ಮತದಾನ ಆರಂಭವಾದ ಮೂರೇ ಗಂಟೆಯಲ್ಲಿ ಶೇ. 100ರಷ್ಟು ಮತದಾನ- ಯಾವ ಮತಗಟ್ಟೆಯಲ್ಲಿ ಗೊತ್ತಾ?

ವಿಜಯಪುರ: ವಿಧಾನ ಪರಿಷತ ಚುನಾವಣೆ ಮತದಾನ ಆರಂಭವಾದ ಮೂರೇ ಗಂಟೆಗಳಲ್ಲಿ ಮತಗಟ್ಟೆಯೊಂದರಲ್ಲಿ ಶೇ. 100ರಷ್ಟು ಮತದಾನ ದಾಖಲಾಗಿದೆ.

ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿದಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಗಳಿಗೆ ಮತದಾನ ಬೆ.8ರಿಂದ ಆರಂಭವಾಗಿದೆ. ಸಂ. 4ರ ವರೆಗೆ ಮತದಾನ ನಡೆಯಲಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ ಮತದಾನ ಆರಂಭವಾಗಿತ್ತು. ಬೆ. 11 ಗಂಟೆಯೊಳಗೆ ಅಂದರೆ ಕೇವಲ ಮೂರೇ ಗಂಟೆಗಳಲ್ಲಿ ಶೇ 100 ಮತದಾನವಾಗಿದೆ. ಈ ಮತಗಟ್ಟೆಯಲ್ಲಿ ಬರುವ ಎಲ್ಲ 14 ಸದಸ್ಯರು ತಮ್ಮ ಚಲಾಯಿಸಿದ್ದಾರೆ. ಈ ಮೂಲಕ ಮತದಾನ ಆರಂಭವಾದ ಮೂರೇ ಗಂಟೆಗಳಲ್ಲಿ ಈ ಮತಗಟ್ಟೆಯಲ್ಲಿ ಶೇ. 100ರಷ್ಟು ಮತದಾನ ದಾಖಲಾಗಿದೆ.

Leave a Reply

ಹೊಸ ಪೋಸ್ಟ್‌