ಮ. 12 ಗಂ. ವರೆಗೆ ಶೇ. 41.11 ರಷ್ಟು ಮತದಾನ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ವಿಧಾನ ಪರಿಷತ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮ.12ರ ವರೆಗೆ ಶೇ. 41.11ರಷ್ಟು ಮತದಾನ ದಾಖಲಾಗಿದೆ. ವಿಜಯಪುರ ಮತ್ತು 41.11ರಷ್ಟು ಮತದಾನ ದಾಖಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಸಂ. 4 ಗಂಟೆಯ ವರೆಗೆ ಮತದಾನ ನಡೆಯಲಿದೆ.
ಮತದಾನ ಆರಂಭವಾದ ಮೂರೇ ಗಂಟೆಯಲ್ಲಿ ಶೇ. 100ರಷ್ಟು ಮತದಾನ- ಯಾವ ಮತಗಟ್ಟೆಯಲ್ಲಿ ಗೊತ್ತಾ?
ವಿಜಯಪುರ: ವಿಧಾನ ಪರಿಷತ ಚುನಾವಣೆ ಮತದಾನ ಆರಂಭವಾದ ಮೂರೇ ಗಂಟೆಗಳಲ್ಲಿ ಮತಗಟ್ಟೆಯೊಂದರಲ್ಲಿ ಶೇ. 100ರಷ್ಟು ಮತದಾನ ದಾಖಲಾಗಿದೆ. ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿದಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಗಳಿಗೆ ಮತದಾನ ಬೆ.8ರಿಂದ ಆರಂಭವಾಗಿದೆ. ಸಂ. 4ರ ವರೆಗೆ ಮತದಾನ ನಡೆಯಲಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ ಮತದಾನ ಆರಂಭವಾಗಿತ್ತು. ಬೆ. 11 ಗಂಟೆಯೊಳಗೆ ಅಂದರೆ ಕೇವಲ ಮೂರೇ ಗಂಟೆಗಳಲ್ಲಿ ಶೇ 100 ಮತದಾನವಾಗಿದೆ. ಈ ಮತಗಟ್ಟೆಯಲ್ಲಿ ಬರುವ ಎಲ್ಲ 14 […]
ಬೆ. 10 ಗಂ. ವರೆಗೆ ಶೇ. 10.46 ಮತದಾನ- ಸಾರವಾಡದಲ್ಲಿ ಒಟ್ಟಿಗೆ ಬಂದು ಮತ ಚಲಾಯಿಸಿದ ಐದು ಜನ ಸದಸ್ಯರು
ವಿಜಯಪುರ: ವಿಧಾನ ಪರಿಷತ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬೆ. 10ರ ವರೆಗೆ ಶೇ. 10.46 ರಷ್ಟು ಮತದಾನ ದಾಖಲಾಗಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತದಾನ ಈಗ ಚುರುಕುಗೊಂಡಿದೆ. ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಐದು ಜನ ಮತದಾರರು ಒಟ್ಟಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ) ಸಂ. 4 ಗಂಟೆಯ ವರೆಗೆ ಮತದಾನ ನಡೆಯಲಿದೆ.
ವಿಪ ಚುನಾವಣೆ: ಮತದಾನ ಆರಂಭ- ಮಂದಗತಿಯಲ್ಲಿ ಸಾಗಿರುವ ಮತದಾನ- ಮಧ್ಯಾಹ್ನದ ವೇಳೆಗೆ ಮತದಾನ ಬಹುತೇಕ ಪೂರ್ಣ ನಿರೀಕ್ಷೆ
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಮತದಾನ ಆರಂಭವಾಗಿದೆ. ಮತದಾನ ಸುಗಮವಾಗಿ ನಡೆಯಲು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹಾಲಿ ಸದಸ್ಯ ಸುನೀಲಗೌಡ ಪಾಟೀಲ, ಬಿಜೆಪಿಯಿಂದ ಪಿ. ಎಚ್. ಪೂಜಾರ, ಐದು ಜನ ಪಕ್ಷೇತರರು ಸೇರಿದಂತೆ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಸವ ನಾಡು ವೆಬ್ ವಿಜಯಪುರ ತಾಲೂಕಿನ ಜುಮನಾಳ ಗ್ರಾ. ಪಂ. ಮತಗಟ್ಟೆಗೆ ಭೇಟಿ ನೀಡಿದಾಗ ಒಟ್ಟು […]