ಕಾಣೆಯಾಗಿದ್ದ ಬಾಲಕ ನೀರಿನ ಕೆಸರಿನಲ್ಲಿ ಪತ್ತೆ- ಮುಂದೇನಾಯ್ತು ನೋಡಿ

ವಿಜಯಪುರ: ಇದು ಮನ ಮಿಡಿಯುವ ಸ್ಟೋರಿ. ತನಗಾದ ಪರಿಸ್ಥಿಯ ಬಗ್ಗೆ ಅರಿವಿಲ್ಲದೇ ಪರಿತಪಿಸುತ್ತಿದ್ದ ಬಾಲಕನ ಅಮಾಯಕ ಪರಿಸ್ಥಿತಿಗೆ ಸಾಕ್ಷಿ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಮನೆಯಿಂದ ಕಾಣೆಯಾಗಿದ್ದ. ಮನೆಯವರು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆತನ ಪೋಷಕರು ಮತ್ತು ಸಂಬಂಧಿಕರ ಆತಂಕ ಹೆಚ್ಚಾಗಿತ್ತು. ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ.

ನಿನ್ನೆ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದ ಬಾಲಕ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಮೇಲಾಗಿ ಮಾನಸಿಕ ಅಸ್ವಸ್ಥ ಬೇರೆ. ಎಲ್ಲಿದ್ದಾನೋ? ಹೇಗಿದ್ದಾನೋ ಎಂಬ ಆತಂಕ ಬಾಲಕನ ಮನೆಯವರಲ್ಲಿ ಚಿಂತೆಗೀಡು ಮಾಡಿತ್ತು. ಎಲ್ಲೆಡೆ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ.

ಬೆಳಗಿನ ಜಾವ ಬಾಲಕನನ್ನು ನೋಡಿದ ಸ್ಥಳೀಯರು ಬಾಲಕನ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ನಿನ್ನೆ ಮಧ್ಯಾಹ್ನ ಕಾಣೆಯಾಗಿದ್ದ ಬಾಲಕ ಹಳ್ಳದ ನೀರಿನ ಕೆಸರಿನಲ್ಲಿ ಸಿಲುಕಿದ್ದ. ಕೆಸರು ಹೆಚ್ಚಾಗಿದ್ದರಿಂದ ಅಲ್ಲಿಂದ ಹೊರ ಬರಲಾಗದೇ ಅಲ್ಲಿಯೇ ಉಳಿದಿದ್ದ. ಆತನನ್ನು ನೋಡಿದ ಸ್ಥಳೀಯರು ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ. ಯುವಕನೊಬ್ಬ ಮತ್ತೋಬ್ಬ ಯುವಕನ ಸಹಾಯದಿಂದ ಮೇಲೆತ್ತಲು ಪ್ರಯತ್ನಿಸಿದ್ದಾನೆ. ಬಾಲಕನಿಗೆ ಕೈನೀಡು ಮೇಲೆತ್ತುತ್ತೇವೆ ಎಂದರೂ ಆತ ಸ್ಪಂದಿಸಿಲ್ಲ. ಆಗ ಓರ್ವ ಯುವ ಕೆಸರಿನ ಆಚೆ ನಿಂತು ಮತ್ತೋಬ್ಬ ಯುವಕನಿಗೆ ಧೈರ್ಯ ಹೇಳಿ ಕೆಳಕ್ಕೆ ಇಳಿಸಿ ಕೆಸರಿನಲ್ಲಿ ಸಿಲುಕಿದ್ದ ಬಾಲಕನ ಕೈ ಹಿಡಿದು ಮೇಲಕ್ಕೆ ಎಳೆದಿದ್ದಾನೆ. ನಂತರ ಕೆಸರಿನಿಂದ ಬಾಲಕನನ್ನು ಹೊರ ತೆಗೆದ ಬಳಿಕ ಆತನ ಪರಿಸ್ಥಿತಿ ಕಂಡು ಮರುಕ ಪಟ್ಟಿದ್ದಾರೆ.

ಬಾಲಕ‌ ಸಂತೋಷ ಮಾದರ‌ ಅಲ್ಲಿಗೆ ಏಕೆ ಹೋಗಿದ್ದ ಎಂಬುದು ಆತ ಮೇಲೆ ಬಂದ ಬಳಿಕವಷ್ಟೇ ಗೊತ್ತಾಗಿದೆ. ಆತ ಅರೆನಗ್ನಾವಸ್ಥೆ ಕಂಡು ಬಾಲಕ ಬಹಿರ್ದೆಸೆಗೆ ಹೋಗಿರುವುದು ತಿಳಿದು ಬಂದಿದೆ.

ಒಟ್ಟಾರೆ, ಅಮಾಯಕ ಅಪ್ರಾಪ್ತ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕ ಹತ್ತಾರು ಗಂಟೆ ಕೆಸರಿನಲ್ಲಿ ಸಿಲುಕಿ ಪರದಾಡಿದ್ದು ಮಾತ್ರ ಎಂಥವರಲ್ಲೂ ಮರುಕ ತಂದಿದೆ.

ಕೆಸರಿನಿಂದ ಬಾಲಕನನ್ನು ಮೇಲಕ್ಕೆತ್ತಿದ ಸ್ಥಳಿಯರು ಹಳ್ಳದ‌ ಕೆಸರಿನಿಂದ ಬಾಲಕನ ರಕ್ಷಣೆ ಮಾಡಿ ಮನೆಗೆ ಕರೆ ತಂದು ನೀರು ಹಾಕಿ ಆತನನ್ನು ಸ್ನಾನ ಮಾಡಿಸಿದ್ದಾರೆ.

ಅಂತೂ ಇಂತೂ ಬಾಲಕ ಸುರಕ್ಷಿತವಾಗಿ ಸಿಕ್ಕಿದ್ದು ಮಾತ್ರ ಸ್ಥಳಿಯರು ಮತ್ತು ಕುಟುಂಬದವರು ನಿಟ್ಟುಸಿರು ಬಿಡುವಂತೆ ಮಾಡಿದೆ.

Leave a Reply

ಹೊಸ ಪೋಸ್ಟ್‌