ರಾಪಿಡ್ ಚೆಸ್ ಚಾಂಪಿಯನಶಿಪ್ ಗೆ ಚಾಲನೆ ನೀಡಿದ ಶಾಸಕ ದೇವಾನಂದ ಚವ್ಹಾಣ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ(ಅಟೋನಾಮಸ್) ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ಚಾಣಕ್ಯ ರಾಪಿಡ್ ಚೆಸ್ ಚಾಂಪಿಯನಶಿಪ್ ನ್ನು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಉದ್ಘಾಟಿಸಿದರು.

ಮಾಜಿ ಸಚಿವ ದಿ. ಬಿ. ಎಂ. ಪಾಟೀಲ ಅವರ ಜನ್ಮದಿನದ ಸವಿನೆನಪಿಗಾಗಿ ಎ. ಎಸ್. ಪಾಟೀಲ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜ್ ನಲ್ಲಿ ಈ ಚಾಂಪಿಯನಶಿಪ್ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಚೆಸ್ ಆಡುವ ಮೂಲಕ ಶಾಸಕ ದೇವಾನಂದ ಚವ್ಹಾಣ ಗಮನ ಸೆಳೆದರು.

ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ವಿ. ಜಿ. ಕುಲಕರ್ಣಿ, ಡಾ. ಎಸ್. ಎಸ್. ಹನಗಂಡಿ, ಪ್ರೊ. ಎಸ್. ಜಿ. ರೂಡಗಿ, ಶಂಕರಗೌಡ ಪಾಟೀಲ, ಪ್ರೊ. ಎಸ್. ಎಸ್. ಕೋರಿ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌