ಮತಗಟ್ಟೆಗೆ ಬಂದು ಆರತಿ ಬೆಳಗಿ ಗಮನ ಸೆಳೆದ ಹಿಂದೂ-ಮುಸ್ಲಿಂ ಮಹಿಳೆಯರು- ಸಿಂದಗಿ ಬೈ ಎಲೆಕ್ಷನ್ ಮಂದಗತಿಯಲ್ಲಿ ಸಾಗಿರುವ ಮತದಾನ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಆರಂಭವಾಗಿದ್ದು, ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಮತಗಟ್ಟೆ ಆಗಮಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.

ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆಯವರೆಗೆ ನಡೆಯಲಿರುವ ಮತದಾನದಲ್ಲಿ ಮತದಾರರು ಆರು ಜನ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.

ಬಿಜೆಪಿಯಿಂದ ರಮೇಶ ಭೂಸನೂರ, ಕಾಂಗ್ರೆಸ್ಸಿನಿಂದ ಅಶೋಕ ಮನಗೂಳಿ ಮತ್ತು ಜೆಡಿಎಸ್ ನಿಂದ ನಾಜಿಯಾ ಶಕೀಲ ಅಂಗಡಿ ಸೇರಿದಂತೆ ಒಟ್ಟು ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಸುಗಮ ಮತದಾನಕ್ಕೆ ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.  ವಿಜಯಪುರ ಜಿಲ್ಲಾಧಿಕಾರಿ. ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮತದಾನ ಶಾಂತಿಯುಕವಾಗಿ ನಡೆಯಲು ಸಕಲ ಕ್ರಮಗಳನ್ನು ಕೈಗೊಂಡಿದ್ದಾರೆ.

ಬೆಳಿಗ್ಗೆ ಮತದಾನ ಆರಂಭಕ್ಕೂ ಮುನ್ನ ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಸಹೋದರಿ ಪ್ರಭಾವಿತ ತಮ್ಮ ಸ್ನೇಹಿತೆಯರೊಂದಿಗೆ ಬಂದು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರಿಗೆ ಒಳಿತಾಗಲಿ ಎಂದು ಬಂದು ಪೂಜೆ ಸಲ್ಲಿಸಿದ್ದಾರೆ. ಮುಸ್ಲಿಂ ಮಹಿಳೆಯ ಜೊತೆಗೆ ಬಂದು ಅವರು ಪೂಜೆ ಸಲ್ಲಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಕ್ಕೆ ಕುಂಕುಮ ಇಟ್ಟು, ಹೂವು ಇಟ್ಟು, ಆರತಿ ಬೆಳಗಿ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ.  ಸಿಂದಗಿಯ ಆಲಮೇಲ ಪಟ್ಟಣದಲ್ಲಿ ಈ ಪೂಜೆ ಪೂಜೆ ಸಲ್ಲಿಸಲಾಗಿದೆ.

ಬೆಳಿಗ್ಗೆಯಿಂದ ಮತದಾರರು ನಿಧಾನವಾಗಿ ಮತಗಟ್ಟೆಗಳ ಕಡೆಗೆ ಬರುತ್ತಿದ್ದು, ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಈ ಬಾರಿ ಚುನಾವಣೆಯಲ್ಲಿ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 2 ಲಕ್ಷ 34 ಸಾವಿರದ 584 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.  ಈ ಪೈಕಿ 1 ಲಕ್ಷ 20 ಸಲಾವಿರದ 844 ಪುರುಷರು ಮತ್ತು 1 ಲಕ್ಷ 13 ಸಾವಿರದ 561 ಮಹಿಳಾ ಮತದಾರರು ಹಾಗೂ 32 ಇತರೆ, 147 ಸರ್ವಿಸ್ ಮತರಾದರರು ತಮ್ಮ ಹಕ್ಕು ಮತ ಚಲಾಯಿಸಲಿದ್ದಾರೆ.

ಪಿಂಕ್ ಮತಗಟ್ಟೆಯನ್ನೂ ತೆರೆಯಲಾಗಿದ್ದು, ಮತದಾರರಿಗೆ ಸುಗಮವಾಗಿ ತಮ್ಮ ಹಕ್ಕು ಚಲಾಯಿಸಲು ವ್ಯವಸ್ಥೆ ಮಾಡಲಾಗಿದೆ.  ಈ ಚುನಾವಣೆ ಮತದಾನಕ್ಕಾಗಿ 271 ಸಾಮಾನ್ಯ ಮತಗಟ್ಟೆಗಳು, 26 ಆಕ್ಸಿಲರಿ ಸೇರಿದಂತೆ ಒಟ್ಟು 297 ಮತಗಟ್ಟೆಗಳನ್ನು ತೆರೆಯಲಾಗಿದೆ.  7 ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು, 22 ಜನ ಸೆಕ್ಟರ್ ಆಫೀಸರ್ ಗಳು, 18 ಫ್ಲೈಯಿಂಗ್ ಸ್ಕ್ಯ್ವಾಡ್ ತಂಡಗಳು, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.  ಓರ್ವ ಸಹಾಯಕ ಎಕ್ಸ್ಪೆಂಡಿಚರ್ ಅಬ್ಸರ್ವರ್, 1  ಅಕೌಂಟಿಂಗ್ ತಂಡ, 6 ವಿಡಿಯೋ ಸರ್ವೆಲೆನ್ಸ್ ತಂಡಗಳು, 2 ವಿವಿಂಗ್ ತಂಡಗಳು, 2 ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಗಳು ಹಾಗೂ ವಿಧಾನ ಸಭೆ ಕ್ಷೇತ್ರ ಮಟ್ಟದಲ್ಲಿ 23 ಮಾಸ್ಟರ್ ಟ್ರೈನರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.  ಮತದಾನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು 1308 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿ ಆರ್ ಓ, 327 ಎ ಪಿ ಆರ್ ಓ ಹಾಗೂ 654  ಪಿ ಓ ಗಳನ್ನು ನಿಯೋಜಿಸಲಾಗಿದೆ.

ವಿಶೇಷ ಮತದಾರರ ಪೋಸ್ಟಲ್ ಬ್ಯಾಲೆಟ್ ಗಳನ್ನು ಈಗಾಗಲೇ ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ.  892 ಜನ ಹಿರಿಯ 80 ವರ್ಷ ಮೇಲ್ಪಟ್ಟ, 402 ಪಿಡಬ್ಲ್ಯೂಡಿ ವೋಟರ್ ಇದ್ದು, 35 ಮೈಕ್ರೋ ಅಬ್ಸರ್ವರ್ ಗಳನ್ನು ಈ ಚುನಾವಣೆಗೆ ನೇಮಿಸಲಾಗಿದೆ.

 

Leave a Reply

ಹೊಸ ಪೋಸ್ಟ್‌