ಪಿಯು ಮಂಡಳಿಯಲ್ಲಿ ತುಘಲಕ ದರ್ಬಾರ ನಡೆಯುತ್ತಿದೆ- ಸಿಎಂ, ಶಿಕ್ಷಣ ಸಚಿವರು ಗಮನ ಹರಿಸಲಿ- ಆಡಳಿತಾರೂಢ ಬಿಜೆಪಿ ಎಂ ಎಲ್ ಸಿ ಅರುಣ ಶಹಾಪುರ ಆಗ್ರಹ

ವಿಜಯಪುರ: ಪಿಯು ಮಂಡಳಿಯ ಏಕಪಕ್ಷೀಯ ನಿರ್ಣಯದಿಂದ ಬೇಸತ್ತಿರುವ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯು ಮಂಡಳಿಯಲ್ಲಿ ತುಘಲಕ ದರ್ಬಾರ ನಡೆಯುತ್ದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ ಅವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಮದ್ಯಂತರ ಪರೀಕ್ಷೆಯನ್ನು ಬೋರ್ಡ ನಿಂದ ನಡೆಸುತ್ತೇವೆ ಎಂಬ ನಿರ್ಧಾರ ಮಾಡಿದೆ.  ಹಾಗಿದ್ದರೆ ಮಿಡ್ ಟರ್ಮ ಮತ್ತು ಪ್ರಿಪರೇಟರಿ ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು? ಎಂಬುದನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಬಪೇಕು.  ಈ ಪರೀಕ್ಷೆಯನ್ನು ಬೋರ್ಡ ನಿಂದ ಮಾಡುತ್ತೇವೆ ಎಂದು ಸುತ್ತೋಲೆ ಹೊರಡಿಸಿದೆ.  ಅದರಲ್ಲಿಯೂ ಸ್ಪಷ್ಟತೆ ಎಂದು ಅವರು ವಾಗ್ದಾಳಿ ನಡೆಸಿದರು.

ಪರಿಕ್ಷೆ ನಡೆಸುವದು ಎಂದರೆ ಒಂದು ಪರೀಕೆಗೊಂದು ಪಾವಿತ್ರ್ಯತೆ ಇದೆ.  ಈಗ ತರಾತುರಿಯಲ್ಲಿ ಕೊರೊನಾ ಮೂರನೇ ಅಲೆ ಬರುತ್ತದೆ.  ವಾರ್ಷಿಕ ಪರಿಕ್ಷೆ ನಡೆಸುವದು ಆಗಲ್ಲ.  ಪರಿಕ್ಷೆಯ ರಿಸರ್ಟ ಅನ್ನೇ ಬೇಸಾಗಿ ತೆಗೆದುಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದೆ.  ಇದೋಂದು ತರಾತುರಿ ನಿರ್ಧಾರ.  ಮಿಡ್ ಟರ್ಮ ಪರೀಕ್ಷೆ ನಡೆಸುವದೆಂದರೆ ವಾರ್ಷಿಕ ಪರೀಕ್ಷೆಯ ರೀತಿ ನಡೆಸುತ್ತೀರಾ? ಪ್ರಶ್ನೆ ಪತ್ರಿಕೆಗಳನ್ನು ಅಷ್ಟೇ ಸುರಕ್ಷಿತವಾಗಿ ಕಾಲೇಜುಗಳಿಗೆ ತಲುಪಿಸುತ್ತೀರಾ ಎಂಬುದು ತಮ್ಮ ಪ್ರಶ್ನೆಯಾಗಿದೆ ಎಂದು ಅರುಣ ಶಹಾಪುರ ಹೇಳಿದರು.

ನವ್ಹಂಬರ 29 ಕ್ಕೆ ಪರಿಕ್ಷೆ ಆರಂಭಿಸುವುದಾಗಿ ಘೋಷಣೆ ಮಾಡಿದೆ,  ಇವರ ತರಾತುರಿ ನಿರ್ಣಯದಿಂದಾಗಿ ಅಪಘಾತಕ್ಕೆ ಕಾರಣವಾಗುವ ಲಕ್ಷಣಗಳು ಕಾಣುತ್ತಿವೆ‌.  ಈ ಮೋದಲು ಪ್ರಿಪರೇಟರಿ ಪರೀಕ್ಷೆಗಳನ್ನು ಕಾಲೇಜಿನ ಪ್ರಾಚಾರ್ಯರೇ ನಡೆಸಿ ಮೌಲ್ಯಮಾಪನ ಮಾಡುತ್ತಿದ್ದರು.  ಆದರೇ, ಈಗ ರಾಜ್ಯ ಮಟ್ಟದಲ್ಲಿ ಏಕರೂಪದ ಪ್ರಶ್ನೆ ಪತ್ರಿಕೆ ಹೊರಡಿಸಿ ಪರೀಕ್ಷೆ ನಡೆಸುತ್ತೇವೆ ಎಂಬುದು ಎಷ್ಟರ ಮಟ್ಟಿಗೆ ಸರಿ? ಈಗ ಮಂಗಳೂರು, ಚಿಕ್ಕಮಗಳೂರು ಭಾಗದಲ್ಲಿ ತಡವಾಗಿ ಕಾಲೇಜುಗಳು ಆರಂಭವಾಗಿವೆ,  ಅಷ್ಟೇ ಅಲ್ಲ, ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಈಗ ಆದೇಶ ಹೊರಡಿಸಿದ್ದೀರಿ.  ಇದರ ಅರ್ಥ ಸರಕಾರದ ದೃಷ್ಟಿಯಲ್ಲಿ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ.  ಇದೆಲ್ಲವನ್ನು ನೋಡಿದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಇತ್ತೀಚಿನ ನಡೆಗಳು ಆತಂಕವನ್ನು ಉಂಟು ಮಾಡುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರದ ಭಾಗವಾಗಿದೆಯೋ ಅಥವಾ ಸ್ವಾಯತ್ತ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆಯೋ ಎಂಬುದನ್ನು ಸಿಎಂ ಮತ್ತು ಶಿಕ್ಷಣ ಸಚಿವರು ಸ್ಲಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಇಂದು ತುಘಲಕ್ ಆಡಳಿತಕ್ಕೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಣಯಗಳಿಗೂ ಯಾವುದೇ ವ್ಯತ್ಯಾಸ ಇಲ್ಲದಂತೆ ಕಾಣುತ್ತಿದೆ.  ಸಿ‌ಎಂ ಹಾಗೂ ಶಿಕ್ಷಣ ಸಚಿವರು ತಕ್ಷಣ ಇದೋಂದು ಸರಕಾರದ ಸಂಸ್ಥೆ ಎಂಬುದನ್ನು ವಿಶ್ವಾಸ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

 

Leave a Reply

ಹೊಸ ಪೋಸ್ಟ್‌