ಮತ ಎಣಿಕೆ ಕೇಂದ್ರ ಸೇರಿದ ಇವಿಎಂಗಳು- ಶೇ. 69.47 ರಷ್ಟು ಮತದಾನ- ಮಂಗಳವಾರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ. 69.47 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 

 

ವಿಜಯಪುರ ನಗರದ ಸೈನಿಕ ಶಾಲೆಯಲ್ಲಿರುವ ಒಡೆಯರ ಸದನದಲ್ಲಿ ಮತ ಎಣಿಕೆ ನ. 2 ರಂದು ಮಂಗಳವಾರ ನಡೆಯಲಿದ್ದು, ಶನಿವಾರ ಮತದಾನ ಮುಕ್ತಾಯಗೊಂಡ ನಂತರ ಮತದಾನಕ್ಕೆ ಬಳಸಲಾದ ಎಲ್ಲ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತಡರಾತ್ರಿ ವಿಜಯಪುರಕ್ಕೆ ತಂದು ಭದ್ರತೆಯಲ್ಲಿ ಇಡಲಾಗಿದೆ.

ಮತದಾನ ಮುಕ್ತಾಯದ ನಂತರ ಎಲ್ಲ ಭೂತಗಳಲ್ಲಿದ್ದ ಇವಿಎಂ ಗಳನ್ನು ಸಿಂದಗಿಯ ಡಿಮಸ್ಟರಿಂಗ್ ಕೇಂದ್ರಕ್ಕೆ ತರಲಾಯಿತು.  ಅಲ್ಲಿಂದ, ಬಿಗೀ ಪೊಲೀಸ್ ಭದ್ರತೆಯೊಂದಿಗೆ ಬೆಳಗಿನ ಜಾವ 2 ಗಂಟೆಗೆ ವಿಜಯಪುರ ನಗರದ ಸೈನಿಕ ಶಾಲೆಯ ಮತ ಎಣಿಕೆ ಕೇಂದ್ರಕ್ಕೆ ತರಲಾಗಿದೆ.  ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಮತ್ತು ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಎಸ್ಪಿ ಎಚ್. ಡಿ. ಆನಂದಕುಮಾರ, ಅಧಿಕಾರಿ ರಾಜು ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.

ನ. 2 ರಂದು ಬೆಳಿಗ್ಗೆ 8ಕ್ಕೆ ಸಿಂದಗಿ ಬೈ ಎಲೆಕ್ಷನ್ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

Leave a Reply

ಹೊಸ ಪೋಸ್ಟ್‌