ವಿಜಯಪುರ: ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಮೂರು ಜನ ಬೈಕ್ ಕಳ್ಳರನ್ನು ಬಂಧಿಸುವ ಪೊಲೀಸರು ಅವರಿಂದ ಸುಮಾರು ರೂ. 21 ಲಕ್ಷ 60 ಸಾವಿರ ಮೌಲ್ಯದ 36 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಆನಂದ ಕುಮಾರ ಎಚ್. ಡಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಬೈಕ್ ಕಳ್ಳರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ವಿಜಯಪುರ ಜಿಲ್ಲೆ ಮತ್ತು ವಿಜಯಪಿರ ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಡಿವೈಎಸ್ಪಿ ಕೆ. ಸೊ. ಲಕ್ಷ್ಮಿ ನಾರಾಯಣ, ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಮೂರು ಜನ ಈ ತಂಡ ಆರೋಪಿಗಳನ್ನು ಬಂಧಿಸಿ 36 ಬೈಕ್ ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದರು.
ವಿಜಯಪುರ ನಗರದ ಯಾಸೀನ್ ಮಸೀದಿ ಬಳಿ ನಿವಾಸಿತೌಸಿಫ್ ಮಹಿಬೂಬ್ ಕಲಾದಗಿ(25) ಚಟ್ಟರಕಿ ಗ್ರಾಮದ ಸಮೀರ್ ಉಸ್ಮಾನಸಾಬ್ ಬಳಗಾನೂರ(24), ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾನಗರ ಎರಡನೇ ಕ್ರಾಸ್ ನಿವಾಸಿ ಸುನಿಲ ಮಲ್ಲನಗೌಡ ಬಿರಾದಾರ(20) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆನಂದ ಕುಮಾರ ಎಚ್. ಡಿ. ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಆನಂದ ಕುಮಾರ ಎಚ್. ಡಿ. ನಗದು ಬಹುಮಾನ ನೀಡಿ ಗೌರವಿಸಿದರು.
ಈ ಕಾರ್ಯಾಚರಣೆಯಲ್ಲಿ ಗಾಂಧಿಚೌಕ ಪಿಎಸ್ಐ ಗಳಾದ ಆರೀಫ್ ಮುಶಾಪುರಿ, ಆರ್. ಬಿ. ಕೂಡಗಿ ಮತ್ತು ಸಿಬ್ಬಂದಿಯಾದ ಎಸ್. ಬಿ. ಚನಶೆಟ್ಟಿ, ಬಾಬು ಕೆ. ಗುಡಿಮನಿ, ಎಚ್. ಎಚ್. ಜಮಾದಾರ, ಶಿವಾನಂದ ಅಳ್ಳಿಗಿಡದ, ಬಶೀರ್ ಅಹ್ಮದ್, ಎನ್. ಕೆ. ಮುಲ್ಕಾ, ರಾಮನಗೌಡ ಬಿರಾದಾರ, ಬಸವರಾಜ ದಿನ್ನಿ, ಸುನೀಲಗೌಳಿ, ಆನಂದ ಯಳ್ಳೂರ, ಸುನಿಲ್ ಗೌಳಿ, ಗುಂಡು ಗಿರಣಿವಡ್ಡರ, ಮತಿನ್ ಭಾಗವಾನ ಪಾಲ್ಗೊಂಡಿದ್ದರು ಎಂದು ಎಸ್ಪಿ ಆನಂದ ಕುಮಾರ ಎಚ್. ಡಿ. ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ, ಡಿವೈಎಸ್ಪಿ ಕೆ. ಸಿ. ಲಕ್ಷ್ಮೀನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಆರೀಓ್ ಮುಶಾಪುರಿ ಸೇರಿದಂತೆ ನಾನಾ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.