ತಾಯಿ ಎನ್ನುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌