ವಿಜಯಪುರ: ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹೇಳುತ್ತಿರುವುದನ್ನು ಕೇಳಿ ಮುಸ್ಲಿಂ ಬಾಂಧವರೂ ಬೇಸತ್ತು ಹೋಗಿದ್ದಾರೆ. ಇದೊಂದು ಬಿಟ್ಟರೆ ಬೇರೇನೂ ಇಲ್ಲವೇ? ಹಾಡಿದ್ದು ಹಾಡೋ ಕಿಸಬಾಯಿ ದಾಸ ಎಂಬ ಗಾದೆ ಮಾತನ್ನು ಸಿದ್ಧರಾಮಯ್ಯ ಅವರಿಗೆ ಅಳವಡಿಸಿಕೊಳ್ಳಬಹುದು. ಅಳುವಡಿಸಿಕೊಳ್ಳಬಹುದು ಸಿದ್ಧರಾಮಯ್ಯ ಅವರಿಗೆ
ಸಿದ್ಧರಾಮಯ್ಯ ಕೇಳಿ ಕೇಳಿ ಕೇಳಿ ಮುಸಲ್ಮಾನ ಬಾಂಧವರೂ ಬೇಸತ್ತು ಹೋಗಿದ್ದಾರೆ.
ನಮಗೆ ಬೇಸ್ ಇಲ್ಲದಿದ್ದರೂ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಕಳೆದ ಆರು ತಿಂಗಳಿಂದ ಮನೆ ಮನೆಗೆ ಹಳ್ಳಿಗೆ ಭೇಟಿ ನೀಡಿದ್ದಾರೆ. ಮೊನ್ನೆ ಹಳ್ಳಿಗೆ ಹೋಗಿದ್ದಾಗ ಜನಬೆಂಬಲ ವ್ಯಕ್ತವಾಗಿದೆ. ಅಲ್ಲಿಯೂ ಕೂಡ ಜನತೆಯ ಭಾವನೆಗಳು ನಮ್ಮ ಪಕ್ಷದ ಪರವಾಗಿವೆ. ಜನ ನಾನು ಸಿಎಂ ಆಗಿದ್ದಾಗ ಮಾಡಿದ ಸಾಲಮನ್ನಾ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಲ್ಲೂ ಸಹ ಜನತೆಯ ಭಾವನೆಗಳು ನಮ್ಮ ಪಕ್ಷದ ಪರ ಇವೆ. ಕೇವಲ 1000 ಅಥವಾ 1200 ಮತಗಳು ಬರುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತಗಳು ಬರಲಿವೆ. 2023ಕ್ಕೆ ಹಾನಗಲ್ ಸೇರಿದಂತೆ 123 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ಈಗ ವೇದಿಕೆ ಸಿದ್ಧವಾಗುತ್ತಿದೆ. ಎಂದು ಹೇಳಿದರು.
ಈಗಾಗಲೇ ಒಂದು ಕಡೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮತ್ತೋಂದು ಕಡೆ ನಾನು, ಇನ್ನೋಂದು ಕಡೆ ಹಾಸನ ಜೆಡಿಎಸ್ ಸಂಸದ ಪ್ರಜ್ವಲ ರೇವಣ್ಣ, ಹಾಲಿ ಮತ್ತು ಮಾಜಿ ಶಾಸಕರು ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿದ್ದೇವೆ. ದೇವೇಗೌಡರ ಕಾಲದಿಂದ ನಾನು ಸಿಎಂ ಆಗಿದ್ದ ಕಡಿಮೆ ಅವಧಿಯಲ್ಲಿಯೂ ಕೂಡ ಸಿಂದಗಿ ಮತಕ್ಷೇತ್ರಕ್ಕೆ ಉತ್ತಮ ಕೆಲಸಗಳು ಆಗಿವೆ. ಈ ಯೋಜನೆಗಳನ್ನು ಜನ ನೆನಪಿಸುತ್ತಾರೆ. ದೇವೇಗೌಡರಿಂದ ನಾವು ಇವತ್ತು ಅನ್ನು ಊಟ ಮಾಡುವ ಪರಿಸ್ಥಿತಿಯಲ್ಲಿದ್ದೇವೆ. ಇಲ್ಲದಿದ್ದರೆ ಬೆಳೆಯನ್ನೇ ಬೆಳೆಯದ ಸಾಧ್ಯವಾಗಲದೇ ದೇಶಾಂತರ ಹೋಗುವ ಪರಿಸ್ಥಿತಿ ಇತ್ತು. ಇಂದು ನೆಮ್ಮದಿಯಿಂದ ಬದಕುತ್ತಿದ್ದೇವೆ. ಅಂಥ ಉತ್ತಮ ಕೆಲಸ ಮಾಡಿರುವ ಎಚ್. ಡಿ. ದೇವೇಗೌಡರ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಸಿಂದಗಿ ತಾಲೂಕಿನ ಯಾವುದೇ ತಾಲೂಕಿಗೆ ಹೋದರೂ ಜಾತಿ ಭೇದಭಾವ ಇಲ್ಲದೇ ಜನ ಹೇಳುತ್ತಿದ್ದಾರೆ.
ನಿನ್ನೆ ಕೈಯಲ್ಲಿ ಬಿಜೆಪಿ ಬಾವುಟ ಹಿಡಿದ ಯುವಕರು ನನ್ನ ಕಾರನ್ನು ನಿಲ್ಲಿಸಿ, ನೀವು ಇಲ್ಲಿದ್ದೀರಿ ಎಂದು ತಮ್ಮ ಎದೆಯನ್ನು ಮುಟ್ಟಿ ಹೇಳಿದ್ದಾರೆ. ಇದು ನಾವು ಮಾಡಿರುವ ಕೆಲಸವನ್ನು ಈ ಭಾಗದ ಜನ ನೆನಪಿಸುವ ರೀತಿಯಾಗಿದೆ. ಇದು ಒಂದು ವಿಶೇಷ ರೀತಿಯ ಕ್ಷೇತ್ರ. ಕಾಂಗ್ರೆಸ್ ಮತ್ತು ಬಿಜೆಪಿಯವರು ಏನೇ ಅಪಪ್ರಚಾರ ಮಾಡಿಕೊಳ್ಳಲಿ. ಯಾವುದೇ ರೀತಿಯ ಆಮಿಷಗಳನ್ನು ಒಡ್ಡಲಿ. ಈ ಕ್ಷೇತ್ರದಲ್ಲಿ ಜೆಡಿಎಸ್ ಬೇರು ಗಟ್ಟಿಯಾಗಿದೆ. ಈ ಕ್ಸೇತ್ರದಲ್ಲಿ ಗೆಲ್ಲುವ ಎಲ್ಲ ರೀತಿಯ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.
ಇಂದು ಸಂಜೆಯವರೆಗೂ ಕುಮಾರಸ್ವಾಮಿ ಅವರಿಗೆ ಫ್ರೀಯಾಗಿ ಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅವರ ಆಟ ಎಂದರೆ ದುಡ್ಡು ಹಂಚುವ ಆಟವಾ ಎಂಬುದು ಗೊತ್ತಾಗಿಲ್ಲ. ನಿಮ್ಮ ಆಟ ಚುನಾವಣೆಗೆ ಅಷ್ಟೇ ಸೀಮಿತ ಮಾಡಿಕೊಳ್ತೀರೋ ಅಥವಾ ಸುಳ್ಳು ಜಾಹೀರಾತಿನಂತೆ ಮಾಡುತ್ತೀರೋ ಎಂದು ಪ್ರಶ್ನಿಸಿದ ಎಚ್. ಡಿ. ಕುಮಾರಸ್ವಾಮಿ, ಬೈ ಎಲೆಕ್ಷನ್ ಗೊತ್ತಿದ್ದರೂ ಇತ್ತ ಕಡೆ ಸುಳಿಯದ ಸಚಿವರು ಈಗ ಬಂದಿರುವುದ ಔಚಿತ್ಯವೇನು ಎಂದು ಪ್ರಸ್ನಿಸಿದರು.