ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಕಾರ್ಣಿಕರು ಹೇಳಿದ ಭವಿಷ್ಯ ಮತ್ತೆ ನಿಜವಾಗಿದೆ.
ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿದ್ದೆ ಇಲ್ಲ. ಈ ಬಾರಿಯೂ ಅವರು ಹೇಳಿದ ಆ ವಿಚಾರ ಈಗ ನಿಜವಾಗಿದೆ. ಮಹಾಶಿವರಾತ್ರಿ ದಿನದಿಂದ ಐದು ದಿನಗಳ ಕಾಲ ಈ ಮಠದ ಜಾತ್ರೆ ನಡೆಯುತ್ತದೆ. ಮೊದಲ ದಿನ ಅಭಿಷೇಕ ಮತ್ತು ಉಪಾಸನೆ ನಡೆಯುತ್ತದೆ. ಎರಡನೇ ದಿನ ರಥೋತ್ಸವ ಇರುತ್ತದೆ. ಮೂರನೇ ದಿನ ಅನ್ನಸಂತರ್ಪಣೆ ಮತ್ತು ಹೊತ್ತಿಗೆ ಹೇಳುವ ಕಾರ್ಯಕ್ರಮ ನಡೆಯುತ್ತದೆ. ನಾಲ್ಕನೇ ದಿನ ಎತ್ತುಗಳ ಸ್ಪರ್ಧೆ, ಬಯಲಾಟ ಆಯೋಜಿಸಲಾಗಿರುತ್ತದೆ. ಐದನೇ ದಿನ ಉತ್ತಮ ಜಾನುವಾರುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯುತ್ತದೆ.
ಈ ವರ್ಷವು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಅವರು ನುಡಿದ ಭವಿಷ್ಯ ಈಗ ನಿಜವಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಮಠಾಧೀಶರು ಈ ವರ್ಷದ ಭವಿಷ್ಯ ನುಡಿದ ವಿಷಯ ಈಗ ವೈರಲ್ ಆಗಲು ಕಾರಣ ಇತ್ತೀಚೆಗೆ ಸುರಿದ ಧಾರಾಕಾರ ಮಳೆ. ಆಂಧ್ರ-ತೆಲಗು ರಾಜ್ಯಕ್ಕೆ ಕೇಡು ಈ ಬಾರಿ ಕೇಡು ಇದೆ ಎಂದು ಶ್ರೀ ಸಿದ್ಧರಾಮಯ್ಯ ಹೊಳಿಮಠ ಅಂದರೆ ಸಿದ್ದು ಮುತ್ಯಾ ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಕಳೆದ ವಾರ ತಿರುಪತಿಯಲ್ಲಿ ಉಂಟಾದ ಜಲಪ್ರಳಯ ಒಂಬತ್ತು ತಿಂಗಳ ಹಿಂದೆ ನುಡಿದ ಭವಿಷ್ಯಕ್ಕೆ ಸಾಕ್ಷಿಯಾಗಿದೆ. ಅಂದು ಆಂಧ್ರ ಪ್ರದೇಶ ಮತ್ತು ತೆಲಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಕಾದಿದೆ ಎಂದು ಇವರು ಹೇಳಿದ್ದರು. ಅದರಂತೆ ಕಳೆದ ವಾರ ವಾಯುಭಾರ ಕುಸಿತದಿಂದ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಜಲಪ್ರಳಯ ಉಂಟಾಗಿ ಸಿಕ್ಕಾಪಟ್ಟೆ ಹಾನಿಯಾಗಿತ್ತು. ನಾನಾ ವಾಹನಗಳು ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದವು. ಆಂಧ್ರ ಪ್ರದೇಶದಲ್ಲಿ ಅಪಾರ ಮಪ್ರಮಾಣದ ಆಸ್ತಿ, ಪಾಸ್ತಿ ಹಾನಿಯಾಗಿತ್ತು. ಅಂದು ನುಡಿದ ಭವಿಷ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅದೇ ರೀತಿ, ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದೂ ಶ್ರೀ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅಂದು ನುಡಿದ ಭವಿಷ್ಯದಂತೆ ಈಗ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಜಿಲ್ಲೆಯ ಅಲ್ಲಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇದೆ. ಇದೂ ಕೂಡ ಜನರಲ್ಲಿ ಆತಂಕ ತಂದಿದೆ. ಅಲ್ಲದೇ, ಬಬಲಾದಿ ಮಠದ ಕಾರ್ಣಿಕರು ಮಹಾಶಿವರಾತ್ರಿ ಜಾತ್ರೆಯ ಮೂರನೇ ದಿನ ನುಡಿಯುವ ಕಾಲಜ್ಞಾನದ ಹೊತ್ತಿಗೆಯಲ್ಲಿರುವ ಭವಿಷ್ಯ ಎಷ್ಟೋಂದು ನಿಖರ ಮತ್ತು ನಿಜವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.
500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನದ ಹೊತ್ತಿಗೆಯನ್ನು ಪ್ರತಿ ವರ್ಷ ಶಿವರಾತ್ರಿಯಂದು ಈ ಕಾಲಜ್ಞಾನವನ್ನ ಓದಲಾಗುತ್ತದೆ. ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿದೆ ಈ ಬಬಲಾದಿ ಮಠ. ಇಲ್ಲಿಗೆ ಬರುವ ಭಕ್ತಿರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತೆ. ಭಕ್ತರು ಸಹ ಮದ್ಯವನ್ನೇ ನೈವೇದ್ಯವಾಗಿ ತರುತ್ತಾರೆ. ಈ ಮಠದ ಭವಿಷ್ಯವನ್ನು ಕೇಳಲು ಸುತ್ತಮುತ್ತಲಿನ ಜಿಲ್ಲೆಗಳು ಅಷ್ಟೇ ಅಲ್ಲ, ನೆರೆಯ ರಾಜ್ಯಗಳ ಭಕ್ತರು ಬರುವುದು ವಿಶೇಷವಾಗಿದೆ.
One Response
ಕರೊಂನಾ ಬರುತ್ತಂತೆ ಯಾರು ಬಜಾವಿಷ್ಯ ಹೇಳಲಿಲ್ಲ. ಅವರ ಭವಿಷ್ಯ ಅವರಿಗ ಗೊತ್ತಿರಲ್ಲ. ಕೇವಲ ಅಂದಾಜು