ಪ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಶುಕ್ರವಾರ ವೆಬಿನಾರ್- ಡಾ. ಸ್ಯಾಮ್ ಪಿತ್ರೊಡ ಭಾಗಿ

ವಿಜಯಪುರ: ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಅಭೂತಪೂರ್ವ ಕ್ರಾಂತಿ ಮಾಡಿದವರು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಡಾ. ಸ್ಯಾಮ್ ಪಿತ್ರೋಡಾ. ಅವರು ಇತ್ತೀಚೆಗೆ ರಚಿಸಿರುವ ಕನ್ವರ್ಶೇಷನ್ ಆನ್ ರಿಡಿಸೈನಿಂಗ್ ದಿ ವರ್ಲ್ಡ್: ಗ್ಲೋಬಲ್ ಕಾಲ್ ಟು ಆ್ಯಕ್ಷನ್ ಪುಸ್ತಕದ ಕುರಿತು ವೆಬಿನಾರ ಆಯೋಜಿಸಲಾಗಿದೆ.

ವಿಜಯಪುರದ ಪ್ರತಿಷ್ಟಿತ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರ ಈ ವೆಬಿನಾರ ಆಯೋಜಿಸಿದೆ. ಶುಕ್ರವಾರ ಸಂ. 5 ಕ್ಕೆ ಈ ವೆಬಿನಾರ ನಡೆಯಲಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ವೆಬಿನಾರ ನಡೆಯುತ್ತಿದ್ದು, ಈ ವರ್ಚ್ಯೂವಲ್ ಕಾರ್ಯಕ್ರಮದಲ್ಲಿ ಖುದ್ದು ಡಾ.‌ಸ್ಯಾಮ್ ಪಿತ್ರೋಡಾ ಪಾಲ್ಗೊಳ್ಳುತ್ತಿದ್ದಾರೆ. ಈ ವೆಬಿನಾರ ಅಧ್ಯಕ್ಷತೆಯನನ್ನು ಮಾಜಿ ಸಚಿವ ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ವಹಿಸಲಿದ್ದಾರೆ. ಅಲ್ಲದೇ, ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಡಾ. ಮಹಾಂತೇಶ ಬಿರಾದಾರ, ಪತ್ರಕರ್ತ ರಿಷಿಕೇಶ ದೇಸಾಯಿ, ಅಶ್ಬಿನ್ ಕುಮಾರ ಕೂಡ ಈ ವೆಬಿನಾರ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
ಸಾರ್ವಜನಿಕರು ಪಡೆಯಬೇಕೆಂದು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌