ವಿಜಯಪುರ: ಕೊರೊನಾ ನಿಬಂಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆಯಲ್ಲ ಮುಮ್ಮಟ್ಟಿಗುಡ್ಡ ಶ್ರೀ ಅಮೋಘಸಿದ್ಧ ಜಾತ್ರೆಯನ್ನು ಸರಳವಾಗಿ ಆಚರಿಸಲು ವಿಜಯಪುರ ಜಿಲ್ಲಾಡಳಿತ ಸೂಚನೆ ನೀಡಿದೆ.
ಡಿ. 4 ರಿಂದ ಮೂರು ದಿನಗಳ ಕಾಲ ಮುಮ್ನಟ್ಟಿಗುಡ್ಡ ಶ್ರೀ ಅಮೋಘಸಿದ್ದ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಚನ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಜಾತ್ರೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈಗ ಕೊರೊನಾ ಒಮಿಕ್ರಾನ್ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಸರಕಾರದ ನಿಬಂಧನೆಗಳನ್ನು ಕಟ್ಟುನಿಟ್ಡಾಗಿ ಪಾಲಿಸುವಂತೆ ಉಪವಿಭಾಗಾಧಿಕಾರಿಗಳು ಗ್ರಾಮದ ಜಾತ್ರಾ ಸಮಿತಿಗೆ ಸೂಚನೆ ನೀಡಿದರು. ಸಂಪ್ರದಾಯದಂತೆ ವಿಧಿವಿಧಾನ ಪ್ರಕಾರ ಪೂಜೆ, ನೈವೇದ್ಯ ಮಾಡುವಂತೆ ಮತ್ರು ಸರಳವಾಗಿ ಜಾತ್ರೆ ನಡೆಸುವಂತೆ ಸೂಚನೆ ನೀಡಿದರು. ಇದಕ್ಕೆ ಗ್ರಾಮದ ಮುಖಂಡರೂ ಕೂಡ ಸ್ಪಂದಿಸಿ ಸರಳವಾಗಿ ಜಾತ್ರೆ ನಡೆಸುವಯದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ತಿಕೋಟಾ ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣಪಿ, ತಿಕೋಟಾ ಎಸ್ಐ ಅನಿತಾ ರಾಠೋಡ, ಪಿಡಿಓ ಹಂಗರಗಿಗ್ರಾ, ಮದ ಪ್ರಮುಖರಾದ ರಾಜೂಗೌಡ ಪೊಲೀಸ್ ಪಾಟೀಲ, ಬುತಾಳಿಸಿದ್ದ ಒಡೆಯರ, ಪರಮೇಶ್ವರ ಒಡೆಯರ, ರಾಘವೇಂದ್ರ ಕುಲಕರ್ಣಿ, ರಾಜು ವಾಚು ಜಾದವ, ಸಂದೀಪ ಇಂಡಿ, ಮೋತಿಲಾಲ ಪವಾರ ಮುಂತಾದವರು ಉಪಸ್ಥಿತರಿದ್ದರು.