ವಿಜಯಪುರ: ವಿಧಾನ ಪರಿಷತ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಸುನೀಲಗೌಡ ಪಾಟೀಲ ಗೆಲುವು ಸಾಧಿಸುತ್ತಿದ್ದಂತೆಯೇ ಅವರ ಮನೆಯಲ್ಲಿ ಮತ್ತು ಮನೆಯ ಹೊರಗಡೆ ವಿಜಯೋತ್ಸವ ಆಚರಿಸಲಾಯಿತು.
ಕಾಂಗ್ರೆಸ್ ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರ ಮನೆಯಲ್ಲಿ ಅವರ ಪತ್ನಿ ರೇಣುಕಾ, ಸಹೋದರಿ ಕಲ್ಪನಾ, ಪುತ್ರಿ ಸಾನ್ವಿ, ಪುತ್ರ ಸಿದ್ದಾಂತ ಗುಲಾಲ ಹಚ್ಚಿ ಶುಭ ಕೋರಿ ಸಂಙ್ರಮಿಸಿದರು.
ಇದೇ ಸಂದರ್ಭದಲ್ಲಿ ಸುನೀಲಗೌಡ ಪಾಟೀಲ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಅಲ್ಲದೇ, ಅವರ ಮನೆಯ ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಮತ ಎಣಿಕೆ ಕೇಂದ್ರವಾದ ವಿಜಯಪುರ ನಗರದ ದರಬಾರ ಹೈಸ್ಕೂಲಿಗೆ ಆಗಮಿಸಿದ ಸುನೀಲಗೌಡ ಪಾಟೀಲ ಅವರನ್ನು ಕಾಂಗ್ರೆಸ್ ಮುಖಂಡರಾದ ಅಬ್ದುಲ ಹಮೀದ ಮುಶ್ರಿಫ್, ಸುಭಾಷ ಛಾಯಾಗೋಳ, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಟಪಾಲ ಎಂಜಿನಿಯರ್, ದಿನೇಶ ಹಳ್ಳಿ, ಉದ್ಯಮಿ ಅರುಣ ಮಾಚಪ್ಪನವರ, ದೇಸಾಯಿ, ಗಿರೀಶ ಗುಗ್ಗರಿ ಸೇರಿದಂತೆ ನಾನಾ ಮುಖಂಡರು ಶುಭ ಕೋರಿ ಸಂತಸ ಪಟ್ಟರು.