ಸಿಂದಗಿ ಬೈ ಎಲೆಕ್ಷನ್ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗೆಲ್ಲಲು ದಿಕ್ಸೂಚಿಯಾಗಲಿದೆ- ಮಾಜಿ ಡಿಸಿಎೞ ಲಕ್ಷ್ಮಣ ಸವದಿ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಮಾಡಿ ಡಿಸಿಎಂ ಮತ್ತು ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಉಸ್ತುವಾರಿ ಲಕ್ಷ್ಮಣ ಸವದಿ ಹರ್ಷ ವ್ಯಕ್ತಪಡಿಸಿದ್ದು, ಈ ಮತಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ಮತದಾರರನ್ನು ಖುಷಿ ಪಡಿಸುವ ಕೆಸಸವನ್ನು ಮಾಡುತ್ತೇವೆ.  2023ಕ್ಕೆ ಮತ್ತೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂಥ ಮನಸ್ಸನ್ನು ಪರಿವರ್ತನೆ ಮಾಡುವ ಕೆಲಸವನ್ನು ಮಾಡುತ್ತೇವೆ.  ಇದು 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ.  ಈ ಬಾರಿ ಸಿಂದಗಿಯಲ್ಲಿ ಮತ್ತು ಈ ಹಿಂದೆ ಬಸವ ಕಲ್ಯಾಣದಲ್ಲಿ ಮಾಡಿರುವ ಪ್ರಯೋಗಗಳನ್ನು ಇಡೀ ರಾಜ್ಯದಲ್ಲಿ ಮಾಡುತ್ತೇವೆ.  2023ಕ್ಕೆ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಬಸವ ಕಲ್ಯಾಣ ಮತ್ತು ಸಿಂದಗಿ ಬೈ ಎಲೆಕ್ಷನ್ ನಲ್ಲಿ ತಮ್ಮ ಉಸ್ತುವಾರಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ನೀಡಬೇಕು ಎಂದು ಬೆಂಬಲಿಗರ ಒತ್ತಾಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಸೋತ ಸಂದರ್ಭದಲ್ಲಿ ಮಂತ್ರಿಯನ್ನು ಕೇಳಿರಲಿಲ್ಲ.  ನನಗೆ ಗೊತ್ತೂ ಇರಲಿಲ್ಲ.  ನಮ್ಮ ರಾಷ್ಟ್ರೀಯ ನಾಯಕರು ನನ್ನನ್ನು ಅಂದು ಮಂತ್ರಿ ಮಾಡಿ ಉಪಮುಖ್ಯಮಂತ್ರಿ ಮಾಡಿದರು.  ಪಕ್ಷದ ಕೆಲಸ ಮಾಡಲು ಹೇಳಿದ್ದಾರೆ.  ಈಗ ಪಕ್ಷದ ಕೆಲಸ ಮಾಡುತ್ತಿದ್ದೇನೆ.  ನಾನು ಯಾವುದೇ ಅಪೇಕ್ಷೆ ಪಟ್ಟವನಲ್ಲ.  ಮಹಾಭಾರತದಲ್ಲಿ ಕೃಷ್ಣ ಕರ್ಮ ಕರೋ, ಕರ್ಮ ಕಾ ಫಲ್ ಮತ್ ದೇಖೋ ಎಂದು ಹೇಳಿದ್ದಾನೆ.  ಹೀಗಾಗಿ ನನ್ನಷ್ಟಕ್ಕೆ ನಾನು ಕೆಲಸ ಮಾಡುತ್ತೇನೆ.  ಅದಕ್ಕೆ ಫಲ ಅಥವಾ ಪ್ರತಿಫಲ ಎಂಬುದನ್ನು ಪಕ್ಷಕ್ಕೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಅವರು ಹೇಳಿದರು.

ಸಿಂದಗಿ ಮತಕ್ಷೇತ್ರದ ಜನತೆ ನೀಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯಲ್ಲಿರುವ ಬೇಡಿಕೆಗಳನ್ನು ಅಕ್ಷರಶಃ ಮುಖ್ಯಮಂತ್ರಿಗಳ ಮತ್ತು ಅನೇಕ ಸಚಿವರ ಗಮನಕ್ಕೆ ತರುವ ಮೂಲಕ ಕ್ಷೇತ್ರದಲ್ಲಿ ಒಂದು ಬದಲಾವಣೆಯನ್ನು ಮಾಡುಲು ನಮ್ಮದೇ ಆದ ಪ್ರಯತ್ನವನ್ನು ಮಾಡುತ್ತೇವೆ.  ಎಲ್ಲರ ಆಶೀರ್ವಾದದ ಫಲದಿಂದ ರಮೇಶ ಭೂಸನೂರ ಗೆದ್ದಿದ್ದಾರೆ.  ಬಿಜೆಪಿಗೆ ಇನ್ನಷ್ಟು ಶಕ್ತಿಯನ್ನು ತುಂಬಿದ್ದೀರಿ.  ಸಿಂದಗಿಯಲ್ಲಿ ಗೆದ್ದರೆ ನರೇಂದ್ರ ಮೋದಿ ಅವರಿಗೆ ಖುಷಿಯಾಗುತ್ತದೆ ಎಂದು ಹೇಳಿದ್ದೆ.  ಆ ಮಾತನ್ನು ತಾವೆಲ್ಲ ಉಳಿಸಿಕೊಂಡಿದ್ದೀರಿ.  ಎಲ್ಲರಿಗೂ ಮತ್ತೋಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳಿದ್ದೆ.  ಆದರೆ, ನಿರೀಕ್ಷೆಗೂ ಮೀರಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ.  ಅದಕ್ಕೆ ನಾವು ಜನರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಕಡಿಮೆ ಎಂದು ಹೇಳಲು ಬಯಸುತ್ತೇನೆ.  ನಾವು ಭೂತ ಪ್ರಮುಖರು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರದ ತಂಡಗಳನ್ನು ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಲು ಪ್ರೇರಣೆಯನ್ನು ನೀಡುತ್ತೇವೆ.  ಅವರಲ್ಲಿ ಹುಮ್ಮಸ್ಸನ್ನು ತುಂಬಿ ರೂಪಿಸಿದ ಕಾರ್ಯತಂತ್ರ ಬೈ ಎಲೆಕ್ಷನ್ ಚುನಾವಣೆಯಲ್ಲಿ ಯಶಸ್ಸಿಗೆ ಕಾರಣವಾಗಿದೆ.  ಇದು ಹೆಚ್ಚು ಮತಗಳು ಬರಲೂ ಕಾರಣವಾಗಿದೆ.  2008 ರಿಂದಲೂ ಬೈ ಎಲೆಕ್ಷನ್ ಗಳಲ್ಲಿ ಕೆಲಸ ಮಾಡುತ್ತಿದ್ದೇವೆ.  ನಮ್ಮದೇ ಆದ ತಂಡವಿದೆ.  ಈ ಹಿಂದೆ ಮತ್ತು ಈಗ ಬೊಮ್ಮಾಯಿ, ವಿ. ಸೋಮಣ್ಮ, ಸಿ. ಸಿ. ಪಾಟೀ ಮತ್ತು ನಾನು ಒಂದು ಕಮಿಟಮೆಂಟ್ ಇಟ್ಟುಕೊಂಡು ಕೆಲಸ ಮಾಡುತ್ತೇವೆ.  ಇದು ವರ್ಕೌಟ್ ಆಗುತ್ತದೆ ಎಂಬ ಭರವಸೆ ಮೇಲೆ ಪಕ್ಷದ ವರಿಷ್ಠರು ನಮಗೆ ಜವಾಬ್ದಾರಿ ವಹಿಸುತ್ತಾರೆ.  ಅವರ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿ ಒಂದು ಉತ್ತಮ ಸಂದೇಶ ನೀಡುತ್ತಿದ್ದೇವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌