ಸುನಿಲಗೌಡ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್- ಯುವನಾಯಕನಿಗೆ ಆದ್ಯತೆ ನೀಡಿದ ಕಾಂಗ್ರೆಸ್ ಹೈಕಮಾಂಡ್-ಉಳಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ ದ್ವಿಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಹಾಲಿ ಸದಸ್ಯ ಮತ್ತು ಯುವ ನಾಯಕ ಸುನಿಲಗೌಡ ಪಾಟೀಲ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಕಾಂಗ್ರೆಸ್ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಸಹೋದರ ಸುನೀಲಗೌಡ ಪಾಟೀಲ ಯುವ ನಾಯಕತ್ವಕ್ಕೆ ಜೈ ಎಂದಿದೆ. ಕಾಂಗ್ರೆಸ್ ಟಿಕೆಟ್ ನೀಡಿರುವ ಉಳಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಹಾಸಿಂಪೀರ ವಾಲಿಕಾರ ಗೆಲ್ಲಿಸಿ ಎಲ್ಲ ವಾದಗಳಿಗೆ ಕಸಾಪ ಚುನಾವಣೆ ಮೂಲಕ ಉತ್ತರ ನೀಡಿದ ಮತದಾರರು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಎಲ್ಲಾ ವಾದಿಗಳ ತರ್ಕವನ್ನು ತಲೆಕೆಳಗು ಮಾಡಿದೆ. ಈ ಚುನಾವಣೆಯಲ್ಲಿ ಮತದಾರರು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಹಾಸಿಂಪೀರ ವಾಲಿಕಾರ ಅವರನ್ನು ಮತ ಹಾಕಿ ಗೆಲ್ಲಿಸುವ ಮೂಲಕ ವಾದಿಗಳಿಗೆ ವ್ಯಾದಿಗೆ ಪರೋಕ್ಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಯಾರಾರು, ಯಾವ್ಯಾವ ಲೆಕ್ಕಾಚಾರ ಹಾಕಿದ್ದರೋ ಅದನ್ನೆಲ್ಲ ಉಲ್ಟಾಪಲ್ಟಾ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಹಾಸಿಂಪೀರ ವಾಲಿಕಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ನಿಕಟಪೂರ್ವ ಅಧ್ಯಕ್ಷ ಹಾಗೂ […]

ಕನಕದಾಸ ಜಯಂತಿ ಆಚರಣೆ: ಭಕ್ತಶ್ರೇಷ್ಠರ ಪುತ್ಥಳಿಗೆ ಸಿಎಂ ಪುಷ್ಪನಮನ

ಬೆಂಗಳೂರು: ಕನಕದಾಸ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಕನಕದಾಸರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ‌ಪುಷ್ಪನಮನ ಸಲ್ಲಿಸಿದರು.   ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಸುನೀಲಕುಮಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.  

ಬಸವ ನಾಡಿನಲ್ಲಿ ಮತ್ತೆ ಭೂಕಂಪನ ಅನುಭವ- ಮನೆಯಿಂದ ಹೊರಬಂದ ಜನತೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ರವಿವಾರ ರಾತ್ರಿ ಮತ್ತೆ ಭೂಮಿ ಕಂಪಿಸಿದೆ. ರವಿವಾರ ರಾತ್ರಿ10.49ಕ್ಕರ ಭೂಕಂಪನದ ಅನುಭವವಾಗಿದೆ. ದ್ರಾಕ್ಷಿ ನಾಡು ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಸಿದ್ದಾಪುರ ಕೆ., ಹುಬನೂರ ಭಾಗಗಳಲ್ಲಿ ಭೂಕಂಪನದ ಅನುಭವಾಗಿದೆ. ಭೂಮಿಯಿಂದ ಜೋರಾದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ, ಇದು ಭೂಕಂಪನ ಹೌದು ಅಥವಾ ಅಲ್ಲ ಎಂಬುದನ್ನು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೆ ಸ್ಪಷ್ಟಪಡಿಸಬೇಕಿದೆ.