ಸುನೀಲಗೌಡ ಪಾಟೀಲರ ಆಯ್ಕೆ ಶೇ. 100ರಷ್ಟು ಖಚಿತ- ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳುವವರಿಗೆ ತಿರುಗೇಟು ನೀಡಿದ ಎಸ್. ಆರ್. ಪಾಟೀಲ

ಬಾಗಲಕೋಟೆ: ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಪುನರಾಯ್ಕೆ ಶೇ. 100ರಷ್ಚು ಖಚಿತವಾಗಿದೆ.  ಯಾರಾರೋ ತಮ್ಮ ಹೆಸರು ಹೇಳಿಕೊಂಡರೆ ಪ್ರಯೋಜನವಿಲ್ಲ ಎಂದು ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿರುವ ಎಂ ಎಲ್ ಸಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವರು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ.  ಆದರೆ, ಯಾರಾರದೋ ಹೆಸರು ಬಳಸಿಕೊಂಡು ಕೆಲವರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ.  ದಯಮಾಡಿ ನಾನು ಅತ್ಯಂತ ಕಳಕಳಿಯಿಂದ ತಮಗೆ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.  ಬೀಳಗಿಯ ಜನ ಕಾಂಗ್ರೆಸ್ಸಿನ ಗಂಡು ಮೆಟ್ಟಿನ ನೆಲದವರು.  ಕೆಲವು ರಾಜಕಾರಣಿಗಳು, ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ್ತೋಬ್ಬ ಅಭ್ಯರ್ಥಿಯನ್ನು ನಿಲ್ಲಿಸಿ ಹಣದ ವಹಿವಾಟು ಮಾಡಿ ಪಕ್ಷದ ಅಭ್ಯರ್ಥಿಯನ್ನು ಕೆಡವಲು ಮತ್ತು ಪಕ್ಷದ ವಿರೋಧ ಮಾಡುವ ಕೆಲಸ ರಾಜ್ಯದಲ್ಲಿ ನಡೆದಿವೆ.  ಆದರೆ, ಬೀಳಗಿಯ ತಾಲೂಕಿನ ಜನ ಕಾಂಗ್ರೆಸ್ ಗಂಡು ಮೆಟ್ಟಿನ ನೆಲದಲ್ಲಿ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ರಾಜ್ಯ ಮಟ್ಟದ ನಾಯಕರ ವರೆಗೆ ಪಕ್ಷಕ್ಕೆ ನಿಷ್ಠೆಯಿಂದ ಇರುವ ಜನರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೆಲವು ಜನ ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದತ್ದಾರೆ.  ಇವರಿಗೆ ಅಸಮಾಧಾನವಾಗಿದೆ.  ಅವರಿಗೆ ಅಸಮಾಧಾನವಾಗಿದೆ ಎಂದು ಹೇಳಿದ್ದಾರೆ.  ಆದರೆ, ದಯಮಾಡಿ ನಿಮ್ಮೆಲ್ಲರಲ್ಲಿ ನಾನು ಕಳಕಳಿಯಿಂದ ನಾನು ಎರಡೂ ಕೈಜೊಡಿಸಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.  ಯಾವುದೇ ನಾಯಕನ ಹೆಸರು ತೆಗೆದುಕೊಂಡು ಅಪಪ್ರಚಾರ ಮಾಡಿದರೆ ಯಾರೂ ಅದಕ್ಕೆ ಕಿವಿಗೊಡಬೇಡಿ.  ನಿಮ್ಮ ಮತ ಕಾಂಗ್ರೆಸ್ ಪಕ್ಷಕ್ಕೆ ಮೀಸಲಾಗಿರಲಿ ಎಂದು ಮನವಿ ಮಾಡುತ್ತೇನೆ.  ತಮಗೆಲ್ಲರಿಗೂ ಕೈ ಮುಗಿದು ಕೇಳಿಕೊಳ್ಳುತ್ತೇನೆ.  ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಸುನೀಲಗೌಡ ಪಾಟೀಲ ಅವರಿಗಕೆ ಹಾಕಿ.  ನಮ್ಮ ಪಕ್ಷದಿಂದ ಒಬ್ಬರೆ ಅಭ್ಯರ್ಥಿ ಕಣದಲ್ಲಿದ್ದಾರೆ.  ಹೀಗಾಗಿ ಮೊದಲ ಪ್ರಾಶಸ್ತ್ಯದ ಮತವನ್ನು ಮಾತ್ರ ಸುನೀಲಗೌಡ ಪಾಟೀಲ ಪರ ಚಲಾಯಿಸಿ.  ಬೇರಾರಿಗೂ ಎರಡನೇ ಪ್ರಾಸಸ್ತ್ಯದ ಮತ ಹಾಕಬೇಡಿ. ತಾವೆಲ್ಲ ಆಶೀರ್ವಾದ ಮಾಡಿ.  ಲೆಟ್ ಅಸ್ ಬಿಲೀವ್.  ಸುನೀಲಗೌಡ ವಿಲ್ ಡೆಲಿವರ್ ಗೂಡ್ಸ್.  ಸುನೀಲಗೌಡರು ನಮಗೆಲ್ಲ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ನಮಗೆಲ್ಲರಿಗಿದೆ.  ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವಾದ ಮಾಡಿ ಎಂದು ಎಸ್. ಆರ್. ಪಾಟೀಲ ಮನವಿ ಮಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಬಗ್ಗೆ ಸದನದ ಒಳಗ ಹೋರಾಟ ಮಾಡಿದ್ದೇನೆ.  ಅಷ್ಟೇ ಅಲ್ಲ, ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಎಂದು ನಿರ್ಣಯ ಕೈಗೊಂಡು ಚಾರಿತ್ರಿಕವಾಗಿ ಪಾದಯಾತ್ರೆ ನಡೆಸುವ ಮೂಲಕ ಹೋರಾಟ ಮಾಡಿದ್ದೇವೆ.  ಬೀಳಗಿ ತಾಲೂಕಿನ ಮುಲುಗಡೆ ಪ್ರದೇಶದ ಜನ ಆತಂಕ ಪಡುವ ಅಗತ್ಯವಿಲ್ಲ.  ಸುನೀಲಗೌಡರ ಆಯ್ಕೆ 100ಕ್ಕೆ 100 ಖಚಿತ.  ಅದರಲ್ಲಿ ಎರಡು ಮಾತಿಲ್ಲ.  ನಾನು ಜನೇವರಿ 5ರ ವರೆಗೆ ನಾನು ಪ್ರತಿಪಕ್ಷದ ನಾಯಕನಾಗಿ ಇರುತ್ತೇನೆ.  ನಂತರ ಸುನೀಲಗೌಡ ಪಾಟೀಲ ಅವರು ಈ ಭಾಗದ ಜನರ ಅಹವಾಲುಗಳನ್ನು ಪ್ರಜ್ಞಾಪೂರಕವಾಗಿ ಪ್ರಮಾಣಿಕವಾಗಿ ಈ ಭಾಗದ ಜನತೆಗೆ ನ್ಯಾಯ ಕೊಡುವ ಕೆಲಸವನ್ನು ಮಾಡಬೇಕು ಎಂದು ತಮ್ಮೆಲ್ಲರ ಪರವಾಗಿ ಮನವಿ ಮಾಡುತ್ತೇನೆ.  ಅವರು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದರು.

ಯುಕೆಪಿ 3ನೇ ಹಂತ ಯೋಜನೆಗಾಗಿ ಸದನ ಒಳಗೆ ಸುನೀಲಗೌಡ ಮತ್ತು ಸದನದ ಹೊರಗೆ ನಾನು ಇದರ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡುತ್ತೇನೆ.  ನನಗೆ ಎಂ ಎಲ್ ಸಿ ಆಗುವುದು ಬಹಳ ಮಹತ್ವದ್ದಲ್ಲ.  ಈ ಭಾಗದ ಜನರ ಜನರ ಕೆಲಸವಾಗಬೇಕೆಂಬುದು ನನಗೆ ಮಹತ್ವದ್ದಾಗಿದೆ.  ಈ ಭಾಗದ ಅಭಿವೃದ್ಧಿಯಾಗಬೇಕೆಂಬುದು ಮಹತ್ವದ್ದಾಗಿದೆ.  ಈ ಜನರ ದುಃಖ-ದುಮ್ಮಾನ, ಕಣ್ಣೀರು ಒರೆಸಬೇಕು ಎಂಬುದು ನನಗೆ ಮಹತ್ವದ್ದಾಗಿದೆ ಎಂದು ಎಸ್. ಆರ್. ಪಾಟೀಲ ಇದೇ ವೇಳೆ ತಿಳಿಸಿದರು.

 

ಗ್ರಾಮ ಸ್ವರಾಜ್ಯದ ಕಲ್ಪನೆ ಕಂಡವರು ಮಹಾತ್ಮಾ ಗಾಂಧಿ.  ಇದನ್ನು ಜಾರಿಗೆ ತಂದವರು ಮಾಜಿ ಪ್ರಧಾನಿ ರಾಜೀವ ಗಾಂಧಿಯವರು.  ಎಲ್ಲ ಜಾತಿ, ಜನಾಂಗ, ಧರ್ಮದವರು ಕೂಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ರಾಜೀವ ಗಾಂಧಿ.  ಇದಕ್ಕೆ ವಿರುದ್ಧ ಬಿಜೆಪಿಯವರು ಸುಪ್ರಿಂ ಕೋರ್ಟ್ ವರೆಗೂ ಹೋಗಿ ವಾದ ಮಂಡಿಸಿದ್ದರೂ, ತೀರ್ಪು ಕಾಂಗ್ರೆಸ್ಸಿನ ಪರವಾಗಿ ಬಂದಿತ್ತು.  ಇದನ್ನು ಸ್ಥಳೀಯ ಸಂಸ್ಥೆಗಳ ಮತದಾರರು ನೆನಪಿಡಬೇಕು.  ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಮತ ಚಲಾಯಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಸುನೀಲಗೌಡ ಪಾಟೀಲ, ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಬೀಳಗಿ ಮಾಜಿ ಶಾಸಕ ಜೆ. ಟಿ. ಪಾಟೀಲ, ಬಾಗಲಕೋಟೆ ಜಿ. ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕಾಂಗ್ರೆಸ್ ಮುಖಂಡರಾದ ಹಣಮಂತ ಕಾಖಂಡಕಿ, ಎಚ್. ಎಸ್. ಕೋರಡ್ಡಿ, ಬಸವರಾಜ ದೇಸಾಯಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌