ನನ್ನ ತಲೆಯಲ್ಲಿ ಎನಸೈಕ್ಲೋಪೀಡಿಯಾ ಇದೆ ಎಂದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದೇನು ಗೊತ್ತಾ?

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಭರ್ಜರಿ ಪ್ರಚಾರದ ಬಳಿಕ ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ ವಿಜಯಪುರ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿ ಮಾತನಾಡಿದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದ ಅನೇಕ ಘಟನೆಗಳನ್ನು ಬಹಿರಂಗ ಪಡಿಸಿದ್ದಾರೆ.

ತಮ್ಮ ಜೀವನದ ಯಶೋಗಾಥೆ, ಅನುಭವಿಸಿದ ಕಷ್ಟಗಳನ್ನು ಅವರು ಎಳೆಎಳೆಯಾಹಿ ಬಿಚ್ಚಿಟ್ಟಿದ್ದಾರೆ.

ಜೀವನದಲ್ಲಿ ಹಂತಹಂತವಾಗಿ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ‌ಜೀವನದಲ್ಲಿ ಯಾರಿಗೂ ನಾನು ದ್ರೋಹ ಮಾಡಿಲ್ಲ. ನನಗೆ ದೇವರ ಮೇಲೆ ಭಕ್ತಿ ಇದೆ. ಅದಕ್ಕೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ. ನನ್ನ ಜೊತೆ ಬಹಳಸ್ನೇಹಿತರು ಇದ್ದರು. ಅವರೆಲ್ಲ ಬಿಟ್ಟು ಹೋಗಿದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ನಾನು ಲಿಂಗಾಯಿತರ ವಿರೋಧಿ, ಉತ್ತರ ಕರ್ನಾಟಕದ ವಿರೋಧಿ ಎಂದೆಲ್ಲ ಅಪಪ್ರಚಾರ ಮಾಡಿದ್ದಾರೆ. ಅಪಪ್ರಚಾರ ಮಾಡಿದವರಲ್ಲಿ ಕೆಲವರು ಹೋಗಿದ್ದಾರೆ. ಕೆಲವರು ಬದುಕಿದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಯಾರ ಬಗ್ಗೆ ಚರ್ಚೆಯೂ ಮಾಡುವುದಿಲ್ಲ ಎಂದು ಅವರು ಹೇಳಿದರು

ಎಂಡಿಂಗ್ ಆಫ್ ಲೈಫ್, ವಿಲ್ ಗೋ ಆಲ್ ಕ್ಲೀನ್, ವಿಲ್ ಆನ್ಸರ್, ವಾಟ್ ಡನ್. ಭಾಗ 50 ವರ್ಷದ ಹಿಂದೆ ಹೇಗಿತ್ತು ಎಂಬುದು ನನಗೆ ಗೊತ್ತು. ಯಾರಾರು ಏನು ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ನಾನು ಎರಡು ಬಾರಿ ಮಂತ್ರಿಯಾಗಿ ರಾಜೀನಾಮೆ ಕೊಟ್ಟೆ ಎಂದು ತಿಳಿಸಿದ ಮಾಜಿ ಪ್ರಧಾನಿ, ನನ್ನನ್ನು ಹೊರಗೆ ಹಾಕಿದ್ದರು. ಯಾರು ಏನೂ ಮಾಡೋಕಾಗಲಿಲ್ಲ. ಮತ್ತೆ ಅವರೇ ನನ್ನ ಬಳಿ ಬಂದಿದ್ದರು. ಅದೆಲ್ಲ ವಿಷಯ ಭಗವಂತನ ಆಟದ ಮೇಲೆ ಇದೆ
‌‌ಅದು ಭಗವಂತನ ಆಟ‌. ಅವನು ಆಡಿಸುತ್ತಾನೆ. ಅವನು ಎಷ್ಟು ಕಾಡಿಸ್ತಾನೋ ಅಷ್ಟು ಓಡ್ತಿರ್ತೇವೆ ಅಷ್ಟೆ ಎಂದು ಅವರು ತಿಳಿಸಿದರು.

ಭಾಗಕ್ಕೆ ಬೆಳಗಾವಿಯಿಂದ ಹಿಡಿದು ಬೀದರ ವರೆಗೆ ಕಾರಂಜಾ ಡ್ಯಾಂ, ಲೋಯರ್ ಮಲ್ಲಾಬಾರಿ, ಅಪ್ಪರ ಮಲ್ಲಾಬಾರಿ, ಮಾರ್ಖಂಡೇಯ, ಗುತ್ತಿ ಬಸವಣ್ಣ ಸೇರಿದಂತೆ ಅನೇಕ ಯೋಜನೆಗಳನ್ನು ಮಾಡಿದ್ದೇನೆ. ನನ್ನ ತಲೆಯಲ್ಲಿ ಎನ್ ಸೈಕ್ಲೋಪಿಡಿಯಾ ಇದೆ, ಅದರಿಂದ ನಾನು ಮಾಡಿದ್ದೇನೆ. ‌ಎಲ್ಲವನ್ನೂ ಭಗವಂಥ ನೋಡ್ತಾನೆ. ಹೊಟ್ಟೆಗೆ ಅನ್ನವಿಲ್ಲದೆ ಜನರು ಕೂಲಿಮಾಡಲು ಹೋಗುತ್ತಿದ್ದರು. ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ರೋ ಇಲ್ಲೊ ಗೊತ್ತಿಲ್ಲಾ. ಅಂಥ ಕೆಟ್ಟ ಸ್ಥಿತಿ ಇತ್ತು. ಹೀಗಾಗಿ ಭಾಗ, ಭಾಗ ಎಂದು ಪಾಪದ ಹೊರೆ ಹೊತ್ಕೊಂಡು ಹೊಗೋಕೆ ನಾನು ತಯಾರಿಲ್ಲ. ಯಾರು ಏನು ಬೇಕಾದ್ರೂ ಮಾತಾಡಿಕೊಳ್ಳಿ. ನಾನು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ? ಎಂದು ಅವರು ಪ್ರಶ್ನಿಸಿದರು.

ಕುರುಬರಿಗಾ, ಮುಸ್ಲಿಂರಿಗಾ, ಹರಿಜನರಿಗಾ, ಗಿರಿಜನರಿಗಾ, ನಾಯಕಸಮುದಾಯಕ್ಕಾ? ಯಾರಿಗೆ ಅನ್ಯಾಯ ಮಾಡಿದ್ದೇನೆ? ನಾನು ಮುಸ್ಲಿಮರನ್ನು ಎರಡು ಬಾರಿ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಏಳು ಜನರಿಗೆ ಅಧಿಕಾರ ಕೊಟ್ಟಿದ್ದೇನೆ. ದಯಮಾಡಿ ಯಾರೂ ತಪ್ಪುತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮಾತಿನಲ್ಲೇ ಪರೋಕ್ಷವಾಗಿ ಜಮೀರ್ ಗೆ ಅವರು ಟಾಂಗ್ ನೀಡಿದರು.

ಅವರವರಿಗೆ ಏನೋ ಆಸೆ ಬಂದಿರುತ್ತೆ, ಮಂತ್ರಿಯೋ, ಮುಖ್ಯಮಂತ್ರಿಯೋ ಅದು ಇದು ಅಂತ ಆಸೆ ಇರುತ್ತೆ.‌ ಅವರು ಏನೇನು ಆಗಬೇಕು ಅನ್ಕೊಂಡಿದಾರೋ ಅದು ಆಗಲಪ್ಪಾ. ನಂದು ಸೆಟಿಸ್ಫೈಡ್ ಟೈಮ್ ಇದೆ. ಪಕ್ಷ ಉಳಿಸಬೇಕು ಅಷ್ಟೆ. ಎಲ್ಲರ ಹತ್ತಿರ ಕೈ ಮುಗಿದು ಕೇಳಿಕೊಳ್ತೆನೆ. ಚುನಾವಣೆ ಫಲಿತಾಂಶ ಏನೇ ಬರಲಿ.‌ ನಾನು ಮತ್ತೆ ಭಾಗದಿಂದಲೇ ಪ್ರವಾಸ ಶುರು ಮಾಡ್ತೆನೆ. ಆರೇಳು ಜಿಲ್ಲೆಗಳಿಗೆ ನಾನು ಏನು ಮಾಡಿದ್ದೇನೆ ಎಂಬುದನ್ನು ಜನಗಳ ಮುಂದೆ ಹೇಳಿ. ಅವರ ಮನಸಲ್ಲಿರುವ ತಪ್ಪು ತಿಳುವಳಿಕೆ ಹೋಗಲಾಡಿಸುತ್ತೇನೆ. ನನ್ನ ಮೇಲೆ ತಪ್ಪು ತಿಳುವಳಿಕೆ ಬರುವಂತೆ ಮಾಡಿದವರ ಹೆಸರನ್ನೂ ಹೇಳುತ್ತೇನೆ. ಭಾಗದಲ್ಲಿ ನಾನು ಸುತ್ತುತ್ತೇನೆ. ‌ ಭಾಗಕ್ಕೆ ಏನು ಮಾಡಿದ್ದೇನೆ ಎಂದು ಗೊತ್ತಿದೆ ಎಂದು ಮಾಜಿಪ್ರಧಾನಿ ತಿಳಿಸಿದರು.

ಕಾವೇರಿಗೆ ನಾನು ಏನು ಕೊಟ್ಟಿದ್ದೇನೆ? ಭಾಗಕ್ಕೆ ರೂ.‌ 24 ಸಾವಿರ ಹಣ ಕೊಟ್ಟಿದ್ದೇನೆ. ಇಂದಿರಾ ಗಾಂಧಿಯನ್ನು ತೋಗಿಸಿದ್ರಲ್ಲಾ, ಏನು ಕೊಟ್ರು ನಾನು ತುಂಬಾ ಮಾತಾಡಬಹದು ಎಂದುಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಿಳಿಸಿದರು.

Leave a Reply

ಹೊಸ ಪೋಸ್ಟ್‌