ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ, ಜಾನುವಾರುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳಿ-ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳ ಮಾಲಿಕರು ತಮ್ಮ ರಾಸುಗಳಿಗೆ ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ ಆರೋಗ್ಯವಾಗಿ ಇರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕರೆ ನೀಡಿದ್ದಾರೆ.  ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾಲುಬಾಯಿ ಬೇನೆ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಜಾನುವಾರುಗಳಿವೆ ಎಂದು ವಾಸ್ತವಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.  ಅವುಗಳಿಗೆ ಮನೆ ಬಾಗಿಲಿಗೆ ಹೋಗಿ ಕಿವಿಯೋಲೆ ಹಾಕಿಸಿ ಲಸಿಕೆ […]

ವಿಪ ಚುನಾವಣೆ: ವಿಜಯಪುರದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ- ಪೊಲೀಸ್ ಬಿಗೀ ಬಂದೋಬಸ್ತ್- ಡಿಸಿ ಪರಿಶೀಲನೆ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ವಿಜಯಪುರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ವಿಜಯಪುರ ನಗರದ ವಿ. ಬ. ದರಬಾರ ಹೈಸ್ಕೂಲಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.  ಮಂಗಳವಾರ ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಯನ್ನು ತೆರಯಲಾಗುತ್ತದೆ.  ನಂತರ ಬೆ. 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ದರಬಾರ ಹೈಸ್ಕೂಲ್ ಶಾಲೆಗೆ ಭೇಟಿ ನೀಡಿ […]

ವಿಪ ಚುನಾವಣೆ: ಮತ ಎಣಿಕೆ ಲೆಕ್ಕಾಚಾರ ಹೇಗಿರುತ್ತೆ? ಫಲಿತಾಂಶ ಎಷ್ಟೋತ್ತಿಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ಕಣದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಐದು ಜನ ಪಕ್ಷೇತರ ಅಭ್ಯರ್ಥಿಗಳು ಈ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಡಿ. 10 ರಂದು ನಡೆದ ಮತದಾನದ ಮತ ಎಣಿಕೆ ಕಾರ್ಯ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.  ಆದರೆ, ಈ ಚುನಾವಣೆ ಮತ ಎಣಿಕೆ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳಂತೆ ನಡೆಯುವುದಿಲ್ಲ.  ಇಲ್ಲಿ ವಿದ್ಯುನ್ಮಾನ […]

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ

ವಿಜಯಪುರ: ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಧಾಳಿ ನಡೆಸಿ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ರವಿವಾರ ರಾತ್ರಿ 9.45ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆಸಲಾಗಿದೆ.  ಕನ್ನಾನ್ ನಗರದಲ್ಲಿ ತಗಡಿನ ಶೆಡ್ ವೊಂದರಲ್ಲಿ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.  ಸರಕಾರದ ನಾನಾ ಯೋಜನೆಗಳ ಅಡಿ ವಿತರಣೆಯಾಗಬೇಕಿದ್ದ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.  ಆಹಾರ […]

ಬ್ಯಾಂಕ್ ಠೇವಣಿದಾರರ ವಿಮೆ ಸೌಲಭ್ಯದಲ್ಲಿ ಹೆಚ್ಚಳ- ಕೇಂದ್ರ ಸಚಿವ ಭಗವಂತ ಖೂಬಾ

ವಿಜಯಪುರ: ನಾನಾ ಬ್ಯಾಂಕುಗಳಲ್ಲಿ ಹಣ ಠೇವಣಿ ಮಾಡುವ ಬಡ ಮತ್ತು ಮಧ್ಯಮ ವರ್ಗದ ಠೇವಣಿದಾರರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಠೇವಣಿ ವಿಮೆ ಹಾಗೂ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ (ಡಿಐಸಿಜಿಸಿ)ಯೋಜನೆ ಜಾರಿಗೆ ತಂದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.    ವಿಜಯಪುರ ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಕೆನರಾ ಬ್ಯಾಂಕ್ ತನ್ನ ಲೀಡ್ ಬ್ಯಾಂಕ್ ಗಳ ಸಂಯೋಜನೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೆಪಾಸಿಟ್ ಇನ್ಸೂರೆನ್ಸ ಪೇಮೆಂಟ್ ಫಲಾನುಭವಿಗಳಿಗೆ […]