ವಿಧ್ಯಾರ್ಥಿಗಳು ಸಮಯಕ್ಕೆ ಬೆಲೆ ನೀಡಿದರೆ ಸಾಧನೆ ಮಾಡಲು ಸಾಧ್ಯ- ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ

ವಿಜಯಪುರ.: ಕನ್ನಡ ಮಾಧ್ಯಮದಲ್ಲಿ ಓದಿ ಇಂದು ಅಧಿಕಾರಯಾಗಿದ್ದೇನೆ.  ವಿಧ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಸಮಯಕ್ಕೆ ಮೊದಲು ಗೌರವಿಸಬೇಕು.  ಸಮಯಕ್ಕೆ ಬೆಲೆ ನೀಡಿದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದಾರೆ.

ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ, ದಲಿತ ವಿದ್ಯಾರ್ಥಿ ಪರಿಷತ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಆಫಿಸರ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ? ಎಂಬುದರ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕೂಡ ನಿಮ್ಮ ಹಾಗೆ ವಿಧ್ಯಾರ್ಥಿ ಜೀವನದಲ್ಲಿ ಸ್ಪರ್ಧಾತ್ಮಕ ತರಬೇತಿಯಲ್ಲಿ ಭಾಗವಹಿಸುತ್ತಿದೆ.  ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಇರುವ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆ ನಡೆಸಲು ಓದುತ್ತಿದೆ ಎಂದು ಅವರು ತಮ್ಮ ವಿಧ್ಯಾರ್ಥಿ ಜೀವನದ ಬಗ್ಗೆ ಮೆಲುಕು ಹಾಕಿದರು.

ಕಷ್ಟ ಪಟ್ಟು ಓದಿ ಐಪಿಎಸ್ ಅಧಿಕಾರಿ ಆಗಿದ್ದೇನೆ.  ನೀವು ಕೊಡ ಓದಿದರೆ ಉನ್ನತ ಸ್ಥಾನಕ್ಕೆ ಏರಲು ಅನುಕೂಲವಾಗಲಿದೆ.  ಕಾರ್ಯಕ್ರಮದ ಆಯೋಜಕರಾಗಲಿ, ನಾವಾಗಲಿ ನಿಮಗೆ ದಾರಿ ತೋರುವ ಕೆಲಸ ಮಾಡಬಹುದು.  ಆ ದಾರಿಯ ಮೇಲೆ ನಡೆದು ಯಶಸ್ವಿಯಾಗುವದು ನಿಮ್ಮ ಕೈಯಲ್ಲಿದೆ ಎಂದು ಎಸ್ಪಿ ಎಚ್. ಡಿ. ಆನಂದ ಕುಮಾರ ವಿಧ್ಯಾರ್ಥಿಗಳನ್ನು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ, ಈಗಾಗಲೇ ದಲಿತ ವಿದ್ಯಾರ್ಥಿ ಪರಿಷತ ಈ ಜಿಲ್ಲೆಯಲ್ಲಿ ವಿಧ್ಯಾರ್ಥಿಗಳಿಗೆ ಅವರ ಹಕ್ಕುಗಳನ್ನು ದೊರಕಿಸಿ ಕೊಡಲು ಹಲವು ರೀತಿಯ ಹೋರಾಟದ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ.  ದಲಿತ ವಿದ್ಯಾರ್ಥಿ ಪರಿಷತ ಜೊತೆಗೂಡಿ ಕಾರ್ಯ ಮಾಡಿರುವ ಹಲವು ವಿಧ್ಯಾರ್ಥಿಗಳು ಇವತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಅದರಲ್ಲಿ ಉತ್ತೀರ್ಣರಾಗಿ ಉನ್ನತ ಅಧಿಕಾರಿಗಳಾಗಿ ಜನಪರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಜಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಗೋವಿಂದ ರೆಡ್ಡಿ ಅವರು ಉಪನ್ಯಾಸ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಗೌಡ ಕನ್ನೊಳ್ಳಿ, ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಯೋಜಕ ರಮೇಶ ಕಟ್ಟಿಮನಿ, ಡಾ. ಜಾಲಹಳ್ಳಿ ಮಠ, ಪರಿಷತ್ ಜಿಲ್ಲಾ ಸಂಯೋಜಕ ಹರ್ಷವರ್ಧನ್ ಪೂಜಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ಶರಣಬಸು ಕೊಪ್ಪಳ, ಅಂಬೇಡ್ಕರ್ ಆಫಿಸರ್ಸ್ ಅಕಾಡೆಮಿಯ ನಿರ್ದೇಶಕ ಬಾಲಾಜಿ ಕಾಂಬಳೆ, ದಲಿತ ವಿದ್ಯಾರ್ಥಿ ಪರಿಷತ್ ನ ಅಕ್ಷತಾ ಕಾಂಬಳೆ, ಅಕ್ಷಯಕುಮಾರ,, ಮಡಿವಾಳ ಡಂಗಿ, ಶರಣು ಅರಳಗುಂಡಗಿ, ಸಂತೋಷ ಪೂಜಾರಿ, ರಾಕೇಶ ಕುಮಟಗಿ, ರವಿ ರಾಯಚೂರು, ಶರಣು ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌