ವಿಜಯಪುರದಲ್ಲಿ ಅಂತಿಮವಾಗಿ ಏಳು ಅಭ್ಯರ್ಥಿಗಳು ಕಣದಲ್ಲಿ-ಐದು ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್

ವಿಜಯಪುರ: ವಿಜಯಪುರ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯ ಕನಸು ಈಡೇರಿದೇ ಉಳಿದಿದೆ.

ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಪಕ್ಷೇತರ ಅಭ್ಯರ್ಥಿಯೊಬ್ಬರು ಸ್ಪಂದಿಸದ ಕಾರಣ ಈಗ ಚುನಾವಣೆ ಅನಿವಾರ್ಯವಾಗಿದೆ.

 

ವಿಜಯಪುರ ಮತಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಎರಡು ಸ್ಥಾನಗಳಿಗೆ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು.

 

ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನದ ವರೆಗೆ ಒಟ್ಟು ಐದು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಮಪತ್ರ ತಿರಸ್ಕೃತ

ತುಳಜಪ್ಪ ದಾಸರ(ಪಕ್ಷೇತರ).

ನಾಮಪತ್ರ ಹಿಂಪಡೆದವರು

1. ಕಾಶಿಮಪಟೇಲ ಹುಸೇನಪಟೇಲ ಪಾಟೀಲ(ಪಕ್ಷೇತರ),

2. ಮಾರುತಿ ಹನುಮಂತಪ್ಪ ಜಮೀನ್ದಾರ(ಪಕ್ಷೇತರ),

3. ಗುರಲಿಂಗಪ್ಪ ಅಂಗಡಿ(ಪಕ್ಷೇತರ),

4. ಗೊಲ್ಲಾಳಪ್ಪಗೌಡ ಶಂಕ್ರಗೌಡ ಪಾಟೀಲ(ಪಕ್ಷೇತರ),

5. ಬಸವರಾಜ ಚಂದ್ರಾಮಪ್ಪ ಯರನಾಳ(ಪಕ್ಷೇತರ).

ವಿಧಾನ ಪರಿಷತ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು

1. ಪಿ. ಎಚ್. ಪೂಜಾರ(ಬಿಜೆಪಿ),

2. ಸುನೀಲಗೌಡ ಪಾಟೀಲ(ಕಾಂಗ್ರೆಸ್),

3. ಕಾಂತಪ್ಪ ಶಂಕ್ರೇಪ್ಪ ಇಂಚಗೇರಿ(ಪಕ್ಷೇತರ),

4. ದುರಗಪ್ಪ ಭರಮಪ್ಪ ಸಿದ್ದಾಪುರ(ಪಕ್ಷೇತರ),

5. ಮಲ್ಲಿಕಾರ್ಜುನ ಕೆಂಗನಾಳ(ಪಕ್ಷೇತರ),

6. ಮಲ್ಲಿಕಾರ್ಜುನ ಶಿವಲಿಂಗಪ್ಪ ಲೋಣಿ(ಪಕ್ಷೇತರ)

7. ಶ್ರೀಮಂತ ಬಾರಿಕಾಯಿ(ಪಕ್ಷೇತರ).

ಈಗ ಡಿ. 10 ರಂದು ಮತದಾನ ನಡೆಯಲಿದೆ ಎಂದು ವಿಜಯಪುರ ನಿಲ್ಲದೋಕಾರಿ ಪಿ.ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌