ವಿಜಯಪುರ: ರಾಜ್ಯದಲ್ಲಿ ವರ್ಗಾವಣೆ ದಂಧೆ ಜೋರಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಿಜವಾದ ಬಣ್ಣ ಈಗ ಬಯಲಾಗಿದೆ. ಕಾಂಗ್ರಸ್ ಮತ್ತು ಬಿಜೆಪಿ ತಮಗೆ ಸಮಾಂತರ ವೈರಿಗಳಾಗಿವೆ ಎಂ್ಉ ಜೆಡಿಎಸ್ ನಾಯಕರಿ ಹೇಳಿದ್ದಾರೆ. ಹಾಗಾ್ರೆ ಸಮಾನಾಂತರ ವೈರಿಗಳಿದ್ದರೆ ಜೆಡಿಎಸ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾಕೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ? ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಯಾಕೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿತು? ಜನರು ಮತ್ತು ಅಲ್ಪಸಂಖ್ಯಾತರು ಇವರನ್ನುಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಜೆಡಿಎಸ್ ನವರು ಎಷ್ಟೇ ನಾಟಕ ಮಾಡಿದರೂ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಜೆಡಿಎಸ್ ಡೆಪಾಸಿಟ್ ಉಳಿಯುವುದಿಲ್ಲ. ಜೆಡಿಎಸ್ ನ ನಿಜವಾದ ವಿಚಾರಗಳು, ಯಾರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಜನರಿಗೆ ಅರ್ಥವಾಗಿವೆ. ಯಾವ ರೀತಿ ಜಾತ್ಯತೀತ ಶಕ್ತಿಗಳನ್ನು ದುರ್ಬಲ ಮಾಡಲು ಪ್ರಯತ್ನಿಸಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರಿಗೆ ಹೇಳಿಕೆ ನೀಡುವ ಯಾವುದೇ ನೈತಿಕತೆ ಇಲ್ಲ. ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಿ. ಟಿ. ರವಿ ಏನು ಮಾತನಾಡಿದ್ದಾರೆ? ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ರೂ. 60, ರೂ. 70 ಇದ್ದಾಗ ಬಹಳ ಬೆಲೆ ಏರಿಕೆಯಾಗಿದೆ ಎಂದು ಹೇಳಿ ದೊಡ್ಡ ಮಟ್ಟದ ಹೋರಾಟ ಮಾಡಿದವರು
ಈಗ ಜನರ ಜೇಬಿಕೆ ಕನ್ನ ಹಾಕಿ ರಕ್ತ ಹೀರುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.
ಬೆಲೆ ಏರಿಕೆ ವಿರೋಧಿಸಿ ಈ ಹಿಂದೆ ನಡೆಸಿದ ಪ್ರತಿಭಟನೆ ಬಗ್ಗೆ ಸಿ. ಟಿ. ರವಿ ಯಾಕೆ ಮಾತನಾಡುತ್ತಿಲ್ಲ? ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರದ ಪ್ರತಿವರ್ಷ ನಮ್ಮ ಮೇಲೆ ಅನ್ಯಾಯ ಮಾಡಿ 15 ನೇ ಹಣಕಾಸು ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ರಾಜ್ಯಕ್ಕೆ ದ್ರೋಹ ಮಾಡಿದೆ. ಮೋದಿ ಸರಕಾರ ರೂ. 30 ರಿಂದ 40 ಸಾವಿರ ಕೋಟಿ ರೂ ಮೋಸ ಮಾಡಿದೆ. ಇದರ ಬಗ್ಗೆ ಯಾಕೆ ಸಿ ಟಿ ರವಿ ಮಾತನಾಡುತ್ತಿಲ್ಲ? ಇವರೆಲ್ಲ ಅಂಜಬುಜುಕರು ಸಂಸದರು, ಸಿ ಟಿ ರವಿ ಇವರೆಲ್ಲ ಅಂಜಬುರುಕರು. ಇವರು ಕೇಂದ್ರಕ್ಕೆ ಹೋಗಿ ಮೋದಿ ಅವರ ಬಳಿ ಮಾತನಾಡಲು ಧೈರ್ಯವಿಲ್ಲ. ಇಂಥವರಿಗೆ ಬೇರೆಯವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಅವರು ಪ್ರಶ್ನಿಸಿದರು.
ಸಿಂದಗಿ ಬೈ ಎಲೆಕ್ಷನ್ ಜವಾಬ್ದಾರಿ ನನಗೆ, ಧ್ರುವ ನಾರಾಯಣ ಅವರಿಗೆ ನೀಡಿದ್ದರು. ನಾಮಪತ್ರ ಸಲ್ಲಿಕೆಯ ನಂತರ ಸಿಂದಗಿಯಲ್ಲಿಯೇ ಉಳಿದುಕೊಂಡು ಕಾರ್ಯತಂತ್ರ ರೂಪಿಸಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಶೋಕ ಮನಗೂಳಿ ಬೆಂಬಲಿತ ಜೆಡಿಎಸ್ ಕಾರ್ಯಕರ್ತರು ನಡುವೆ ಸಮನ್ವಯ ಸಾಧಿಸಿದ್ದೇವೆ ಎಂದು ಈಶ್ವರ ಖಂಡ್ರೆ ಹೇಳಿದರು.
ಬಿಜೆಪಿಯ ದುರಾಡಳಿತದ ಮಿತಿ ಮೀರಿದೆ. ಜನರಿಗೆ ಆಗುತ್ತಿರುವ ಅನ್ಯಾಯ, ದ್ರೋಹ, ಯುವಕರಿಗೆ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಯಾಗಿ ಬಡವರ ಜೀವನ ದುಸ್ತರ ದುರ್ಬರವಾಗಿದೆ. ಬಿಜೆಪಿ ಸರಕಾರ ಅತೀ ದುರಹಂಕಾರದಿಂದ ದುರ್ವರ್ತೆಯಿಂದ ಅನ್ನದಾತರ ಬಗ್ಗೆ ಒಂದಿಂಚೂ ಕಳಕಳಿಯಿಲ್ಲದೆ ಹಾಡಹಗಲೇ ಲಖಿಂಪುರ ಖೇರಾದಲ್ಲಿ ಕೊಲೆ ಮಾಡಿದ್ದು, ಅದರ ಸಮರ್ಥನೆ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ನ್ಯಾಯ ಕೇಳಲು ಹೋದವರ ಮೇಲೆ ಮೊಕದ್ದಮೆ ಹಾಕುವ ಕೆಲಸ ಮಾಡಿದ್ದಾರೆ. ಈ ಎಲ್ಲ ಘಟನಾವಳಿಗಳಿಂದ, ಮಹಿಳೆಯರಿಗೆ ರಕ್ಷಣೆ ನೀಡಲು ವಿಪಲವಾಗಿರುವುದರಿಂದ ಜನತೆ ಬೇಸತ್ತಿದ್ದಾರೆ ಎಂದು ಅವರು ಹೇಳಿದರು
ರಾಜ್ಯದಲ್ಲಿ ವರ್ಗಾವಣೆ ದಂಧೆಯಾಗಿ ಬಿಟ್ಟಿದೆ.. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪೆಟ್ರೋಲ್ ಮತ್ತು ಡೀಸೇಲ್ ಬೆಲೆ ಕಡಿಮೆಯಾಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು. ರೈತರ ಉತ್ಪನ್ನಗಳಿಗೆ ಬೆಲೆ ಸಿಗಬೇಕು ಎಂದು ಸಿಂದಗಿ ಮತಕ್ಷೇತ್ರದ ಜನ ತೀರ್ಮಾನ ಮಾಡಿದ್ದಾರೆ ಎಂದು ವಿಜಯಪುರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಭಾಲ್ಕಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಮತ್ತು ಕಾಂಗ್ರೆಸ್ ಮುಖಂಡ ಧ್ರುವನಾರಾಯಣ ಉಪಸ್ಥಿತರಿದ್ದರು.