ವಿಪ ಚುನಾವಣೆ: ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ. ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಪ್ರಥಮ ಸುತ್ತಿನಲ್ಲಿಯೇ ಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಎರಡನೇ ಸುತ್ತಿನಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

 

ಪ್ರಥಮ ಸುತ್ತಿನಲ್ಲಿ ಅಭ್ಯರ್ಥಿಗಳು ಪಡೆದ ಪ್ರಥಮ ಪ್ರಾಶಸ್ತ್ಯದ ಮತಗಳ ವಿವರ

ಪಿ. ಎಚ್. ಪೂಜಾರ(ಬಿಜೆಪಿ)- 2219

ಸುನೀಲಗೌಡ ಪಾಟೀಲ(ಕಾಂಗ್ರೆಸ್)- 3245

ಕಾಂತಪ್ಪ(ಕಾಂತು) ಶಂಕ್ರೆಪ್ಪ ಇಂಚಗೇರಿ(ಪಕ್ಷೇತರ)- 11

ದುರ್ಗಪ್ಪ ಭರಮಪ್ಪ ಸಿದ್ದಾಪುರ(ಪಕ್ಷೇತರ)- 4

ಮಲ್ಲಿಕಾರ್ಜುನ ಭೀಮಪ್ಪ ಕೆಂಗನಾಳ(ಪಕ್ಷೇತರ)- 24

ಮಲ್ಲಿಕಾರ್ಜುನ ಎಸ್. ಲೋಣಿ(ಪಕ್ಷೇತರ)- 1466

ಶ್ರೀಮಂತ ಶಿವಬಾಳ ಬಾರಿಕಾಯಿ(ಪಕ್ಷೇತರ)- 10

 

ಈ ಪ್ರಥಮ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ನಿಗದಿತ 2326.33 ಮತಗಳಿಗಿಂತಲೂ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.  ಆದರೆ, ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದರಿಂದ, ಇನ್ನೋಬ್ಬ ಅಭ್ಯರ್ಥಿ ನಿಗದಿತ ಮತಗಳ ಗುರಿ ತಲುಪಲಿಲ್ಲ.  ಹೀಗಾಗಿ ಎರಡನೇ ಸುತ್ತಿನ ಮತ ಎಣಿಕೆ ನಡೆಯಿತು.

ಈ ಸುತ್ತಿನಲ್ಲಿ ಬಿಜೆಪಿಯ ಅಭ್ಯರ್ಥಿ ಪಿ. ಎಚ್. ಪೂಜಾರ ನಿಗದಿತ ಮೌಲ್ಯದ ಮತಗಳನ್ನು ಪಡೆದು ಆಯ್ಕೆಯಾದರು.

ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಮೌಲ್ಯ ಮತ್ತು ಸುತ್ತಿನ ಮಾಹಿತಿ ಇಲ್ಲಿದೆ

  

ಪಿ. ಎಚ್. ಪೂಜಾರ(ಬಿಜೆಪಿ)- 240473(ಪ್ರಥಮ ಸುತ್ತು- 221900+ದ್ವಿತೀಯ ಸುತ್ತು- 18573)

ಸುನೀಲಗೌಡ ಪಾಟೀಲ(ಕಾಂಗ್ರೆಸ್)- 324500(ಪ್ರಥಮ ಸುತ್ತು)

ಕಾಂತಪ್ಪ(ಕಾಂತು) ಶಂಕ್ರೆಪ್ಪ ಇಂಚಗೇರಿ(ಪಕ್ಷೇತರ)- 1838(ಪ್ರಥಮ ಸುತ್ತು-1100+ದ್ವಿತೀಯ ಸುತ್ತು- 378)

ದುರ್ಗಪ್ಪ ಭರಮಪ್ಪ ಸಿದ್ದಾಪುರ(ಪಕ್ಷೇತರ)- 851(ಪ್ರಥಮ ಸುತ್ತು-400+ದ್ವಿತೀಯ ಸುತ್ತು- 451)

ಮಲ್ಲಿಕಾರ್ಜುನ ಭೀಮಪ್ಪ ಕೆಂಗನಾಳ(ಪಕ್ಷೇತರ)- 3630(ಪ್ರಥಮ ಸುತ್ತು-2400+ದ್ವಿತೀಯ ಸುತ್ತು-1230)

ಮಲ್ಲಿಕಾರ್ಜುನ ಎಸ್. ಲೋಣಿ(ಪಕ್ಷೇತರ)- 214701(ಪ್ರಥಮ ಸುತ್ತು- 146600+ದ್ವಿತೀಯ ಸುತ್ತು-68101)

ಶ್ರೀಮಂತ ಶಿವಬಾಳ ಬಾರಿಕಾಯಿ(ಪಕ್ಷೇತರ)- 1410(ಪ್ರಥಮ ಸುತ್ತು-1000+ದ್ವಿತೀಯ ಸುತ್ತು-410).

 

ಎರಡನೇ ಸುತ್ತಿನ ಮತ ಎಣಿಕೆಯ ಬಳಿಕ ಬಿಜಾಪುರ ಮತಕ್ಷೇತ್ರದ ಚುನಾವಣಾಧಿಕಾರಿ ಮತ್ತು ವಿಜಯಪುರ ಜಿಲ್ಲಾಧಿಕಾರಿಯೂ ಆಗಿರುವ ಪಿ. ಸುನೀಲ ಕುಮಾರ ಫಲಿತಾಂಶ ಪ್ರಕಟಿಸಿದರು.

 

Leave a Reply

ಹೊಸ ಪೋಸ್ಟ್‌