ಪ್ರತಿಪಕ್ಷಗಳ ನಾಯಕರ ಪದಬಳಕೆ ಬಗ್ಗೆ ಬೇಸರವಾಗಿದೆ- ವಸತಿ ಸಚಿವ ವಿ. ಸೋಮಣ್ಣ

ವಿಜಯಪುರ: ಬೈ ಎಲೆಕ್ಷನ್ ನಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿಗಾಗಿ ಬಳಸಿರುವ ಪದಗಳ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ದೇಶದಲ್ಲಿ, ವಿದೇಶಗಳಲ್ಲೊ, ಡಿಕ್ಷನರಿ ಯಲ್ಲಿ ಇಲ್ಲದೇ ಇರುವ ಎಲ್ಲ ಪದಗಳನ್ನು ಬಳಸಿದ್ದಾರೆ. ಬೈ ಎಲೆಕ್ಷನಗ ಗಾಗಿ ಏನೇಲ್ಲಾ ಮಾತನಾಡಿದ್ದಾರೆ. ‌ರಾಜ್ಯದ ಬಗ್ಗೆ, ರಾಷ್ಟ್ರದ ಬಗ್ಗೆ ಇರೋದು ಇಲ್ದೆ ಇರೋದು ಎಲ್ಲವನ್ನು‌ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಬೈ ಎಲೆಕ್ಷನ್ ನಲಗಲಿ ಜನ ತೀರ್ಮಾನ ಮಾಡಿದ್ದಾರೆ, ಜನ ಅಭಿವೃದ್ಧಿ ಪರವಾಗಿ ಮತ ಹಾಕಲಿದ್ದಾರೆ. ಮುಗ್ದತೆಗೆ ಮತ್ತೊಂದು ಹೆಸರೇ ಸಿಂದಗಿ ಕ್ಷೇತ್ರದ ಜನತೆ. ಅವರು ಏನು ತೀರ್ಮಾನ ಮಾಡಿದ್ದಾರೆ ಎಂಬುದು ನಮಗೆ ಎಚ್ಚರಿಕೆ ಗಂಟೆ ಆಗುತ್ತೆ ಎಂದು ತಿಳಿಸಿದ ವಸತಿ ಸಚಿವ ವಿ. ಸೋಮಣ್ಣ, ಕೀಳು ರಾಜಕೀಯ ಮಾಡಿ, ಅಂಥ ಪದಗಳನ್ನು ಬಳಸುವ ಅವಶ್ಯಕತೆ ಇದ್ದಿರಲಿಲ್ಲ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯ ಮಂತ್ರಿ ಎಸ್. ಸಿದ್ಧರಾಮಯ್ಯ, ಮಾಜಿ‌ ಸಿ ಆಗಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಹೀಗೆಲ್ಲಾ ಮಾತಾಡುವುದರಿಂದ ನನಗೆ ನೋವಾಗಿದೆ.  ಸಿದ್ಧರಾಮಯ್ಯ ಇವರ ಮಾತುಗಳು ಸಿಂದಗಿ ಮತದಾರರಿಗೆ ಅಸಹ್ಯವಾಗಿವೆ. ನಾವೇನು ದಡ್ಡಾರಾ ಎಂದು ಯೋಚಿಸುತ್ತಿದ್ದಾರೆ. ನಲವತ್ತು, ಐವತ್ತು ವರ್ಷದಿಂದ ಅಡಗೂಲಜ್ಜಿ ಕಥೆ ಹೇಳಿಕೊಂಡು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಪ್ರಚಾರ ಮಾಡುತ್ತಿರುವ ಬಗ್ಗೆ ಮಾಜಿ ಮುಖ್ಯ ಮಂತ್ರಿ ಮತ್ತು ವಿರೋಧ ಪಕ್ಷದ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಟೀಕಿಸಿದ್ದಾರೆ. ಹಾಗಿದ್ದರೆ ಸಿದ್ರಾಮಯ್ಯನಿ ಸಿಎಂ ಆಗಿದ್ದಾಗ ದೇವದುರ್ಗ ಬೈ ಎಲೆಕ್ಷನ್ ನಲ್ಲಿ ಅಲ್ಲಿಯೇ ಠಿಕಾಣಿ ಹೂಡಿದ್ದರು. ಆಗ ಸಿದ್ಧರಾಮಯ್ಯಗೂ ದೇವದುರ್ಗಕ್ಕೂ ಏನು ಸಂಭಂದ ಇತ್ತು? ನಂಜನಗೂಡು, ಗುಂಡ್ಲುಪೇಟೆ, ಜಮಖಂಡಿಯಲ್ಲಿ ಸಿದ್ಧರಾಮಯ್ಯ ಎಷ್ಟು ದಿನ ಪ್ರಚಾರ ಮಾಡಿದ್ದರು? ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ. ಸ್ವಲ್ಪವೂ ಲೋಪ‌ ಆಗಬಾರದು ಎಂದು ಮೂರು ದಿನ ಅಲ್ಲಿಯೇ ಇದ್ದರು. ಅವರೇನು ವಾರಗಟ್ಟಲೆ ಇದ್ದಿರಲಿಲ್ಲ ಎಂದು ಅವರು ಹೇಳಿದರು.

ಎಲ್ಲ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ, ಯಾವುದೇ ಕೆಲಸ ನಿಂತಿಲ್ಲ. ಜನ ತೀರ್ಮಾನ ಮಾಡಿದ್ದಾರೆ. ಇವರು ಏನೆಲ್ಲ ಮಾತನಾಡಿದ್ದಾರೆ. ರಾಜ್ಯದ ಬಗ್ಗೆ ದೇಶದ ಬಗ್ಗೆ ಇಲ್ಲದಿರುವುದನ್ನು ಎಲ್ಲಾ ದೇಶದ ಭಾಷೆಯಲ್ಲಿ ಏನೇನು ಶಬ್ದಗಳಿವೆ ಎಲ್ಲವನ್ನು ಮಾತನಾಡಿದ್ದಾರೆ. ಎಲ್ಲಾ ಈ ಚುನಾವಣೆಯಲ್ಲಿ ಕಾರಣವಾಗಲಿವೆ ಎಂದು ಸಚಿವರು ತಿಳಿಸಿದರು.

ಜನ ಅಭಿವೃದ್ಧಿಯನ್ನು ನೋಡಿ ಮತ ಹಾಕಿಲಿದ್ದಾರೆ. ಈ ಭಾಗಕ್ಕೆ ಅಭಿವೃದ್ಧಿ ಅವಶ್ಯವಾಗಿದ್ದು. ಈ ಹಿನ್ನೆಲೆಯಲ್ಲಿ ಜನ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ನಾನು 14 ದಿನ ಇಲ್ಲಿಯೇ ಪ್ರಚಾರ ಮಾಡಿದ್ದೇನೆ. ಈ ಅನುಭವದ ಬಗ್ಗೆ ಹೇಳುವುದಾದರೆ, ಈವರೆಗೆ ಸುಮಾರು ಬೈ ಎಲೆಕ್ಷನ್ ನೋಡಿದ್ದೇನೆ. ನಮಗೆ ಎಷ್ಟರ ಮಟ್ಟಿಗೆ ಹೆಚ್ಚಿನ ಮತಗಳನ್ನು ನೀಡಿ ಎಚ್ಚರಿಕೆ ಗಂಟೆ ಆಗುತ್ತಾರೆ ಎಂಬುದು ಅವರ ಹಾಕುವ ಮತದಾನದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ, ಗೆದ್ದ ನಂತರ, ಹೆಚ್ಚಿನ‌ ಕೆಲಸ‌ ಎಚ್ಚರಿಕೆಯಾಗಲಿದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯ ಮಂತ್ರಿಗಳಾದ ಎಸ್. ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ಸಾಮಿ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕಿತ್ತು.‌‌ ಯಾರು ಏನೇ ಹೇಳಿದರೂ ಸಿಂದಗಿ ತಾಲೂಕಿನ ಏಳು ಜಿಲ್ಲಾ ಪಂಚಾಯಿತಿ, ಒಂದು ಪಟ್ಟಣ ಪಂಚಾಯಿತಿ ಮತ್ತು ಒಂದು ಪುರಸಭೆಯ ಮತದಾರರು ಬಿಜೆಪಿಗೆ ಮತ ಹಾಕುತ್ತಾರೆ. ಮುಂದಿನ ಒಂದೂವರೆ ವರ್ಷದಲ್ಲಿ ನಾವು ಏನು ಮಾಡಬೇಕು ಎಂಬುದನ್ನು ನಿರ್ಧರಿಸಿತ್ತಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌