ರಾಜಕೀಯಕ್ಕಿಂತ ಮೀಗಿಲಾದುದು ಸ್ನೇಹ, ಸಂಬಂಧ, ಮಾನವೀಯ ಮೌಲ್ಯಗಳು ಎಂಬುದಕ್ಕೆ ಸಾಕ್ಷಿ ಈ ಪ್ರಸಂಗ
ವಿಜಯಪುರ: ಇದು ಚುನಾವಣೆ ಮತ ಎಣಿಕೆ ಬಿಸಿ ಬಿಸಿ ಸಂದರ್ಭದಲ್ಲಿಯೂ ಭಾರತೀಯರಲ್ಲಿ ರಾಜಕೀಯಕ್ಕಿಂತಲೂ ಸ್ನೇಹ, ಸಂಬಂಧ ಮತ್ತು ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆಯಿದೆ ಎಂಬುದಕ್ಕೆ ಕೈಗನ್ನಡಿ ಪ್ರಸಂಗ. ದೇಶದಲ್ಲಿ ಇಂದಿಗೂ ಇಂತಹ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಸಾಕ್ಷಾತ್ ನಿದರ್ಶನ. ಇಲ್ಲಿ ಕಾಂಗ್ರೆಸ್-ಬಿಜೆಪಿ ಎಂಬ ಭೇದ ಭಾವ ಇರಲಿಲ್ಲ. ಗತಕಾಲದ ಕ್ಷಣಗಳು, ವರ್ತಮಾನದ ವಿದ್ಯಮಾನಗಳಿಗೆ ಸಾಕ್ಷಿಯಾದ ಈ ಘಟನೆ ನಡೆದಿದ್ದು ವಿಜಯಪುರ ನಗರದಲ್ಲಿ. ಅದು ಕೂಡ ಮತ ಎಣಿಕೆ ಕೇಂದ್ರದಲ್ಲಿ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ […]
ಸಂಜೆ ಗೆಲುವು, ತಡರಾತ್ರಿ ವಿಜಯದ ಸರ್ಟಿಫಿಕೇಟ್ ಪಡೆದ ಪಿ. ಎಚ್ ಪೂಜಾರ
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳನ್ನು ಗಳಿಸಿವೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮೊದಲ ಸುತ್ತಿನಲ್ಲಿಯೇ ನಿಗದಿಗಿಂತ ಅತ್ಯಧಿಕ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಆದರೆ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ ಪಿ. ಎಚ್. ಪೂಜಾರ ಗೆಲುವಿಗಾಗಿ ಬಹಳಷ್ಟು ಸಮಯ ಕಾಯಬೇಕಾಯಿತು. ಪ್ರಥಮ ಸುತ್ತಿನಲ್ಲಿ ಮಿಗದಿತ ಗುರಿ ತಲುಪದ ಅವರು, ದ್ವಿತೀಯ […]
ತಡರಾತ್ರಿ ಗೆಲುವಿನ ಸರ್ಟಿಫಿಕೇಟ್ ಪಡೆದ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ
ವಿಜಯಪುರ: ಗೆಲುವು ಸಾಧಿಸಿದ ಸುಮಾರು 11 ಗಂಟೆಗಳ ಬಳಿಕ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಗೆಲುವಿನ ಸರ್ಟಿಫಿಕೇಟ್ ಪಡೆದಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆ ಮತ ಎಣಿಕೆ ಮಂಗಳವಾರ ವಿಜಯಪುರ ನಗರದ ವಿ. ಭ. ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮ.12ರ ಸುಮಾರಿಗೆ ನಿಗದಿಗಿಂತ ಅತೀ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಶಾಲಿಯಾದರು. ನಂತರ […]
ಪಿ. ಎಚ್. ಪೂಜಾರ ಗೆದ್ದರೂ ಬಿಜೆಪಿಯಲ್ಲಿ ಸಂಭ್ರಮಿಸಿದವರ ಸಂಖ್ಯೆ ಕಡಿಮೆ-ಕಾರಜೋಳ, ಚರಂತಿಮಠ ಸೇರಿ ಕೆಲವರಿಂದ ಮಾತ್ರ ಫೇಸ್ ಬುಕ್ ನಲ್ಲಿ ಅಭಿನಂದನೆ
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ದ್ವಿತೀಯ ಸುತ್ತಿನಲ್ಲಿ ಕಷ್ಟಪಟ್ಟು ಆಯ್ಕೆಯಾಗಿದ್ದಾರೆ. ಆದರೆ ಇವರ ಗೆಲುವು ಬಿಜೆಪಿಗರಿಗೆ ಅಷ್ಟೊಂದು ಖುಷಿ ತಂದಂತೆ ಕಾಣುತ್ತಿಲ್ಲ. ಕೆಲವು ಜನ ನಾಯಕರು ಮತ್ತು ಕಾರ್ಯಕರ್ತರನ್ನು ಹೊರತುಪಡಿಸಿದರೆ ಉಳಿದವರು ಎಷ್ಟರ ಮಟ್ಟಿಗೆ ಅಭಿನಂದನೆ ಶುಭಾಶಯ ಕೋರಿದ್ದಾರೆ ಎಂಬುದು ಈಗ ಬಿಜೆಪಿ ಕಾರ್ಯಕರ್ತರಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಮತ್ತು ಬಿಜೆಪಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರೆಂದರೆ ಸಾಮಾಜಿಕ ಜಾಲತಾಣದಲ್ಲಿ […]
ವಿಜಯಪುರ, ಬಾಗಲಕೋಟೆ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ- ಪಿ. ಎಚ್. ಪೂಜಾರಿ ತಿಣುಕಾಟದ ಗೆಲುವೇ ಇದಕ್ಕೆ ಸಾಕ್ಷಿ
ವಿಜಯಪುರ: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೋಮ್ಮೆ ಸಾಬೀತಾಗಿದೆ ಎಂಬ ಚರ್ಚೆಗಳು ಈಗ ಜಿಲ್ಲಾದ್ಯಂತ ನಡೆಯುತ್ತಿವೆ. ವಿಧಾನ ಪರಿಷತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ತಿಣುಕಾಟಕದ ಗೆಲುವು ಇದಕ್ಕೆ ಪುಷ್ಠಿ ನೀಡಿದಂತಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇಬ್ಬರು ಬಿಜೆಪಿ ಸಂಸದರು, ಇಬ್ಬರು ವಿಧಾನ ಪರಿಷತ ಸದಸ್ಯರು, ಏಳು ಜನ ಶಾಸಕರಿದ್ದಾರೆ. ಆದರೆ, ಮಂಗಳವಾರ ಪ್ರಕಟವಾದ ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ವಿಜಯಪುರ ಮತ್ತು ಬಾಗಲಕೋಟೆ […]
ಗೆದ್ದರೂ ಸರ್ಟಿಫಿಕೇಟ್ ಗಾಗಿ ಕಾದು ಸುಸ್ತಾದ ಅಭ್ಯರ್ಥಿಗಳು- ಕಾರಣವೇನು ಗೊತ್ತಾ?
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆದರೆ, ಉಭಯ ಅಭ್ಯರ್ಥಿಗಳು ಗೆಲುವಿನ ಸರ್ಟಿಪಿಕೇಟ್ ಗಾಗಿ ತಡರಾತ್ರಿವರೆಗೆ ಕಾಯ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದಲ್ಲಿರುವ ವಿ. ಭ. ದರವಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ಈ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕಾದು ಕಾದು ಸುಸ್ತಾದ ಘಟನೆ ನಡೆಯಿತು. ನೀಲಗೌಡ ಪಾಟೀಲ(ಕಾಂಗ್ರೆಸ್) ಮತ್ತು ಪಿ. ಎಚ್. ಪೂಜಾರ(ಬಿಜೆಪಿ) ಗೆಲುವು […]
ಹಾಲುಮತಸ್ಥರು ಎಲ್ಲ ಸಂಸ್ಕಾರಗಳನ್ನು ಗುರುಒಡೆಯರ ಪೌರೋಹಿತ್ಯದಲ್ಲಿ ನೆರವೇರಿಸಬೇಕು- ಚಂದ್ರಕಾಂತ ಬಿಜ್ಜರಗಿ
ವಿಜಯಪುರ: ಹಾಲುಮತ ಸಮುದಾಯಕ್ಕೆ ಒಡೆಯರು ಕುಲಗುರುಗಳು. ಆದ್ದರಿಂದ ಹಾಲುಮತಸ್ಥರ ಮನೆಯಲ್ಲಿ ನಡೆಯುವ ನಿಶ್ಚಿತಾರ್ಥ, ವಿವಾಹ, ಜವಳ ಮುಂತಾದ ಸಂಸ್ಕಾರಗಳ ಪೌರೋಹಿತ್ಯಕ್ಕಾಗಿ ಬೇರೆ ಮತದವರನ್ನು ಆಹ್ವಾನಿಸುವ ಬದಲು ನಮ್ಮ ಧರ್ಮದ ಗುರುಗಳಾದ ಗುರುಒಡೆಯರನ್ನೇ ಅಹ್ವಾನಿಸಬೇಕು ಎಂದು ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಹೇಳಿದರು. ವಿಜಯಪುರ ನಗರದ ಜೇಲದರ್ಗಾದಲ್ಲಿರುವ ಹಳೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಡೆದ ಹಾಲುಮತ ಗುರು-ಒಡೆಯರ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಒಂದು ವೇಳೆ ಗುರುಒಡೆಯರು ಲಭ್ಯವಿಲ್ಲದಿದ್ದರೆ ಪಟ್ಟದ ಪೂಜಾರಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಪ್ರಪಂಚದ ಸರ್ವಧರ್ಮಗಳ ತಾಯಿಸ್ಥಾನದಲ್ಲಿರುವ ಹಾಲುಮತಕ್ಕೆ ತನ್ನದೇ […]