ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ವಿಜಯಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ.
ವಿಜಯಪುರ ನಗರದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿದೆ. ಸಾಹಿತ್ಯ ಪರಿಷತ್ ಸದಸ್ಯರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬೆ. 8ಕ್ಕೆ ಆರಂಭವಾಗಿರುವ ಮತದಾನ ಸಂ. 4ಕ್ಜೆ ಮುಕ್ತಾಯವಾಗಲಿದೆ. ಮ. 1ರ ವರೆಗೆ ಶೇ. 40ಕ್ಕೂ ಹೆಚ್ಚು ಮತದಾನವಾಗಿದೆ. ಈಗಲೂ ನಾನಾ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತಿರುವ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾಯುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಈ ಚುನಾವಣೆ ನಡೆಯುತ್ತಿದೆ.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿಗಳ ಹಣೆಬರಹ ರಾತ್ರಿಯ ವೇಳೆಗೆ ಪ್ರಕಟವಾಗಲಿದೆ.
ನಿಕಟಪೂರ್ವ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಲ್ಲಿಕಾರ್ಜುನ ಭೃಂಗಿಮಠ, ಹಾಸಿಂಪೀರ ವಾಲಿಕಾರ, ಕಲ್ಲಪ್ಪ ಯಲ್ಲಪ್ಪ ಶಿವಶರಣ ಮತ್ತು ಶ್ರೀಶೈಲ್ ಸಿದ್ದಣ್ಣ ಆಲೂರು ಕಣದಲ್ಲಿದ್ದಾರೆ.
ಮತದಾನ ಪೂರ್ಣಗೊಂಡ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮತದಾರರು ನಿಕಟಪೂರ್ವ ಅಧ್ಯಕ್ಷರ ಹಿಡಿಯುತ್ತಾರೋ ಅಥವಾ ಹೊಸಬರಿಗೆ ಅವಕಾಶ ಕಲ್ಪಿಸುತ್ತಾರೆ ಎಂಬುದು ರಾತ್ರಿ ವೇಳೆಗೆ ಸ್ಪಷ್ಟವಾಗಲಿದೆ.