ಬೆಂಗಳೂರು: ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ ರೂ. 7. ಇಳಿಕೆ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ ರೂ. 10 ಹಾಗೂ ರೂ. 5 ಕ್ಕೆ ಇಳಿಕೆ ಮಾಡಿತ್ತು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದಸರೆ. ಆ ಮೂಲಕ ಇಂಧನ ದರ ಇಳಿಸಿದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದಂತೆ ಆಗಿದೆ.
ಕೇಂದ್ರ ಸರಕಾರವು ಕಡಿತ ಮಾಡಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರಕಾರವೂ ಕೂಡ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 35 ರಿಂದ ಶೇ. 25.90ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಟ ತೆರಿಗೆಯನ್ನು ಶೇ. 24% ರಿಂದ ಶೇ. 14.34ಕ್ಕೆ ಇಳಿಕೆ ಮಾಡಿದೆ.
ಇದರಿಂದಾಗಿ ನ. 3 ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು ರೂ. 113.93 ರಿಂದ ರೂ.100.63 ಕ್ಕೆ ಇಳಿಕೆಯಾಗಲಿದ್ದು,, ಒಟ್ಟಾರೆ ದರ ಕಡಿತ ರೂ. 13.30 ಕಡಿಮೆಯಾಗಲಿದೆ.
ಅದೇ ರೀತಿ ನ. 3 ರಂದು ಇದ್ದ ಡೀಸೆಲ್ ನ ಚಿಲ್ಲರೆ ಮಾರಾಟ ದರವು ರೂ. 104.50 ರಿಂದ ರೂ. 85.03 ಕ್ಕೆ ಇಳಿಯಲಿದ್ದು, ಒಟ್ಟಾರೆ ರೂ. 19.47 ಕಡಿಮೆ ಆಗಲಿದೆ.