ತಾಯಂದಿರು ಮಕ್ಕಳಿಗೆ ಪಿಸಿವಿ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು- ಡಿಸಿ ಪಿ ಸುನಿಲ್ ಕುಮಾರ ಕರೆ

ವಿಜಯಪುರ: ಮಕ್ಕಳಿಗೆ ಭವಿಷ್ಯದಲ್ಲಿ ಮಾರಕ ಕಾಯಿಲೆಗಳಿಂದ ರಕ್ಷಿಸಲು ತಾಯಂದಿರು ತಂತಮ್ಮ ಮಕ್ಕಳಿಗೆ ಪಿಸಿವಿ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕರೆ ನೀಡಿದ್ದಾರೆ. 

ವಿಜಯಪುರ ನಗರದ ದರ್ಗಾ ಪ್ರದೇಶದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಒಂದು ಹೊಸ ಪಿಸಿವಿ ಲಸಿಕೆಯನ್ನು ಪರಿಚಯಿಸಲಾಗುತ್ತಿದೆ.  ಇದು ನ್ಯೂಮೊಕಾಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ ನಿಮ್ಮ ಮಗುವನ್ನು ರಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಪಿಸಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ನಿಮ್ಮ ಮಗುವಿಗೆ ಒಂದೂವರೆ ತಿಂಗಳು, ಮೂರು ತಿಂಗಳು, ಒಂಬತ್ತು ತಿಂಗಳು ವಯಸ್ಸಿನಲ್ಲಿ 3 ಡೋಸ್ ಪಿಸಿವಿ ಲಸಿಕೆಯನ್ನು ತಪ್ಪದೇ ಹಾಕಿಸಬೇಕು.  ಈ ಲಸಿಕೆಯೊಂದಿಗೆ ಇತರೆ ಲಸಿಕೆಗಳನ್ನು ನೀಡಲಾಗುವುದು.  ಏಕಕಾಲಕ್ಕೆ ಲಸಿಕೆ ಪಡೆಯುವುದು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ.  ಯಾವುದೇ ಆತಂಕಬೇಡ ಎಂದು ಅವರು ಹೇಳಿದರು.

ಈ ಮಧ್ಯೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋವಿಂದರೆಡ್ಡಿ ಅವರು, ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ ಕುರಿತು ಕರಪತ್ರ ಬಿಡುಗಡೆ ಮಾಡಿದರು.  ಬೆಂಗಳೂರಿನ ವೋಲ್ವೋಗ್ರುಪ್, ನಾರಾಯಣ ಹೆಲ್ತ್ ಸಿಟಿ ಅವರ ಸಹಯೋಗದೊಂದಿಗೆ ನ. 15 ರಿಂದ 19ರ ವರೆಗೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಡಬ್ಲ್ಯೂಎಚ್‍ಓ ಪ್ರತಿನಿಧಿ ಡಾ. ಮುಕುಂದ ಗಲಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗn, ತಾಲೂಕg ವೈಧ್ಯಾಧಿಕಾರಿ ಕವಿತಾ ದೊಡಮನಿ, ಡಾ. ಗುಂಡಬಾವಡಿ, ಸುರೇಶ ಹೊಸಮನಿ, ಜಿ. ಎಂ. ಕೊಲೂರ,  ಆರ್. ಎಂ. ಹಂಚನಾಳ, ಎನ್. ಆರ್. ಬಾಗವಾನ, ನಾರಾಯಣ್ ಹೆಲ್ತ್ ಸಿಟಿಯ ಕಾಶಿನಾಥ, ಆಜೇಶ್ ವಿ, ರಘು, ಭರತ, ಆಶಾ ಕಾರ್ಯಕರ್ತೆಯರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌