ಹಿರಿಯರು ದಶಕಗಳ ಹಿಂದೆ ಹಿಂದೆ ಹೊತ್ತಿದ್ದ ಹಳೆಯ ಹರಕೆಯನ್ನು ತೀರಿಸಿದ ಮುಸ್ಲಿಂ ಕುಟುಂಬ

ವಿಜಯಪುರ: ಇದು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಸವನಾಡಿನಲ್ಲಿ ನಡೆದ ಮನಮುಟ್ಟುವ ಸ್ಟೋರಿ.  ಶರಣರ ನಾಡು.  ಸೂಫಿ ಸಂತರ ಬೀಡು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ನಡೆದ ಭಾವೈಕ್ಯೆತೆಗೆ ಸಾಕ್ಷಿಯಾದ ಕಾರ್ಯಕ್ರಮ.  ವಿಶೇಷ ಕಾರ್ಯಕ್ರಮ ಎಂದರೂ ತಪ್ಪಲ್ಲ.   ಈ ಕಾರ್ಯಕ್ರಮದಲ್ಲಿ ಇಡೀ ಊರಿಗೆ ಊರೇ ಪಾಲ್ಗೋಂಡು ಸಂಭ್ರಮಿಸಿದ್ದು ಈ ಸಮಾರಂಭದ ಮತ್ತೋಂದು ವಿಶೇಷ.  ಇಲ್ಲಿ ಮುಸ್ಲಿಂ ಭಕ್ತರು ತಮ್ಮ ಹಿರಿಯರು 50 ವರ್ಷಗಳ ಹಿಂದೆ ಹಿಂದೂ ದೇವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ.  ಈ ಕುಟುಂಬದ […]

ವಿಜಯಪುರದಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮ- ನ್ಯಾಯಾಧೀಶ ಶ್ರೀನಾಥ ಕೆ. ಭಾಗಿ

ವಿಜಯಪುರ: ಕಾನೂನು ಅರಿವು, ನೆರವು ಕಾರ್ಯಕ್ರಮ ವಿಜಯಪುರ ನಗರದಲ್ಲಿ ನಡೆಯಿತು.   ಬೆಂಗಳೂರಿನ ಕಾನೂಸು ಸೇವೆಗಳ ಪ್ರಾಧಿಕಾರ, ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಜಯಪುರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಾಥ ಕೆ. ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಂ. ಐ. ಇಂಡಿಕರ, ಎಚ್. ಜಿ. ಮುಲ್ಲಾ, ಪಬ್ಲಿಕ್ ಪ್ರಾಸಿಕ್ಯೂಟರ್ ಕೊಲ್ಹಾರ, ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಭೇಟಿ ಮಾಡಿದ ಸಿಂದಗಿ ಶಾಸಕ ರಮೇಶ ಭೂಸನೂರ

ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿ ಶಾಸಕರಾಗಿ ಬೈ ಎಲೆಕ್ಷನ್ ನಲ್ಲಿ ಗೆಲುವು ಸಾಧಿಸಿದ ರಮೇಶ ಭೂಸನೂರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಂಗಳೂರಿಗೆ ತೆರಳಿದ ಅವರು, ಸಿಎಂ ನಿವಾಸದಲ್ಲಿ ಭೇಟಿ ಮಾಡಿ ತಮ್ಮ ಗೆಲುವಿಗೆ ಸಹಕರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ, ಹನುಮಂತ ದೇವರ ಭಾವಚಿತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಕೆ. ಎಸ್. ಈಶ್ವರಪ್ಪ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಇತರರು ಉಪಸ್ಥಿತರಿದ್ದರು.

ರೇಸ್ ಹೆಸರಿನಲ್ಲಿ ಪ್ರಾಣಿಗಳ ಮೇಲಾಗುವ ಹಿಂಸೆ ತಪ್ಪಿಸಿ- ಜಿಲ್ಲಾಡಳಿತಕ್ಕೆ ಎಂ ಎಲ್ ಸಿ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ನಾನಾ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿಗಳ ರೇಸ್ ಗಳನ್ನು ಸಂಘಟಿಸಿ, ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಜಿಲ್ಲಾಡಳಿತಕ್ಕೆ ಪತ್ರ ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಪತ್ರ ಬರೆದಿರುವ ಅವರು ಯಾವುದೇ ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸಬಾರದು. ಹಿಂಸೆಗೆ ಗುರಿಪಡಿಸಿದರೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಆದೇಶವನ್ನು ಉಲ್ಲಂಘಿಸಿ, ವಿಜಯಪುರ ಜಿಲ್ಲೆಯ […]

ಸ್ವಂತ ಖರ್ಚಿನಲ್ಲಿ ಒಳಚರಂಡಿ ದುರಸ್ತಿಗೆ ಸಹಾಯ ಮಾಡಿದ ಮಾಜಿ ಕಾರ್ಪೋರೇಟರ್ ಗೆ ಬಡಾವಣೆಗಳ ನಿವಾಸಿಗಳಿಂದ ಸನ್ಮಾನ

ವಿಜಯಪುರ: ವಿಜಯಪುರ ನಗರದ ವಿದ್ಯಾನಗರ ಮತ್ತು ರಹೀಮ ನಗರ ಪ್ರದೇಶದಲ್ಲಿ ಸಮಸ್ಯೆಗೆ ಕಾರಣವಾಗಿದ್ದ ಒಳಚರಂಡಿ ದುರಸ್ಥಿಗೆ ಮಾಜಿ ಕಾರ್ಪೋರೇಟರ್ ಅಬ್ದುಲ್ ರಜಾಕ್ ಹೊರ್ತಿ ವೈಯಕ್ತಿವಾಗಿ ಸಹಾಯ ಮಾಡಿದ್ದರು.  ಈ ಸಮಸ್ಯೆ ಬಗೆಹರಿಸಿದ ಹಿನ್ನೆಲೆಯಲ್ಲಿ ವಿದ್ಯಾನಗರ ಮತ್ತು ರಹೀಮ ನಗರ ನಿವಾಸಿಗಳು ಅಬ್ದುಲ್ ರಜಾಕ್ ಹೊರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮನೋವೈದ್ಯ ಡಾ. ಎಸ್. ಎನ್. ಅತ್ತಾರ, ಕುಲಕರ್ಣಿ ಮತ್ತು ವಿದ್ಯಾನಗರ ಹಾಗೂ ರಹೀಮ ನಗರ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದು, ಹೊರ್ತಿಯವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.