ವಿಜಯಪುರ: ಗುಮ್ಮಟ ನಗರಿಯಲ್ಲಿ ಇತ್ತಿಚೆಗೆ ಹೆಚ್ಚಾಗಿ ನಡೆಯತ್ತಿದ್ದ ಎಮ್ಮೆ ಕಳ್ಳತನ ಪ್ರಕರಣಗಳನ್ನು ವಿಜಯಪುರ ನಗರದ ಜಲನಗರ ಪೊಲೀಸರು ಭೇದಿಸಿದ್ದಾರೆ.
ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಜನ ಕಳ್ಳರನ್ನು ಬಂಧಿಸಿರುವ ಜಲನಗರ ಪೊಲೀಸರು, ಆರೋಪಿಗಳಿಂದ ರೂ. 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ವಿಜಯಪುರ ನಗರದ ಹೊರವಲಯದ ಬೇಗಂ ತಾಲಾಬ್ ದೊಡ್ಡಿ ನಿವಾಸಿಗಳಾದ ಶ್ರೀಕಾಂತ ತಂದೆ ಲಕ್ಷ್ಮಣ ಉರ್ಫ ಅಂಕುಶ ಗೋಪಣೆ, ಮೈಲಾರಿ ತಂದೆ ಲಕ್ಷ್ಮಣ ಉರ್ಫ ಅಂಕುಶ ಗೋಪಣೆ, ರಾಮು ತಂದೆ ತಾಯಪ್ಪ ಗೋಪಣೆ, ಬೀಮು ಉರ್ಪ ಭೀಮಾ ತಂತೆ ಅಂಬು ಉರ್ಪ ಅಂಬಾಜಿ ಗೋಪನೆ, ಹಾಗೂ ಬೀಮಶಿ ಉರ್ಫ ಭೀಮಸೇನ ತಂದೆ ಶಂಕರ ಗೋಪಣೆ, ಮಾರುತಿ ತಂದೆ ಅಣ್ಣಪ್ಪ್ಪ ಗೋಪಣೆ ಅವರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪಯರ ಎಎಸ್ಪಿ ಡಾ. ರಾಮಲಕ್ಷ್ನಣ ಅರಸಿದ್ದಿ ಮಾರ್ಗದರ್ಶನದಲ್ಲಿ ವಿಜಯಪುರ ಡಿವೈಎಸ್ಪಿ ಕೆ. ಸಿ. ಲಕ್ಷ್ಮೀನಾರಾಯಣ ಮತ್ತು ವಿಜಯಪುರ ನಗರದ ಗೋಲಗುಂಬಜ್ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ವಿಷೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ನಗದು ಬಹುಮಾನ ಘೋಷಿಸಿದ್ದಾರೆ.