ನಾರಾಯಣಹಟ್ಟಿ ಮತಗಟ್ಟೆಯಲ್ಲಿ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಪತ್ನಿ ಸಮೇತ ಬಂದು ಮತದಾನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಶಾಂತಿಯುತವಾಗಿ ಮುಂದುವರೆದಿದೆ. ‘ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ತಮ್ಮ ಪತ್ನಿ ಡಾ. ಸುನಿತಾ ದೇವಾನಂದ ಚವ್ಹಾಣ ಜೊತೆ ಬಂದು ಮತದಾನ ಮಾಡಿದ್ದಾರೆ. ಸ್ವಗ್ರಾಮ ನಾರಾಯಣಹಟ್ಟಿಯಲ್ಲಿ ಮತಗಟ್ಟೆ ಸಂಖ್ಯೆ 93 ರಕ್ಕೆತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ ದೇವಾನಂದ ಚವ್ಹಾಣ ಮತ ಚಲಾಯಿಸಿದರು.

ಪತ್ನಿ, ಪುತ್ರನ ಜೊತೆಗೆ ಬಂದು ಮತ ಚಲಾಯಿಸಿದ ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ

ವಿಜಯಪುರ: ವಿಡಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಮುಂದುವರೆದಿದ್ದು, ನಿಧಾನ ಗತಿಯಲ್ಲಿ ಸಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ತಮ್ಮ ಸ್ವಗ್ರಾಮ ಭೀಮಾ ತೀರದ ದೇವಣಗಾಂವ ಗ್ರಾಮದ ಮತಗಟ್ಟೆ ಸಂಖ್ಯೆ 6 ರಲ್ಲಿ ತಮ್ಮ ಮತ ಹಾಕಿದ್ದಾರೆ. ಪತ್ನಿ ಲಲಿತಾಬಾಯಿ ಮತ್ತು ಮಗ ಮಂಜುನಾಥ ಅವರೊಂದಿಗೆ ಮತಗಟ್ಟೆಗೆ ಬಂದ ರಮೇಶ ಭೂಸನೂರ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.  

ಮಲಘಾಣದಲ್ಲಿ ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ- ಚುರುಕಿನಿಂದ ಸಾಗಿರುವ ಮತದಾನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಚುರುಕಿನಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಲಘಾಣ ಗ್ರಾಮದಲ್ಲಿ ಮತದಾನ ಮಾಡಿದರು.   ಮಲಘಾಣ ಗ್ರಾಮದಲ್ಲಿರುವ ಮತಗಟ್ಟೆ ಸಂಖ್ಯೆ 106 ಕ್ಕೆ ಆಗಮಿಸಿದ ಅಶೋಕ ಮನಗೂಳಿ ತಮ್ಮ ಪತ್ನಿ ನಾಗರತ್ನಾ ಮನಗೂಳಿ ಜೊತೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.    

ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ಅವರಿಂದ ಗಣಿಯಾರ ಮತಗಟ್ಟೆಯಲ್ಲಿ ಮತದಾನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಚುರುಕಿನಿಂದ ಸಾಗಿದೆ. ಜೆ ಡಿ ಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರು ಗಣಿಯಾರ ಗ್ರಾಮದಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪತಿ ಶಕೀಲ ಅಂಗಡಿ ಜೊತೆ ಮತಗಟ್ಟೆಗೆ ಆಗಮಿಸಿದ ನಾಜಿಯಾ ಶಕೀಲ ಅಂಗಡಿ ಮತ ಚಲಾಯಿಸಿದರು.

ಮತಗಟ್ಟೆಗೆ ಬಂದು ಆರತಿ ಬೆಳಗಿ ಗಮನ ಸೆಳೆದ ಹಿಂದೂ-ಮುಸ್ಲಿಂ ಮಹಿಳೆಯರು- ಸಿಂದಗಿ ಬೈ ಎಲೆಕ್ಷನ್ ಮಂದಗತಿಯಲ್ಲಿ ಸಾಗಿರುವ ಮತದಾನ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಆರಂಭವಾಗಿದ್ದು, ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಮತಗಟ್ಟೆ ಆಗಮಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆಯವರೆಗೆ ನಡೆಯಲಿರುವ ಮತದಾನದಲ್ಲಿ ಮತದಾರರು ಆರು ಜನ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ. ಬಿಜೆಪಿಯಿಂದ ರಮೇಶ ಭೂಸನೂರ, ಕಾಂಗ್ರೆಸ್ಸಿನಿಂದ ಅಶೋಕ ಮನಗೂಳಿ ಮತ್ತು ಜೆಡಿಎಸ್ ನಿಂದ ನಾಜಿಯಾ ಶಕೀಲ ಅಂಗಡಿ ಸೇರಿದಂತೆ ಒಟ್ಟು ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  […]