ಹಿರಿಯರು ದಶಕಗಳ ಹಿಂದೆ ಹಿಂದೆ ಹೊತ್ತಿದ್ದ ಹಳೆಯ ಹರಕೆಯನ್ನು ತೀರಿಸಿದ ಮುಸ್ಲಿಂ ಕುಟುಂಬ

ವಿಜಯಪುರ: ಇದು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಸವನಾಡಿನಲ್ಲಿ ನಡೆದ ಮನಮುಟ್ಟುವ ಸ್ಟೋರಿ.  ಶರಣರ ನಾಡು.  ಸೂಫಿ ಸಂತರ ಬೀಡು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ನಡೆದ ಭಾವೈಕ್ಯೆತೆಗೆ ಸಾಕ್ಷಿಯಾದ ಕಾರ್ಯಕ್ರಮ.  ವಿಶೇಷ ಕಾರ್ಯಕ್ರಮ ಎಂದರೂ ತಪ್ಪಲ್ಲ.

 

ಈ ಕಾರ್ಯಕ್ರಮದಲ್ಲಿ ಇಡೀ ಊರಿಗೆ ಊರೇ ಪಾಲ್ಗೋಂಡು ಸಂಭ್ರಮಿಸಿದ್ದು ಈ ಸಮಾರಂಭದ ಮತ್ತೋಂದು ವಿಶೇಷ.  ಇಲ್ಲಿ ಮುಸ್ಲಿಂ ಭಕ್ತರು ತಮ್ಮ ಹಿರಿಯರು 50 ವರ್ಷಗಳ ಹಿಂದೆ ಹಿಂದೂ ದೇವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ.  ಈ ಕುಟುಂಬದ ಕುಟುಂಬದ ಹಿರಿಯರು ಹೊತ್ತಿದ್ದ ಎರಡು ಹರಕೆಗಳನ್ನು ತೀರಿಸುವ ಮೂಲಕ ಈಗ ಹರಕೆ ತೀರಿಸಿದ ಸಂತಸದಲ್ಲಿದ್ದಾರೆ.

 

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದಾಶ್ಯಾಳ ಗ್ರಾಮದ ಮೈಬೂಬಸಾಬ ಟಕ್ಕೋಡ ಎಂಬುವರ ಕುಟುಬಂದ ಸದಸ್ಯರು ತಮ್ಮ ಗ್ರಾಮದ ಶ್ರೀ ಮಾರುತಿ ದೇವಸ್ಥಾನಕ್ಕೆ ಬೆಳ್ಳಿಯ ಮಾಯಾ ಮೂರ್ತಿಯನ್ನು ಅರ್ಪಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.  ಈ ಕಾರ್ಯಕ್ರಮದಲ್ಲಿ ಇಡೀ ಗ್ರಾಮದ ಸಮಗ್ರ ಜನತೆ ಪಾಲ್ಗೋಂಡಿದ್ದು ಗಮನಾರ್ಹವಾಗಿದೆ.  ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಗುರು-ಹಿರಿಯರು ಮತ್ತು ಮಾರುತಿ ದೇವಸ್ಥಾನದ ಪೂಜಾರಿಯವರು ಅನುಮತಿ ಪಡೆದು ಊರಿನ ತುಂಬೆಲ್ಲ ಮೂರ್ತಿಯ ಭವ್ಯ ಮೆವರಣಿಗೆ ನಡೆಸಿದ್ದಾರೆ.  ಕುಂಭಮೇಳದಲ್ಲಿ ಪಾಲ್ಗೋಂಡ ಸಾವಿರಾರು ಮಹಿಳೆಯರು ಊರ ತುಂಬೆಲ್ಲ ನಡೆದುಕೊಂಡು ಬಂದು ಇವರ ಸಂಭ್ರಮದಲ್ಲಿ ಪಾಲ್ಗೋಂಡಿದ್ದಾರೆ.  ಈ ಕಾರ್ಯಕ್ರಮದ ಬಳಿಕ ದೇವಸ್ಥಾನಕ್ಕೆ ಬಂದ ಎಲ್ಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಸಂಪ್ರದಾಯ ಪಾಲಿಸಿದ್ದಾರೆ.

 

ದಾಶ್ಯಾಳ ಗ್ರಾಮದ ಯುವಕ ಮೈಬೂಬಸಾಬ್ ತಮ್ಮ ತಂದೆ ದಿ. ಕಾಸಿಮಸಾಬ ದಸ್ತಗಿರಸಾಬ ಟಕ್ಕೊಡ ರೈತರಾಗಿದ್ದರು.  ಒಂದು ದಿನ ಎತ್ತಿನ ಗಾಡಿಯಲ್ಲಿ ಸಂಚರಿಸುವಾಗ ದಾರಿಯ ಮಧ್ಯೆ ಅಪಘಾತ ಸಂಭವಿಸಿ ಕಾಶಿಮಸಾಬ ದಸ್ತಗೀರಸಾಬ ಟಕ್ಕೋಡ ಗಂಭೀರವಾಗಿ ಗಾಯಗೊಂಡಿದ್ದರು.  ಆಗ ಮಾರುತಿ ದೇವರ ಪರಮ ಭಕ್ತರಾಗಿದ್ದ ಅವರ ತಾಯಿ ತಮ್ಮ ಮಗ ಗುಣಮುಖನಾದರೆ ಅರ್ಧ ತೊಲೆ ಚಿನ್ನವನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು.  ಇದಾದ ಬಳಿಕ ಗಾಯಗೊಂಡಿದ್ದ ವ್ಯಕ್ತಿ ಗುಣಮುಖನಾದರು.  ಆದರೆ, ಅವರ ತಾಯಿಗೆ ಹರಕೆ ತೀರಿಸಲು ಆರ್ಥಿಕ ಸಂಕಷ್ಟ ಎದುರಾಗಿತ್ತು.  ಆ ಹರಕೆ ಬಾಕಿ ಉಳಿದಿತ್ತು.

ಇದಾದ ಬಳಿಕ ಮೈಬೂಬಸಾಬ ಟಕ್ಕೋಡ ಅವರ ಸಹೋದರಿಯರು ತಮ್ಮ ಸಹೋದರರು ಆರ್ಥಿಕವಾಗಿ ಸಬಲರಾದರೆ ಹರಕೆ ತೀರಿಸುವುದಾಗಿ ಇದೇ ಮಾರುತಿ ದೇವರಿಗೆ ಹರಕೆ ಹೊತ್ತಿದ್ದರು. ಆ ಹರಕೆ ಕೂಡ ಬಾಕಿ ಇತ್ತು.  ಇದನ್ನು ಮೈಬೂಲಸಾಬ ಟಕ್ಕೋಡ ಮತ್ತು ಸಹೋದರರು ನೆನಪಿನಲ್ಲಿಟ್ಟುಕೊಂಡಿದ್ದರು.

ಈಗ ಮೈಬೂಬಸಾಬ ಟಕ್ಕೋಡ ಮತ್ತು ಸಹೋದರರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ.  ಈ ಹಿನ್ನೆಲೆಯಲ್ಲಿ ತಮ್ಮ ಅಜ್ಜಿ ಮತ್ತು ಸಹೋದರಿಯರು ಹೊತ್ತಿದ್ದ ಹರಕೆ ತೀರಿಸಬೇಕೆಂಬ ಬಯಕೆಯನ್ನು ಮೈಬೂಬಸಾಬ ಟಕ್ಕೋಡ ದಾಶ್ಯಾಳ ಗ್ರಾಮದ ಪ್ರಮುಖರು ಮತ್ತು ಮಾರುತಿ ಮಂದಿರದ ಪೂಜಾರಿಯವರ ಗಮನಕ್ಕೆ ತಂದಿದ್ದಾರೆ.  ಆಗ, ಗ್ರಾಮಸ್ಥರು ಹಿನ್ನೆಲೆಯಲ್ಲಿ ತಮ್ಮ ಮನೆಯ ಹಿರಿಯರು ಹೊತ್ತಿದ್ದ ಹರಕೆಯನ್ನು ನೆನಪಿನಲ್ಲಿಟ್ಟುಕೊಂಡಿದ್ದರು.  ಅಲ್ಲದೇ, ಒಂದು ದಿನ ಊರಿನ ಪ್ರಮುಖ ಪ್ರಮುಖರಿಗೆ ಮತ್ತು ಮಾರುತಿ ದೇವರ ಪೂಜಾರಿಯವರಿಗೆ ತಮ್ಮ ಮನೆಯ ಹಿರಿಯರು ಹೊತ್ತಿರುವ ಹರಕೆ ತೀರಿಸುವ ಕುರಿತು ಗಮನಕ್ಕೆ ತಂದಿದ್ದಾರೆ.  ಅಲ್ಲದೇ, ಹರಕೆ ತೀರಿಸಲು ಅನುಮತಿ ಕೇಳಿದ್ದಾರೆ.  ಆಗ ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಸಂತೋಷದಿಂದ ಕಾರ್ಯಕ್ರಮ ಆಯೋಜಿಸಲು ಒಪ್ಪಿದ್ದಾರೆ.

ಇದಾದ ಬಳಿಕ ಶುಭ ಮುಹೂರ್ತವಾದ ದೀಪಾವಳಿ ದಿನದಂದು ಮಾರುತಿ ಮಂದಿರಕ್ಕೆ ಬೆಳ್ಳಿಯ ಮಾಯಾ ಮೂರ್ತಿ ಕೊಡುವ ಧಾರ್ಮಿಕ ಕಾರ್ಯಕ್ರಮ ನಡೆಸಿ ಹರಕೆ ತೀರಿಸುವ ಮೂಲಕ ಮೂಲಕ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.

 

ಸುಮಾರು 50 ವರ್ಷಗಳ ಹಿಂದೆ ತಮ್ಮ ಅಜ್ಜಿ ಹೊತ್ತಿದ್ದ ಹರಕೆ, ನಂತರ ತಮ್ಮ ಸಹೋದರಿಯರು ಹೊತ್ತಿದ್ದ ಮತ್ತೋಂದು ಹರಕೆಯನ್ನು ಮೈಬೂಬಸಾಬ ಟಕ್ಕೋಡ ಮತ್ತು ಕುಟುಂಬಸ್ಥರು ತೀರಿಸುವ ಮೂಲಕ ಹರಕೆ ಮುಕ್ತರಾದ ಸಂತಸದಲ್ಲಿದ್ದಾರೆ.

Leave a Reply

ಹೊಸ ಪೋಸ್ಟ್‌