ವಿಪ ಚುನಾವಣೆ: ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್- ಕುತೂಹಲ ಕೆರಳಿಸಿದ ಉಳಿದ ಪಕ್ಷೇತರರ ನಡೆ

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಮುಮಾರ ತಿಳಿಸಿದ್ದಾರೆ. ಒಟ್ಟು 12 ಅಭ್ಯರ್ಥಿಗಳಲ್ಲಿ ಪಕ್ಷೇತರ ಅಭ್ಯರ್ಥಿ ತುಳಸಪ್ಪ ದಾಸರ ಅವರ ನಾಮಪತ್ರ ತಿರಸ್ಕೃತವಾಗಿದೆ. ಇವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಚುನಾವಣೆ ವೆಚ್ಚ ಸಲ್ಲಿಸದ ಹಿನ್ನೆಲೆಯಲ್ಲಿ ಇವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮೂರು ವರ್ಷಗಳ ಕಾಲ ಅನರ್ಹಗೊಳಿಸಲಾಗಿದೆ‌. ಈ ಹಿನ್ನೆಲೆಯಲ್ಲಿ ಅವರ […]

ವಿಜಯಪುರದಲ್ಲಿ ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ- ನ. 26 ನಾಮಪತ್ರ ಹಿಂಪಡೆಯಲು ಕೊನೆಯ ದಿನ

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದೆ. ಒಟ್ಟು 12 ಅಭ್ಯರ್ಥಿಗಳಲ್ಲಿ ಒಬ್ಬರ ನಾಮಪತ್ರ ತಿರಸ್ಕೃತವಾಗಿದೆ. ಪಕ್ಷೇತರ ಅಭ್ಯರ್ಥಿ ತುಳಸಪ್ಪ ದಾಸರ ಅವರ ನಾಮಪತ್ರ ತಿರಸ್ಕೃತವಾಗಿದೆ. ಇವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಚುನಾವಣೆ ವೆಚ್ಚ ಸಲ್ಲಿಸದ ಹಿನ್ನೆಲೆಯಲ್ಲಿ ಇವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮೂರು ವರ್ಷಗಳ ಕಾಲ ಅನರ್ಹಗೊಳಿಸಲಾಗಿದೆ‌. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ವಿಜಯಪುರ ಚುನಾವಣೆ […]

ಹವಾಮಾನ ವೈಪರಿತ್ಯದ ಜೊತೆಗೆ ವರುಣಾಘಾತ- ರೈತರ ಪಾಲಿಗೆ ಹುಳಿಯಾದ ದ್ರಾಕ್ಷಿ- ಸಮೀಕ್ಷೆಗೆ ತಜ್ಞರ ಸಮಿತಿ ರಚಿಸಿದ ಜಿಲ್ಲಾಡಳಿತ

ವಿಜಯಪುರ: ಬಸವ ನಾಡು ದ್ರಾಕ್ಷಿ ಬೆಳೆಯ ತವರು ಜಿಲ್ಲೆ ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರ ಗೋಳು ಮುಂದುವರೆಯುತ್ತಲೇ ಇದೆ.  ಹವಾಮಾನ ವೈಪರಿತ್ಯ ಮತ್ತು ವರುಣನ ಅವಕೃಪೆಯಿಂದಾಗಿ ರೈತರ ಬಾಳನ್ನು ಸಿಹಿಯಾಗಿಸಬೇಕಿದ್ದ ದ್ರಾಕ್ಷಿ ಹುಳಿಯಾಗಲಾರಂಭಿಸಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ.  ಇಲ್ಲಿ ಸುಮಾರು 17000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಿದ್ದು, ಇದರಲ್ಲಿ ಸುಮಾರು 15000 ಎಕರೆಯಲ್ಲಿ ಈ ಬಾರಿ ಉತ್ತಮ ದ್ರಾಕ್ಷಿ ಇಳುವರಿ ನಿರೀಕ್ಷಿಸಲಾಗಿತ್ತು.  ಆದರೆ, ಕಳೆದ ಸುಮಾರು ದಿನಗಳಿಂದ ಉಂಟಾಗಿರುವ […]