ವಿಪ ಚುನಾವಣೆ: ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ. 99.86 ರಷ್ಟು ಮತದಾನ

ವಿಜಯಪುರ: ವಿಜಯಪುರ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. 99 86ರಷ್ಟು ಮತದಾನವಾಗಿದೆ.

ಈ ಚುನಾವಣೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 7363 ಮತದಾರರಿದ್ದು ಅವರಲ್ಲಿ 7353 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.  10 ಜನ ಮತದಾರರು ಮತದಾನ ಮಾಡಿಲ್ಲ.

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3931 ಮತದಾರರಲ್ಲಿ 3926 ಸದಸ್ಯರು ನಮ್ಮ ಹಕ್ಕು ಚಲಾಯಿಸಿದ್ದು ಶೇ. 99.87 ರಷ್ಟು ಮತದಾನವಾಗಿದೆ.  ಬಾಗಲಕೋಟೆ ಜಿಲ್ಲೆಯಲ್ಲಿ 3432 ಮತದಾರರಲ್ಲಿ 3427 ಮತದಾರರು ತಮ್ಮ ಹಕ್ಕು ಚಲಾಯಿಸಿದ್ಜು. ಶೇ. 99.85 ರಷ್ಟು ಮತದಾನವಾಗಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ, ಆಲಮೇಲ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಚಡಚಣ ತಾಲೂಕುಗಳಲ್ಲಿ ಶೇ. 100ರಷ್ಟು ಮತದಾನವಾಗಿದೆ.

ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಇಳಕಲ, ಬಾದಾಮಿ, ಬಾಗಲಕೋಟೆ ಮತ್ತು ಜಮಖಂಡಿ ತಾಲೂಕುಗಳಲ್ಲಿ ಶೇ. 100ರಷ್ಟು ಮತದಾನ ದಾಖಲಾಗಿದೆ.

ವಿಜಯಪುರ ಜಿಲ್ಲೆ

ತಾಲೂಕುವಾರು ಒಟ್ಟು ಮತದಾರರು(ಮತದಾನ ಮಾಡಿದವರು) ಶೇಕಡಾವಾರು ಮಾಹಿತಿ

ವಿಜಯಪುರ-354(353) ಶೇ. 99.72, ಬಸವನ ಬಾಗೇವಾಡಿ- 341(341) ಶೇ. 100, ಮುದ್ದೇಬಿಹಾಳ-367(367) ಶೇ. 100, ಇಂಡಿ- 693(693) ಶೇ. 100, ಸಿಂದಗಿ ಮತ್ತು ಆಲಮೇಲ450(450) ಶೇ. 100, ಬಬಲೇಶ್ವರ-298(298) ಶೇ. 100, ತಿಕೋಟಾ- 286(285) ಶೇ. 99.65, ನಿಡಗುಂದಿ- 168(168) ಶೇ. 100, ಕೊಲ್ಹಾರ- 144(144) ಶೇ. 100, ತಾಳಿಕೋಟೆ- 286(284) ಶೇ.99.30, ಚಡಚಣ- 289(289) ಶೇ. 100, ದೇವರ ಹಿಪ್ಪರಗಿ- 255(254) ಶೇ. 99.60.

ಬಾಗಲಕೋಟೆ

ತಾಲೂಕುವಾರು ಒಟ್ಟು ಮತದಾರರು(ಮತದಾನ ಮಾಡಿದವರು) ಶೇಕಡಾವಾರು ಮಾಹಿತಿ

ಹುನಗುಂದ- 136(135) ಶೇ. 99.61, ಇಳಕಲ- 306(306) ಶೇ. 100, ಗುಳೇದಗುಡ್ಡ- 178(178) ಶೇ. 100, ಬಾದಾಮಿ- 517(517) ಶೇ. 100, ಬಾಗಲಕೋಟೆ- 449(449) ಶೇ. 100, ಬೀಳಗಿ- 389(388) ಶೇ. 99.74, ಮುಧೋಳ- 433(432) ಶೇ. 99.77, ರಬಕವಿ-ಬನಹಟ್ಟಿ- 406(404) ಶೇ. 99.51, ಜಮಖಂಡಿ-  497(497) ಶೇ. 100.

Leave a Reply

ಹೊಸ ಪೋಸ್ಟ್‌