ಬೆಳಗಾವಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಸವಕಳಿಗೊಂಡ ಮತ್ತು ಅಸಾಧಾರಣ ದುರಸ್ಥಿಗೆ ಬರುತ್ತಿರುವ ನಿರೀಕ್ಷಿತ ಪಂಪುಗಳನ್ನು ಕ್ರಮೇಣವಾಗಿ ಬದಲಾಯಿಸುವ ಉದ್ದೇಶದಿಂದ ಹೊಸ ಪಂಪುಗಳ ಖರೀದಿಗೆ ಕೃಷ್ಣ ಭಾಗ್ಯ ಜಲ ನಿಗಮದ 2021-22ನೇ ವರ್ಷದ ಕಾರ್ಯಕ್ರಮ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಎರಡು ಪಂಪುಗಳನ್ನು ಬದಲಾಯಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ ಶಾಸಕರಾದ ರಮೇಶ ಭೂಸನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಪ್ರತೀ ವರ್ಷ ಇಂಡಿ ಏತ ನೀರಾವರಿ ಯೋಜನೆಯ ಮೋಟಾರ ಪಂಪು ಮತ್ತು ಇತರೇ ಉಪಕರಣಗಳ ಬದಲಾವಣೆ ಅಥವಾ ದುರಸ್ಥಿಗಾಗಿ ಹಾಗೂ ನಿರ್ವಹಣೆಗಾಗಿ ವಾರ್ಷಿಕ ಕಾರ್ಯಕ್ರಮ ಪಟ್ಟಿಯಲ್ಲಿ ಸೂಕ್ತ ಅನುದಾನವನ್ನು ಕಲ್ಪಿಸಲಾಗುತ್ತಿರುತ್ತದೆ. ಅದರಂತೆ, ಪ್ರತೀ ವರ್ಷ ರಿಪೇರಿ ಹಾಗೂ ನಿರ್ವಹಣೆ ಕಾರ್ಯ ಕೈಗೊಳ್ಳಲಾಗುತ್ತಿತ್ತು. ವಾರ್ಷಿಕವಾಗಿ ನಿರ್ವಹಣೆಯನ್ನು ಗುತ್ತಿಗೆ ವಹಿಸಿರುವುದರಿಂದ ಯೋಜನೆಯ ಪಂಪುಗಳು ಹಾಗೂ ಇತರೆ ಉಪಕರಣಗಳ ಬದಲಾವಣೆ ಅಥವಾ ದುರಸ್ಥಿಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತಿತ್ತು. ಈಸದರಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದವರಿಗೆ ಸಂಪ್ ಮಾಡೆಲ್ ಸ್ಟಡಿ ಕೈಗೊಳ್ಳಲಾಗಿದೆ. ಈ ಅಧ್ಯಯನದ ಸಲಹೆಗಳನ್ನು ಅಳವಡಿಸಿ ಯೋಜನೆಯಲ್ಲಿನ ಪಂಪುಗಳ ದುರಸ್ಥಿ ಕಾಮಗಾರಿಗಳಿಗೆ ಐದು ವರ್ಷಗಳ ಪಾಲನೆ ಮತ್ತು ಪೋಷಣೆ ಒಳಗೊಂಡಂತೆ ಟರ್ನ್ ಕೀ ಆಧಾರಿತ ಕಾಮಗಾರಿಯ ನಿರ್ವಹಣೆಯನ್ನು ಫೆಬ್ರವರಿ 2021ರಲ್ಲಿ ಗುತ್ತಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು
ಈ ಯೋಜನೆಯ ಪಾಲನೆ ಮತ್ತು ಪೋಷಣೆಯ ಗುತ್ತಿಗೆದಾರರ ನಿರ್ವಹಣೆಯಲ್ಲಿರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ಸದನಕ್ಕೆ ವಿವರಿಸಿದರು.