ಜೀವನದುದ್ದಕ್ಕೂ ಕನ್ನಡವನ್ನು ಪ್ರೀತಿಸುತ್ತ ಕನ್ನಡಾಂಬೆಯ ಸೇವೆ ಮಾಡೋಣ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಎಲ್ಲರೂ ನಮ್ಮ ದೀವನದುದ್ದಕ್ಕೂ ಕನ್ನವನ್ನು ಪ್ರೀತಿಸೋಣ.  ಕನ್ನಡಾಂಬೆಯ ಸೇವೆ ಮಾಡೋಣ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಅವರು, ನಂತರ ನಾನಾ ಪದಾತಿ ದಳಗಳನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಕನ್ನಡ ಬರೀ ಭಾಷೆ ಅಲ್ಲ. ಅದು ನಮ್ಮ ಬದುಕು, ಸಂಸ್ಕೃತಿ, ಪರಂಪರೆ. ವಿವಿಧ ಸಂಸ್ಕೃತಿಗಳ ತವರೂರು ನಮ್ಮ ಕರುನಾಡು. ನಮ್ಮ ಕರುನಾಡಿನ ಏಳಿಗೆಗಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಈ ಪವಿತ್ರ ಭಾಷೆಯನ್ನು ಉಳಿಸಿ, ಬೆಳೆಸೋದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ  ಆನಂದ ಕುಮಾರ, ಜಿ. ಪಂ. ಸಿಇಒ ಗೋವಿಂದರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಜನ ಗಣ್ಯರನ್ನು ಸನ್ಮಾನಿಸಲಾಯಿತು.

 

 

 

 

Leave a Reply

ಹೊಸ ಪೋಸ್ಟ್‌