ಮೂರು ಕೃಷಿ ಕಾನೂನು ಹಿಂಪಡೆಯುವ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಹಿಂಒಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಬೆಳಿಗ್ಗೆ ಮಾತನಾಡಿದ ನರೇಂದ್ರ ಮೋದಿ, ಇಂದು ನಾನು ತಮಗೆಲ್ಲ ಈ ವಿಚಾರವನ್ನು ತಿಳಿಸಲು ಬಂದಿದ್ದೇನೆ. ನಾವು ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ದೇಶದ ರೈತರಿಗೆ ಮತ್ತು ಸಣ್ಣ ರೈತರಿಗೆ ಶಕ್ತಿ ಬರಲಿ‌ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಲು ತಮ್ಮ ಬೆಳೆಗಳನ್ನು ತಮಗೆ ಇಷ್ಟವಾದ ಕಡೆ ಮಾರಾಟ ಮಾಡಲು ಹೆಚ್ಚಿನ ಅವಕಾಶ ಕಲ್ಪಿಸಲು ಈ ಕಾನೂನುಗಳನ್ನು ಜಾರಿಗೆ ತಂದಿದ್ದೇವು. ಈ ಕಾನೂನು ಜಾರಿಗೆ ಕೃಷಿ ತಜ್ಞರು, ರೈತರು, ಅರ್ಥಶಾಸ್ತ್ರಜ್ಞರು ನಿರಂತರವಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಈ ಕುರಿತು ಈ ಹಿಂದಿನ ಸರಕಾರಗಳು ಕೂಡ ಈ ಬಗ್ಗೆ ನಂಥನ ನಡೆಸಿದ್ದವು. ಈ ಬಾರಿಯೀ ಸಂಸತ್ತಿನಲ್ಲಿ ಚರ್ಚೆ, ಮಂಥನ ನಡೆಸಿ ಕಾನೂನು ಜಾರಿ ಮಾಡಲಾಗಿತ್ತು. ದೇಶದ ಕೋಣೆ ಕೋಣೆಗಳಲ್ಲಿ ಕೋಟಿ ಕೋಟಿ ರೈತರು, ರೈತ ಸಂಘಟನೆಗಳು ಇದನ್ನು ಸ್ವಾಗತಿಸಿದವು. ಸಮರ್ಥಿಸಿದವರು. ‌ಇಂದು ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

 

ನಮ್ಮ ಸರಕಾರ ರೈತರ ಕಲ್ಯಾಣಕ್ಕಾಗಿ ಅದರಲ್ಲೂ ಸಣ್ಣ ರೈತರ ಕಲ್ಯಾಣಕ್ಕಾಗಿ ದೇಶದ ಕೃಷಿ ಜಗತ್ತು ಹಿತಕ್ಕಾಗಿ, ದೇಶದ ಹಿತಕ್ಕಾಗಿ, ಗ್ರಾಮೀಣ ಬಡವರ ಉಜ್ವಲ ಭವಿಷ್ಯಕ್ಕಾಗಿ ಪೂರ್ಣ ಸತ್ಯ ಮತ್ತು ನಿಷ್ಠೆಯಿಂದ ರೈತರ ಸಂಪೂರ್ಣ ಸಮರ್ಪಣೆ ಭಾವನೆಯಿಂದ, ಶುದ್ಧ ಮನಸ್ಸಿನಿಂದ ಈ ಕಾನೂನನ್ನು ಜಾರಿಗೆ ತಂದಿದ್ದೆವು. ಆದರೆ ಈ ಪವಿತ್ರ ರೈತರ ಹಿತದ ಕಾರ್ಯವನ್ನುನಾವು ನಮ್ಮ ಪ್ರಯತ್ನದಿಂದಾಗಿಯೇ ಕೆಲವು ರೈತರಿಗೆ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ. ‌ರೈತರ ಒಂದು ವರ್ಗ ಇದನ್ನು ವಿರೋದಿಸುತ್ತಿದ್ದರು. ಆದರೂ ಇದು ನಮಗೆ ಮಹತ್ವದಾಗಿತ್ತು. ಕೃಷಿ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಕೂಡ ಈ ಕಾನೂನುಗಳ ಮಹತ್ವವನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು. ನಾವು ಪೂರ್ಣ ವಿನಮ್ರತೆ, ತೆರೆದ ಮನಸ್ಸಿನಿಂದ ಮನವರಿಗೆ ಮಾಡಿಕೊಡಲು ಪ್ರಯತ್ನ ಮಾಡಿದ್ದೇವೆ. ಅನೇಕ ವೇದಿಕೆಗಳ ಮೂಲಕ ಲ, ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಮಾತುಕತೆಗಳು ನಿರಂತರವಾಗಿ ನಡೆಯುತ್ತ ಬಂದಿವೆ.‌‌ ನಾವು ರೈತರು ಆತಂಕಗಳು, ಭಾವನೆಗಳನ್ನು ಅರಿಯಲು ಯಾವುದೇ ಹಿಂಜರಿಕೆ ತೋರಲಿಲ್ಲ. ಕಾನೂನಿನಲ್ಲಿರುವ ಕೆಲವು ಅಂಶಗಳ ಕುರಿತು ಇದ್ದ ತಕರಾರು ಅಂಶಗಳನ್ನು ಸರಿಪಡಿಸಲು ತಿದ್ದುಪಡಿ ಮಾಡಲು ಸರಕಾರ ಸಿದ್ದವಾಗಿತ್ತು. ಈ ಮಧ್ಯೆ ಈ ವಿಚಾರ ಸುಪ್ರೀಂಕೋರ್ಟ್ ವರೆಗೂ ಹೋಗಿತ್ತು. ಈ ಎಲ್ಲ ವಿಚಾರಗಳು ದೇಶದ ಜನತೆಗೆ ಗೊತ್ತಿದೆ. ಹೀಗಾಗಿ ಅವುಗಳ ಬಗ್ಗೆ ನಾನು ಹೆಚ್ಚಿಗೆ ಹೇಳುವುದಿಲ್ಲ ಎಂದು ಅವರು ತಿಳಿಸಿದರು.

ನಾನು ಇಂದು ದೇಶದ ಜನತೆಯ ಕ್ಷಮೆ ಕೇಳುತ್ತೇನೆ. ಶುದ್ಧ ಮನಸ್ಸಿನಿಂದ ಪವಿತ್ರ ಹೃದಯದಲ್ಲಿ ಹೇಳುತ್ತೇನೆ. ಬಹುಷಃ ನಮ್ಮ ತಪಸ್ಸಿನಲ್ಲಿಯೇ ಕೊರತೆಯಿದೆ. ದೀಪದ ಬೆಳಕಿನಷ್ಟೇ ಇರುವ ಸತ್ಯವನ್ನು ನಾವು ಕೆಲವು ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇಂದು ಗುರುನಾನಕ್ ಅವರ ಜಯಂತಿ ಇದೆ. ಇದು ಯಾರನ್ನೂ ದೂಷಿಸುವ ಸಮಯವಲ್ಲ. ಇಂದು ನಾನು ತಮಗೆ ಮತ್ತು ಇಡೀ ದೇಶಕ್ಕೆ ತಿಳಿಸಲು ಬಯಸುತ್ತೇನೆ. ನಾವು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಈ ಮಾಸಾಂತ್ಯದಲ್ಲಿ ನಡೆಯಲಿರುವ ಸಂಸತ್ತಿನ ಅಧಿವೇಶನದಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದಯ ಪ್ರಧಾನಿ ಸ್ಪಷ್ಟಪಡಿಸಿದರು.

ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಆತ್ಮೀಯರೇ, ನಾನು ಹೋರಾಟದಲ್ಲಿ ನಿರತರಾಗಿರುವ ರೈತರಲ್ಲಿ ಮನವಿ ಮಾಡುತ್ತೇನೆ. ‌ಇಂದು ಗುರುನಾನಕ್ ಅವರ ಪವಿತ್ರ ಜನ್ಮದಿನವಿದೆ. ಈಗ ತಾವೆಲ್ಲರೂ ತಮ್ಮ ಮನೆಗಳಿಗೆ ತೆರಳಬೇಕು. ತಂತಮ್ಮ ಹೊಲಗಳಿಗೆ ಹೋಗಬೇಕು. ತಮ್ಮ ಕುಟುಂಬಗಳನ್ನು ಸೇರಿಕೊಳ್ಳಬೇಕು. ಮರಳಬೇಕು. ಬನ್ನಿ ಎಲ್ಲರೂ ಒಂದು ಹೊಸ ಆರಂಭವನ್ನು ಮಾಡೋಣ ಎಂದು ಅವರು ಭಾವನಾತ್ಮಕವಾಗಿ ದೇಶದ ಜನತೆಗೆ ಸಂದೇಶ ನೀಡಿದ್ದಾರೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಮತ್ತು ಪ್ರತಿಪಕ್ಷಗಳ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌