ಅಪ್ಪನ ಬದಲು ಚಿಕ್ಕಪ್ಪನಿಗೆ ಚಿನ್ನದ ಪದಕ ಅರ್ಪಿಸಿದ ಯುವತಿ, ತಂದೆ ತಾಯಿಗಳ ಪ್ರೋತ್ಸಾಹ ನೆನೆದು ಕಣ್ಣೀರಿಟ್ಟ ಚಿನ್ನದ ಯುವತಿ- ಮಹಿಳಾ ವಿವಿ ಘಟಿಕೋತ್ಸವದ ವಿಶೇಷ

ವಿಜಯಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.  ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು.  ಸಾಧನೆಗೆ ಪ್ರೋತ್ಸಾಹಿಸಿದವರ ನೆನಪಿರಬೇಕು.  ಇದು ಈ ಬಾರಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ತಲಾ ಮೂರು ಚಿನ್ನದ ಪದಕ ಪಡೆದ ಯುವತಿಯರು ಮಾಡಿದ ಸಾಧನೆಗೆ ಸಾಕ್ಷಿಯಾಗಿದೆ.

ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿರುವ  ಕರ್ನಾಚಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಹೊರವಲಯದ ತೊರವಿ ಜ್ಞಾನಶಕ್ತಿ ಆವರಣದಲ್ಲಿ ನಡೆಯಿತು.  ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಘಟಿಕೋತ್ಸವದಲ್ಲಿ ಪಾಲ್ಗೋಂಡರು.  ಸಂಪ್ರದಾಯದಂತೆ ರಾಜ್ಯಪಾಲರನ್ನು ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು.  ಈ ಸಂದರ್ಭದಲ್ಲಿ ಚಿನ್ನದ ಪದಕ, ಡಾಕ್ಟರೇಟ್, ಸ್ನಾತಕೋತ್ತರ ಮತ್ತು ಪದವಿಗಳನ್ನು ಪ್ರದಾನ ಮಾಡಿದರು.

ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕವನ್ನು ನೀಡಿದ ರಾಜ್ಯಪಾಲರು ಗೌರವಿಸಿದರು.  ಬಳಿಕ ಸಾಹಿತ್ಯ ಕ್ಚೇತ್ರದಲ್ಲಿ ಸಾಧನೆಗೈದ ಜಾನಕಿ ಶ್ರೀನಿವಾಸಮೂರ್ತಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸುಮಾ ಸುಧೀಂದ್ರ. ಹಾಗೂ ಸಮಾಜಸೇವೆಯಲ್ಲಿ ಸಾಧನೆಗೈದಿರುವ ಡಾ. ಕಲ್ಪನಾ ಸರೋಜಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಡಾ. ಸುಧಾಮೂರ್ತಿ ಅವರು ಸಾಮಾಜಿಕ ಜಾಲತಾಣದ ಮೂಲಕ ಆನಲೈನ್ ನಲ್ಲೇ ಭಾಷಣ ಮಾಡಿದರು.  ಹೆಣ್ಣುಮಕ್ಕಳು ಹಿಂಜರಿಕೆ ಬಿಡಬೇಕು,  ಯಾವತ್ತು ಧೈರ್ಯ ಕಳೆದುಕೊಳ್ಳಬಾರದು. ಇದ್ದುದ್ದನ್ನು ನೆನಪಿನಲ್ಲಿ ಇಟ್ಟುಕೊಂಡ್ರರೆ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ 32 ನಾನಾ ವಿಭಾಗಗಳ ಲ್ಲಿ ಸಾಧನೆ ಮಾಡಿದ 76 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ನೀಡಲಾಯಿತು.  ಟಾಪ್ 3 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ವಿತರಿಸಿದ ರಾಜ್ಯಪಾಲರು ನಿರ್ಗಮಿಸಿದ ಬಳಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಅವರು ಉಳಿದ ವಿದ್ಯಾರ್ಥಿನಿಯರಿಗೆ ಪದಕ ವಿತರಿಸಿ, ಜೊತೆಗೆ 48 ವಿದ್ಯಾರ್ಥಿನಿಯರಿಗೆ ಪಿ ಎಚ್ ಡಿ ಪದವಿ ಪ್ರದಾನ ಮಾಡಿದರು.

ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಅಂದರೆ 3 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿರಾದ ಸುನಂದಾ ಸಾವಕಾರ ಮತ್ತು ಸುಜಾತಾ ಮದರಖಂಡಿ ತಮ್ಮ ಸಾಧನೆಗೆ ಕಾರಣರಾದವರಿಗೆ ತಮ್ಮ ಚಿನ್ನದ ಪದಕಗಳನ್ನು ಅರ್ಪಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಸುನಂದಾ ಸಾವುಕಾರ.

ಸುನಂದಾ ಸಾವಕಾರ ತಂದೆಯಿಲ್ಲದೆ ಸಂಕಷ್ಟದಲ್ಲಿದ್ದಾಗ ಅವರ ಚಿಕ್ಕಪ್ಪ ತನಗೆ ಓದಲು ಸಹಾಯ ಮಾಡಿದ್ದು, ಇಂದು ಈ ಸಾಧನೆ ಮಾಡಲು ಅವರೇ ಕಾರಣ.  ಅವರೂ ಕೂಡ 6 ತಿಂಗಳ ಹಿಂದೆ ನಿಧನರಾಗಿದ್ದಾರೆ.  ತಂದೆ ತನಗೆ ವಿದ್ಯಾಭ್ಯಾಸ ನೀಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.  ಆದರೆ, ಚಿಕ್ಕಪ್ಪ ಕಲ್ಮೇಶ ತನಗೆ ಪ್ರೋತ್ಸಾಹ ನೀಡಿ ಶಿಕ್ಷಣ ನೀಡಿದ್ದಾರೆ.  ಹೀಗಾಗಿ ಅವರಿಗೆ ತಮ್ಮ ಚಿನ್ನದ ಪದಕಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ಸುಜಾತಾ ಮದರಖಂಡಿ.

ಸುಜಾತಾ ಮದರಖಂಡಿ ಮಾತನಾಡಿ, ತನ್ನ ಈ ಸಾಧನೆಗೆ ತನ್ನ ತಂದೆ ಮತ್ತು ತಾಯಿ ಕಾರಣ.  ಅವರು ಕೃಷಿಕರಾಗಿದ್ದರೂ ತನಗೆ ಓದಲು ತನು, ಮನ, ಧನದಿಂದ ಆಶೀರ್ವದಿಸಿದ್ದಾರೆ ಎಂದು ಹೇಳುತ್ತ ಬಿಕ್ಕಿ ಬಿಕ್ಕಿ ಕಣ್ಣೀರಿ ಹಾಕಿದ್ದು ಅವರ ಪೋಷಕರ ಕಾಳಜಿ ಮತ್ತು ಯುವತಿ ಮಾಡಿದ ಸಾಧನೆಗೆ ಪ್ರತೀಕವಾಗಿತ್ತು.

ನಾನಾ ವಿಭಾಗದಲ್ಲಿ ಈ ಬಾರಿ ಮೂವರು ವಿದ್ಯಾರ್ಥಿನಿಯರು ತಲಾ ಮೂರು ಮೂರು ಚಿನ್ನದ ಪದಕಗಳನ್ನು ಪಡೆದು ಸಾಧನೆಗೈದಿದ್ದು ವಿಶೇಷವಾಗಿತ್ತು. ಕರೋನಾ ಅಲೆಯ ಹಿನ್ನೆಲೆ ಘಟಿಕೋತ್ಸವದಲ್ಲಿ ವಿವಿಐಪಿ, ವಿಐಪಿ, ವಿವಿಯ ಬೋಧಕ ವರ್ಗ, ಆಡಳತ ವರ್ಗ, ಸಾಧನೆಗೈದ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

 

Leave a Reply

ಹೊಸ ಪೋಸ್ಟ್‌