ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯೊಂದಿಗೆ ರೈತರ ಸಹಕಾರ ನಿರಂತರವಾಗಿರಲಿ- ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ಮತ್ತು ಚಡಚಣ ತಾಲೂಕುಗಳ ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರ ಸಹಕಾರ ನಿರಂತರವಾಗಿರಲಿ ಎಂದು ಕಾರ್ಖಾನೆಯ ಅಧ್ಯಕ್ಷ ಮತ್ತು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದ್ದಾರೆ.

ಇಂಡಿ ತಾಲೂಕಿನ ಮರಗೂರ ಬಳಿ ಇರುವ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22ನೇ ವರ್ಷದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೂರೂ ತಾಲೂಕುಗಳ ರೈತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಈ ಕಾರ್ಖಾನೆಗೆ ಅಭಿವೃದ್ಧಿ ರೈತರನ್ನು ಅವಲಂಬಿಸಿದೆ.  ಈ ಸಹಕಾರಿ ಸಕ್ಕರೆ ಕಾರ್ಖಾನೆ ಭೀಮಾ ತೀರದಲ್ಲಿ ಮುಕುಟಪ್ರಾಯವಾಗಿ ಕಂಗೊಳಿಸುತ್ತಿದೆ.  40 ವರ್ಷಗಳ ಕಾಲ ವಿಜಯಪುರದ ಬಾರಾಕಮಾನಿನಂತೆ ಅರ್ಧಕ್ಕೆ ನಿಂತಿದ್ದ ಈ ಕಾರ್ಖಾನೆಗಾಗಿ ಜಿಲ್ಲೆಯ ರೈತರು ಶೇರು ಸಂಗ್ರಹ ಮಾಡಿದ್ದರು. ಆದರೆ, ಆರಂಭವಾಗದ ಈ ಕಾರ್ಖಾನೆಯ ಅನುಮತಿಯನ್ನು ಕಳೆದುಕೊಂಡಿತ್ತು.  ಇಂಥ ಪರಿಸ್ಥಿತಿಯಲ್ಲಿ ಭಗುವಂತನ ದಯೆ ಮತ್ತು ಕ್ಷೇತ್ರದ ಜನರ ಆರ್ಶೀವಾದ ಹಾಗೂ ತಮ್ಮ ಇಚ್ಛಾಶಕ್ತಿಯ ಕಾರಣ ಎಲ್ಲಿರಿಗೂ ಕಹಿಯಾಗಿದ್ದ ಕಾರ್ಖಾನೆ ಮೂರು ವರ್ಷಗಳ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಸಹಗಕಾರದಿಂದ ಇಂದು ಕಾರ್ಯಾರಂಭ ಮಾಡುವ ಮೂಲಕ ರೈತರ ಬಾಳಿಗೆ ಬೆಳಕಾಗಿ ಸಿಹಿಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.

ಸಕ್ಕರೆ ಗೋದಾಮು, ವಿಶ್ರಾಂತಿ ಗೃಹ, ಕಬ್ಬು ತೂಕ, ಕ್ಯಾಂಟಿನ್, 2 ಕಿ. ಮೀ. ರಾಷ್ಟ್ರೀಯ ಹೆದ್ದಾರಿಯಿಂದ ಕಾರ್ಖಾನೆಯವರೆಗೆ ರಸ್ತೆ ನಿರ್ಮಾಣ ಉದ್ಘಾಟಿಸಲಾಗಿದೆ   ಪ್ರತಿ ವರ್ಷ ಕಾರ್ಖಾನೆಗೆ ಬೇಕಾದ ಹೊಸ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ದನಾಗಿದ್ದೇನೆ.  ಆದ್ದರಿಂದ ಇದು ರೈತರ ಆಸ್ತಿಯಾಗಿದ್ದು, ಕಾರ್ಖಾನೆಯೊಂದಿಗೆ ಸದಾ ರೈತರ ಸಹಕಾರವಿರಲಿ ಎಂದು ಯಶವಂತರಾಯಗೌಡ ಪಾಟೀಲ ಮನವಿ ಮಾಡಿದರು.

ಈ ಸಂದರ್ಭಫದಲ್ಲಿ ಗುರುಪಾದೇಶ್ವರ ಶಿವಾಚಾರ್ಯರು, ಕಲ್ಮೇಶ್ವರ ಶಿವಾಚಾರ್ಯರು, ಚಂದ್ರಶೇಖರ ದೇವರು, ಮಹಾಂತೇಶ ಹಿರೇಮಠ ಸಾನಿಧ್ಯ ವಹಿಸಿದ್ದರು.  ಕಾರ್ಖಾನೆಯ ನಿರ್ದೇಶಕರಾದ ಬಿ. ಎಂ. ಕೋರೆ, ಸಿದ್ದನಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ದಾನಮ್ಮಗೌಡತಿ ಬಿರಾದಾರ, ಜಟ್ಟೆಪ್ಪ ರವಳಿ, ಸದಾಶಿವ ಪ್ಯಾಟಿ, ಕುತಬುದ್ದೀನ್, ಲಕ್ಷ್ಮಣಗೌಡ ಬಿರಾದಾರ, ಅನಂತ ಜೈನ, ಧನ್ಯಕುಮಾರ ಶಹಾ, ಮುಸ್ತಾಕ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌