ವಿಜಯಪುರ: ಎಸ್. ಆರ್. ಪಾಟೀಲ ಅವರಿಗೆ ಮುಂಬರುವ ದಿನಗಳಲ್ಲಿ ಬಡ್ಡಿ ಸಮೇತ ಎಲ್ಲ ಅಧಿಕಾರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.
ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್. ಆರ್. ಪಾಟೀಲ ಜೊತೆ ಮಾತನಾಡಿದ್ದೇನೆ. ಎಸ್. ಆರ್. ಪಾಟೀಲ ಹಿರಿಯ ನಾಯಕರು. ಅವರಿಗೆ ಟಿಕೆಟ್ ಕೊಡುವ ಎಲ್ಲ ಅರ್ಹತೆ ಇತ್ತು. ನಾಯಕತ್ವ ಇತ್ತ. ಅವರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೂ ಇತ್ತು. ಆದರೆ, ಬಹಳ ದೂರಾಲೋಚನೆಯಿಂದ ಹೈಕಮಾಂಡ್ ಇ ತೀರ್ಮಾನ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಅವರಿಗೆ ಬಡ್ಡಿ ಸಮೇತ ಅವರಿಗೆ ಎಲ್ಲ ಅಧಿಕಾರ ಸಿಗಲಿದೆ. ಅವರಿಗೆ ಹೆಚ್ಚಿನ ಜವಾವ್ದಾರಿ ಕೊಡಬೇಕು ಅನ್ನುವ ಉದ್ದೇಶವಿದೆ ಎಂದು ತಿಳಿಸಿದರು.
ಬಿಜೆಪಿಗರಿಗೆ ಅಧಿಕಾರ ಮಾಡಲು ಗೊತ್ತಿಲ್ಲ
ಬಿಜೆಪಿಯವರಿಗೆ ಅಧಿಕಾರ ಮಾಡಲು ಗೊತ್ತಿಲ್ಲ. ಅವರಿಗೆ ಅಧಿಕಾರ ದಾಹ ಮಾತ್ರ ಇದೆ. ಸಿಎಂ ಬದಲಾವಣೆ ಅವರ ಪಾರ್ಟಿಯ ವಿಚಾರ. ಮೊದಲಿನಿಂದಲೂ ಬಿಜೆಪಿಯವರಿಗೆ ಅಧಿಕಾರ ನಡೆಸಲು ಬರುವುದಿಲ್ಲ. ಅವರಿಗೆ ಅಧಿಕಾರ ದಾಹ ಇದೆ, ಒಬ್ಬರಿಗೊಬ್ಬರಿಗಿಂತ ಒಬ್ಬರಿಗೆ ಅಧಿಕಾರ ದಾಹ ಹೆಚ್ಚಾಗಿದೆ. ಅವರಿಗೆ ಆಡಳಿತ ನಡೆಸಿ ಗೊತ್ತಿಲ್ಲ. ಜನರ ನೋವು ಗೊತ್ತಿಲ್ಲ. ಪ್ರಧಾನ ಮಂತ್ರಿಗಳು ಕ್ಷಮಾಪಣೆ, ಮಾಫಿ ಮಾಡಿ ಅಂತ ಕೇಳಿದಂತೆಂ ಕರ್ನಾಟಕದಲ್ಲಿ ಕೂಡ ಮಂತ್ರಿಗಳೇ ನಿಂತುಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಬೊಮ್ಮಾಯಿ ಅವರನ್ನು ಯಾಕೆ ಇಟ್ಟುಕೊಂಡು ಕೂತಿದಾರೋ ಗೊತ್ತಿಲ್ಲ. ಮಂತ್ರಿಗಳಿಗೆ ವಿಶ್ವಾಸ ಇಲ್ಲದೆ ಮೇಲೆ ಆ ಜಾಗದಲ್ಲಿ ಅವರು ಇರಬಾರದು. ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲ ಎಂದಾಗ ಅವರು ರಾಜೀನಾಮೆ ನೀಡಿದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಮೇಲೂ ವಿಶ್ವಾಸ ಇಲ್ಲ ಎಂದ ಮೇಲೆ ಅವರು ರಾಜೀನಾಮೆ ಕೊಟ್ಟು, ಅವರ ಕೆಲಸ ನೋಡಬೇಕು ಎಂದು ಹೇಳಿದ ಡಿ. ಕೆ. ಶಿವಕುಮಾರ, ಸಿಎಂ ಬದಲಾವಣೆಗಡ ಬಿಟ್ ಕಾಯಿನ್ ಸೈಡ್ ಎಫೆಕ್ಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಅದನ್ನು ನಾವು ಮಾತಾಡಲ್ಲ, ಅವರು ಮಾತಾಡಿದ್ದಾರೆ ಅವರೇ ಹೇಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಸಚಿವ ಕೆ. ಎಸ್. ಈಶ್ವರಪ್ಪ ಮುರುಗೇಶ ನಿರಾಣಿ ಮುಂದಿನ ಮುಖ್ಯಮಂತ್ರಿ ಎಂದಿದ್ದಾರಲ್ಲ ಅವರನ್ನು ಕೇಳಬೇಕು. ಈಗಿರುವ ಮುಖ್ಯಮಂತ್ರಿ ಆಡಳಿತ ಸರಿಯಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಹಿರಿಯ ನಾಯಕ ಹೇಳಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಕುಸಿತವಾಗಿದೆ. ನಾವೇನು ಮಾತನಾಡುತ್ತಿಲ್ಲ. ಭ್ರಷ್ಟಾಚಾರದ ವಿಚಾರವನ್ನು ನಾವು ಮಾತನಾಡಿಲ್ಲ. ಮೊದಲು ಮಾತನಾಡಿದ್ದೇ ಸಚಿವ ಕೆ. ಎಸ್. ಈಶ್ವರಪ್ಪನವರು ಮತ್ತು ವಿಧಾನ ಪರಿಷತ ಸದಸ್ಯ ಎಚ್. ವಿಶ್ವನಾಥ ಅವರು. ಇನಕಮ್ ಟ್ಯಾಕ್ಸ್ ರೇಡ್ ಗೆ ಹೋದಾಗ ಅವರಿಗೆ ಮಾಹಿತಿ ಸಿಕ್ಕಿದೆ. ಕೆಲವು ಡೈರಿ, ದಾಖಲೆ ಅವರು ಗೌಪ್ಯವಾಗಿ ಇಟ್ಟುಕೊಂಡು ಅದರ ಬಗ್ಗೆ, ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ರೇಪ್ ಆರೋಪವಿರುವ ಕೆಜಿಎಫ್ ಬಾಬುಗೆ ಟಿಕೆಟ್ ನೀಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವ ರೇಪಿಸ್ಟೂ ಇಲ್ಲ. ರೇಪಿಸ್ಟ್ ಯಾರು ಎಲೆಕ್ಷನ್ ಮಾಡ್ತಿದಾರೆ? ನೋಡಿದ್ರಲ್ಲ. ರೇಪಿಸ್ಟ್ ಗೆ ಯಾರು ಬೆಂಬಲ ಕೊಡ್ತಿದಾರೆ? ಎಂದು ಹೇಳಿ ಡಿ. ಕೆ. ಶಿವಕುಮಾರ ಅಲ್ಲಿಂದ ಮುಂದೆ ಸಾಗಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಸೇವಾದಳದ ಮುಖಂಡ ಡಾ. ಗಂಗಾಧರ ಸಂಬಣ್ಣಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಆಗಮಿಸಿದ ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರನ್ನು ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹಾರ ಹಾಕಿ, ಹೂಮಳೆ ಸುರಿಸಿ ಸ್ವಾಗತಿಸಿದರು.