ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಹಿನ್ನೆಲೆ- 65 ಕಿ, ಮೀ, ದೀಡ ನಮಸ್ಕಾರ ಆರಂಭಿಸಿದ ಅಭಿಮಾನಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31085 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು, ಈ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಈಗ ಹರಕೆ ತೀರಿಸುತ್ತಿದ್ದಾರೆ.

ರಮೇಶ ಭೂಸನೂರ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಅದೂ ಕೂಡ ಭಾರಿ ಅಂತರದಿಂದ ಗೆಲುವು ಸಾಧಿಸಿರುವದು ರಾಜ್ಯಾದ್ಯಂತ ಈಗ ಚರ್ಚೆಗೆ ಕಾರಣವಾಗಿದೆ.  ಈ ಮಧ್ಯೆ ತಮ್ಮ ನೆಚ್ಚಿನ ನಾಯಕನ ಭರ್ಜರಿ ಗೆಲುವು ತಿಳಿದ ತಕ್ಷಣದಿಂದಲೂ ಬಿಜೆಪಿ ಕಾರ್ಯಕರ್ತರು ತರಹೇವಾಹಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.  ರಮೇಶ ಭೂಸನೂರ ಅವರ ತವರು ಸಿಂದಗಿ ಮತಕ್ಷೇತ್ರ ಮಾತ್ರವಲ್ಲ ವಿಜಯಪುರ ನಗರದಲ್ಲಿಯೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.

ವಿಜಯಪುರ ನಗರದ ಸೈನಿಕ ಶಾಲೆಯ ಆವರಣದ ಹೊರಗೆ ಪರಸ್ಪರ ಗುಲಾಲ ಎರಚಿ ಪರಸ್ಪರ ಶುಭಾಷಯ ಕೋರಿ ಬಿಜೆಪಿ ಕಾರ್ಯಕರ್ತರು ಮತ್ತು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ.  ಸಿಂದಗಿ ಪಟ್ಟಣದಲ್ಲಿಯೂ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಮತ್ತೆ ಹಲವರು ತೆರೆದ ವಾಹನಗಳಲ್ಲಿ ಮೆರವಣಿಗೆ ನಡೆಸಿದ್ದು, ತಮ್ಮ ನೆಚ್ಚಿನ ನಾಯಕ ಗೆಲುವನ್ನುಅದ್ಧೂರಿಯಾಗಿ ಸೆಲಿಬ್ರೇಟ್ ಮಾಡಿದ್ದಾರೆ.

ಆದರೆ, ರಮೇಶ ಭೂಸನೂರ ಗೆಲವಿಗೆ ಹರಕ ಹೊತ್ತಿದ್ದ ಅವರ ಅಭಿಮಾನಿಯೊಬ್ಬು ಸುಮಾರು 65 ಕಿ. ಮೀ. ದೀಡ ನಮಸ್ಕಾರ ಆರಂಭಿಸಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆಂಗನಾಳ ಗ್ರಾಮದ ಉಮೇಶ ಶಿಂಧೆ ತಮ್ಮ ಸ್ವಗ್ರಾಮದಿಂದ ಸಿಂದಗಿ ತಾಲೂಕಿನ ಯಂಕಂಚಿ ವರೆಂಗೂ ದೀಡ ನಮಸ್ಕಾರ ಆರಂಭಿಸಿದ್ದಾರೆ.  ಸುಮಾರು 65 ಕಿ. ಮೀ.ದೀಡ ನಮಸ್ಕಾರ ಆರಂಭಿಸಿದ್ದು, ರಮೇಶ ಭೂಸನೂರ ಗೆಲುವಿಗೆ ಯಂಕಂಚಿ ದಾವಲ್‌ಮಲೀಕ ದೇವಸ್ಥಾನಕ್ಕೆ ಹರಕೆ ಹೊತ್ತಿದ್ದ ಉಮೇಶ ಶಿಂಧೆ ಈಗ ದೀಡ ನಮಸ್ಕಾರ ಆರಂಭಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ರಮೇಶ ಭೂಸನೂರ ಗೆಲುವು ಘೋಷಣೆಯಾಗುತ್ತಿದ್ದಂತೆ ಉಮೇಶ ಶಿಂಧೆ ಅದೇ ದಿನ ಮ. 3 ಗಂಟೆಯಿಂದ ದೀಡ ನಮಸ್ಕಾರ ಆರಂಭಿಸಿದಾರೆ.

ಈ ಮಧ್ಯೆ, ಹಲವಾರು ಕಡೆಗಳಲ್ಲಿ ಬಿಜೆಪಿ ಮತ್ತು ರಮೇಶ ಭೂಸನೂರ ಅಭಿಮಾನಿಗಳು ನಾನಾ ದೇವಸ್ಥಾನಗಳಲ್ಲಿ ತೊಟ್ಟಿಲು ಕಾಯಿ ಒಡೆಯುವುದು ಸೇರಿದಂತೆ ತರಹೇವಾಹಿ ಹರಕೆಗಳನ್ನು ಮುಂದುವರೆಸಿದ್ದಾರೆ.

 

 

Leave a Reply

ಹೊಸ ಪೋಸ್ಟ್‌