ವಿಜಯಪುರ: ವಿಜಯಪುರ ಸಿಇಎನ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.
ಆನಲೈನ್ ಮೂಲಕ ವಂಚಿಸುತ್ತಿದ್ದ ನೈಜಿರಿಯನ್ ಪ್ರಜೆಯನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿ ಎಂಬುವರಿಗೆ ಆಯಿಲ್ ವ್ಯವಹಾರ ಮಾಡುವುದಾಗಿ ಹೇಳಿ ಆನ್‌ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ್ದ. ಈ ಕುರಿತು ತನಿಖೆ ಕೈಗೊಂಡ ವಿಜಯಪುರ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ಘಟಕದ(ಸಿಇಎನ್) ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಗುಜರಾಜಿನ ಜಾಮನಗರದಲ್ಲಿ ಬಂಧಿಸಿ ಕರೆತಂದಿದೆ.
ನೈಜೀರಿಯ ದೇಶದ ಆಪ್ರೋಚ್ಚಿ ಆಂಥೋನಿ ಆರೋಪಿಯನ್ನು ಬಂಧಿಸಿರುವ ವಿಜಯಪುರ ಜಿಲ್ಲೆಯ ಸಿಇಎನ್ ಪೊಲೀಸರು, ಬಂಧಿತ ಆರೋಪಿ ಜಿಲ್ಲೆಯ ಕೋಲ್ಹಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿ ಅವರಿಗೆ ಆನಲೈನ್ ಮೂಲಕ ರೂ. 16 ಲಕ್ಷ ವಂಚನೆ ಮಾಡಿರುವುದನ್ನು ಪತ್ತೆ ಮಾಡಿದೆ.
ಈ ಕುರಿತುಬಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.