ವಿಪ ಚುನಾವಣೆ: ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಹಾಲಿ, ಮಾಜಿ ಸಚಿವರು, ಶಾಸಕರ ಸಭೆ ನಡೆಸಿದ ಡಿ. ಕೆ. ಶಿವಕುಮಾರ
ವಿಜಯಪುರ: ವಿಧಾನ ಪರಿಷತ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ವಿಜಯಪುರದಲ್ಲಿ ಸಭೆ ನಡೆಸಿದರು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು 2018 ರ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಾನಾ ಸಂಘಟನೆಗಳ ಅಧ್ಯಕ್ಷರು ಸೇರಿದಂತೆ ಪ್ರಮುಖರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ವಿಧಾನ ಪರಿಷತ […]
ಎಸ್. ಆರ್. ಪಾಟೀಲ ಅವರಿಗೆ ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ಅಧಿಕಾರ ಸಿಗಲಿದೆ- ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ
ವಿಜಯಪುರ: ಎಸ್. ಆರ್. ಪಾಟೀಲ ಅವರಿಗೆ ಮುಂಬರುವ ದಿನಗಳಲ್ಲಿ ಬಡ್ಡಿ ಸಮೇತ ಎಲ್ಲ ಅಧಿಕಾರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ. ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್. ಆರ್. ಪಾಟೀಲ ಜೊತೆ ಮಾತನಾಡಿದ್ದೇನೆ. ಎಸ್. ಆರ್. ಪಾಟೀಲ ಹಿರಿಯ ನಾಯಕರು. ಅವರಿಗೆ ಟಿಕೆಟ್ ಕೊಡುವ ಎಲ್ಲ ಅರ್ಹತೆ ಇತ್ತು. ನಾಯಕತ್ವ ಇತ್ತ. ಅವರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೂ ಇತ್ತು. ಆದರೆ, ಬಹಳ ದೂರಾಲೋಚನೆಯಿಂದ ಹೈಕಮಾಂಡ್ ಇ ತೀರ್ಮಾನ ಕೈಗೊಂಡಿದೆ. […]
ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ- ಸಿಎಂ ಬದಲಾವಣೆ ಊಹಾಪೋಹಕ್ಕೆ ಉತ್ತರಿಸಲ್ಲ- ಸಚಿವ ಗೋವಿಂದ ಕಾರಜೋಳ
ವಿಜಯಪುರ: ಕಾಂಗ್ರೆಸ್ ನಲ್ಲಿ ಅಸಮಧಾನ ಬುಗಿಲೆದ್ದಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಬಂಡಾಯ ಇಲ್ಲ. ಕಾಂಗ್ರೆಸ್ ಗೆ ಬಂಡಾಯದಿಂದ ಹಿನ್ನಡೆಯಾಗಲಿದೆ. ಕಾಂಗ್ರೆಸ್ ಇನ್ನು ಹಳೆ ಸ್ಟೈಲ್ ನಲ್ಲಿದ್ದಾರೆ. ದಲಿತರು ಈಗಲು ಓಟ್ ಬ್ಯಾಂಕ್ ಎಂದು ಕಾಂಗ್ರೆಸ್ಸಿಗರು ಎಂದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ. ಪ್ರಧಾನಿ ಹೇಳಿದಂತೆ ಆಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಇಲ್ಲ. ಊಹಾಪೋಹಗಳಿಗೆ ಉತ್ತರ ಕೊಡಲ್ಲ. ಈಗ ಪ್ರವಾಹ, […]
ರೂ. 2.33 ಕೋ. ಮೌಲ್ಯದ ಚಿನ್ನಾಭರಣ, ಬೈಕ್ ಮತ್ತೀತರ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ ಬಸವ ನಾಡಿನ ಪೊಲೀಸರು
ವಿಜಯಪುರ: ವಿಜಯಪುರ ಜಿಲ್ಲೆಯ ಇತಿಹಾರದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ ನಡೆದ 252 ನಾನಾ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳನ್ನು ಭೇದಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿಲ್ಲೆಯಲ್ಲಿ ನಡೆದ 252 ನಾನಾ ಕಳ್ಳತನ, ಸುಲಿಗೆ ಮತ್ತು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 450ಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಅವರ ಬಳಿಯಿದ್ದ ರೂ. 2 ಕೋಟಿ […]
ಮಳೆಯಿಂದ ದ್ರಾಕ್ಷಿ, ತೊಗರಿ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಎಂ. ಬಿ. ಪಾಟೀಲ ಭೇಟಿ
ವಿಜಯಪುರ: ಹವಾಮಾನ ವೈಪರಿತ್ಯದಿಂದ ಸುರಿದ ಮಳೆಯಿಂದ ಹಾನಿಗಿಡಾದ ದ್ರಾಕ್ಷಿ ಮತ್ತು ತೊಗರಿ ಬೆಳೆಗಾರರ ತೋಟಗಳಿಗೆ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಆಗಾಗ ಸುರಿದ ತುಂತುರು ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ ಟಕ್ಕಳಕಿ, ಕಳ್ಳಕವಟಗಿ, ಬಾಬಾನಗರ, ತಾಜಪುರ, ತಿಕೋಟಾ ಹಾಗೂ ನಿಡೋಣಿ ಸುತ್ತಲಿನ ಗ್ರಾಮಗಳಿಗೆ ಶಾಸಕ ಎಂ.ಬಿ.ಪಾಟೀಲ ಭೇಟಿ […]