ಮೂರು ವರ್ಷಗಳಲ್ಲಿ ಮಾಡಿದ ಕೆಲಸ, ಹಾಲಿ, ಮಾಜಿ‌ ಕಾಂಗ್ರೆಸ್ ಶಾಸಕರು, ಮುಖಂಡರ ಬೆಂಬಲ ಗೆಲುವಿಗೆ ಸಹಕಾರಿಯಾಗಿವೆ ಸುನೀಲಗೌಡ ಪಾಟೀಲ

ವಿಜಯಪುರ: ವಿಧಾನ ಪರಿಷತ ಸದಸ್ಯನಾಗಿ ಮೂರು ವರ್ಷ ಮಾಡಿರುವ ಸೇವೆ ಮತ್ತು ಕಾಂಗ್ರೆಸ್ ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರು, ಮತದಾರರ ಬೆಂಬಲದಿಂದ ವಿಧಾನ ಪರಿಷತ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸುವುದಾಗಿ ಎಂ ಎಲ್ ಸಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಲಕ್ಕಿಂತಲೂ ಹೆಚ್ಚಿನ ಮತಗಳನ್ನು ಈ ಬಾರಿ ಪಡೆಯಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸನ ಸಭೆ ಚುನಾಯಿತ ಪ್ರತಿ‌ನಿಧಿಗಳ ಮಾದರಿಯಲ್ಲಿ ಗ್ರಾ. ಪಂ. ಸದಸ್ಯರಿಗೂ ಪಿಂಚಣಿ ಜಾರಿ‌, ಬಸ್ ಪಾಸ್ ವ್ಯವಸ್ಥೆ, ಗೌರವಧನ ಹೆಚ್ಚಳಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಅವರು ಭರವಸೆ ನೀಡಿದರು.

 

ತೆಲಂಗಾಣ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಮಾಡಿದಾಗ ನಮ್ಮ ರಾಜ್ಯದ ಗ್ರಾ. ಪಂ. ಸದಸ್ಯರಿಗೆ ನೀಡುತ್ತಿರುವ ಗೌರವ ಧನ ಸಾಕಾಗುವುದಿಲ್ಲ ಎಂದು ಮನಗಂಡು ಸರಕಾರದ ಮೇಲೆ ವಿಧಾನ ಪರುಷತ ಅಧಿವೇಶನದಲ್ಲಿ ಪ್ರಸ್ತಾಪಿಸಿ ಒತ್ತಡ ಹಾಕಿದ್ದೇನೆ. ಆದರೆ ಇಷ್ಟಕ್ಕೆ ನನಗೆ ಸಮಾಧಾನವಾಗಿಲ್ಲ. ಈಗ ನೀಡಲಾಗುತ್ತಿರುವ ಗೌರವ ಧನದಲ್ಲಿ ಮೊಬೈಲ್ ಕರೆನ್ಸಿ, ಪೆಟ್ರೋಲ್ ಖರೀದಿಗೂ ಸಾಕಾಗುವುದಿಲ್ಲ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಗ್ರಾ. ಪಂ. ಸದಸ್ಯರು ಗ್ರಾಮಾಭಿವೃದ್ಧಿಗಾಗಿ ಕೇಂದ್ರ ಸ್ಥಾನಕ್ಕೆ‌ ಬರಲು ಸಾವಿರಾರು ರೂ. ಖರ್ಚಾಗುತ್ತದೆ. ಹೀಗಾಗಿ ಕನಿಷ್ಟ ಗೌರವ ಧನವನ್ನು ಕನಿಷ್ಠ ಮೂರು ಸಾವಿರ ರೂ. ಗೌರವ ಧನ ನೀಡಿ ಎಂದು ಮನವಿ ಮಾಡಿದ್ದೇನೆ. ನನ್ನ ಅಧಿಕಾರ ಅವಧಿ ಆರಂಭದಲ್ಲಿಯೇ ಕೋವಿಡ್ ಕಾಟ ಆರಂಭವಾಯಿತು. ಆದರೂ ಜನರ ಆಶೀರ್ವಾದದಿಂದ ಪರಿಸ್ಥಿತಿ ನಿಭಾಯಿಸಿದೆ. ‌ಎಲ್ಲ ಪಂಚಾಯಿತಿಗಳಿಗೆ ವೈಯಕ್ತಿಕವಾಗಿ ಭೇಟಿ‌ ನೀಡಲು ಸಾಧ್ಯವಾಗದಿದ್ದರೂ ತಾಲೂಕಾವಾರು ಅಹವಾಲನ್ನು ಆಲಿಸಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಳೀಯವಾಗಿಯೇ ಬಳಕೆ‌ ಮಾಡಲು ಹೊಸ ಮಾರ್ಗ ಕಂಡುಕೊಂಡು ಆ ಅನುದಾನದಲ್ಲಿಯೇ ಮೂರು ಅಶ್ವಶಕ್ತಿ ಸಾಮರ್ಥ್ಯದ ಸೆನೆಟೈಜರ್ ಮಷೀನ್ ಗಳನ್ನು ಆಯಾ ಗ್ರಾ.ಪಂ.ಗಳಿಗೆ ಒದಗಿಸಿದ್ದೇನೆ. ಬಾಗಲಕೋಟೆ ಜಿಲ್ಲೆಗೆ ಈ ಅನುದಾನ ಬಳಕೆ‌ ಸಾಧ್ಯವಾಗದ ಸಂದರ್ಭದಲ್ಲಿ ವೈಯಕ್ತಿಕ ಖರ್ಚಿನಲ್ಲಿ‌ ಈ‌‌ ಎಲ್ಲ ಮಷೀನ್ ವಿತರಿಸಿದೆ ಎಂದು ಅವರು ತಿಳಿಸಿದರು.

ಆಶ್ರಯ ಮನೆ ಯೋಜನೆ ಸಂಪೂರ್ಣ ಸ್ತಬ್ದವಾಗಿದೆ. ಆದರೆ, ಈಗ ಮನೆಯ ಹೆಸರೇ ಗ್ರಾಮ‌ ಪಂಚಾಯತಗಳಲ್ಲಿ ಕೇಳಿ ಬರುತ್ತಿಲ.‌‌ ನಮ್ಮ ಸರಕಾರದ ಅವಧಿಯಲ್ಲಿ 15 ಲಕ್ಷ ಆಶ್ರಯ ಮನೆ ನಿರ್ಮಿಸಲಾಗಿತ್ತು. ಈಗ ಪ್ರತಿ ವರ್ಷ ಆಯಾ ಗ್ರಾ. ಪಂ. ವ್ಯಾಪ್ತಿಯಲ್ಲಿ ಕನಿಷ್ಠ 50 ಆಶ್ರಯ ಮನೆಗಳನ್ನು ನಿರ್ಮಿಸಲು ಮುಂಬರುವ ದಿನಗಳಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಸುನೀಲಗೌಡ ಪಾಟೀಲ ತಿಳಿಸಿದರು.

ಅನುದಾನ ಸದ್ಭಳಕೆಗೆ ಸದಸ್ಯರಿಗೆ‌ ಪರಮಾಧಿಕಾರ. 15ನೇ ಹಣಕಾಸು ಯೋಜನೆ ಅನುದಾನ ಹಂಚಿಕೆಗೆ ಕ್ರಿಯಾ ಯೋಜನೆಗೆ ಗ್ರಾಮ ಪಂಚಾಯತ ಸದಸ್ಯರು ಸ್ವತಂತ್ರವಾಗಿದ್ದರು. ಆದರೆ ಈ ಯೋಜನೆಯ ಎಲ್ಲ ಹಣವನ್ನು ಜಲಜೀವನ ಮಿಷನ್ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಗ್ರಾಮಗಳ ಪ್ರಗತಿ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯ ಧ್ವನಿ ಎತ್ತಿ ಜಲಜೀವನ‌ ಮಿಷನ್ ಅನುಷ್ಠಾನಕ್ಕೆ ಸರಕಾರವೇ ಅನುದಾನ‌ ಒದಗಿಸಿ 15ನೇ ಹಣಕಾಸು ಯೋಜನೆ‌ ಅನುದಾನ ಬಳಕೆಗೆ ಗ್ರಾ. ಪಂ. ಸದಸ್ಯರಿಗೆ ಪರಮಾಧಿಕಾರ ನೀಡುವ ನಿಟ್ಟಿನಲ್ಲಿ ಸರಜಾರದ‌ ಗಮನ ಸೆಳೆಯುವೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಸಂಗಮೇಶ ಬಬಲೇಶ್ವರ, ಡಾ. ಮಹಾಂತೇಶ ನಿರಾದಾರ, ಡಾ. ಗಂಗಾಧರ ಸಂಬಣ್ಣಿ, ಡಾ. ಯಂಕಂಚಿ, ಡಾ. ಮಹಾಂತೇಶ ಬಿರಾದಾರ, ಸುರೇಶ ಘೊಣಸಗಿ, ಜಮೀರ ಭಕ್ಷಿ, ಶಂಕರಸಿಂಗ್ ಹಜೇರಿ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌