ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಮುಮಾರ ತಿಳಿಸಿದ್ದಾರೆ.
ಒಟ್ಟು 12 ಅಭ್ಯರ್ಥಿಗಳಲ್ಲಿ ಪಕ್ಷೇತರ ಅಭ್ಯರ್ಥಿ ತುಳಸಪ್ಪ ದಾಸರ ಅವರ ನಾಮಪತ್ರ ತಿರಸ್ಕೃತವಾಗಿದೆ. ಇವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಚುನಾವಣೆ ವೆಚ್ಚ ಸಲ್ಲಿಸದ ಹಿನ್ನೆಲೆಯಲ್ಲಿ ಇವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮೂರು ವರ್ಷಗಳ ಕಾಲ ಅನರ್ಹಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ವಿಜಯಪುರ ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಳಿದ 11 ಜನರಲ್ಲಿ ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಚಂದ್ರಾಮಪ್ಪ ಯರನಾಳ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ನಾಮಪತ್ರ ಸ್ವೀಕೃತಗೊಂಡು ಸಧ್ಯಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ.
ಪಿ. ಎಚ್. ಪೂಜಾರ(ಬಿಜೆಪಿ) ಸುನೀಲಗೌಡ ಪಾಟೀಲ(ಕಾಂಗ್ರೆಸ್), ಕಾಶಿಮಪಟೇಲ ಹುಸೇನಪಟೇಲ ಪಾಟೀಲ(ಪಕ್ಷೇತರ), ಕಾಂತಪ್ಪ ಶಂಕ್ರೇಪ್ಪ ಇಂಚಗೇರಿ(ಪಕ್ಷೇತರ), ಗುರಲಿಂಗಪ್ಪ ಅಂಗಡಿ(ಪಕ್ಷೇತರ), ಗೊಲ್ಲಾಳಪ್ಪಗೌಡ ಶಂಕ್ರಗೌಡ ಪಾಟೀಲ(ಪಕ್ಷೇತರ), ದುರಗಪ್ಪ ಭರಮಪ್ಪ ಸಿದ್ದಾಪುರ, ಮಲ್ಲಿಕಾರ್ಜುನ ಕೆಂಗನಾಳ(ಪಕ್ಷೇತರ), ಮಲ್ಲಿಕಾರ್ಜುನ ಭೀಮಪ್ಪ ಕೆಂಗನಾಳ, ಮಲ್ಲಿಕಾರ್ಜುನ ಶಿವಲಿಂಗಪ್ಪ ಲೋಣಿ(ಪಕ್ಷೇತರ), ಮಾರುತಿ ಹನಮಪ್ಪ ಜಮೀನ್ದಾರ ಮತ್ತು ಶ್ರೀಮಂತ ಬಾರಿಕಾಯಿ(ಪಕ್ಷೇತರ).
ನ. 26 ಬಾಮಪತ್ರ ಹಿಂಪಡೆಯಲು ಕೊನೆಯ ದಿನ
ಈ ಮಧ್ಯೆ, ನ. 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಮ. 3ರ ವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ.