ಡಾ. ಕುಶಾಲ ದಾಸ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ವಿಜಯಪುರ: ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಪ್ರಾಧ್ಯಾಪಕ ಮತ್ತು ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥ ಡಾ. ಕುಶಾಲ ದಾಸ ಅವರಿಗೆ ಬೊಲಿವಿಯಾ ದೇಶದ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಬೊಲಿವಿಯಾದ ಪ್ಲುರಿನ್ಯಾಷನಲ್ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಉದ್ಯಮಕ್ಕೆ ಡಾ.ಕುಶಾಲ ದಾಸ್ ಅವರು “ದಿ ಎಫೆಕ್ಟ್ ಆಫ್ ಹೈ ಅಲ್ಟಿಟ್ಯೂಡ್ ಆನ್ ದಿ ಇನ್ಸಿಡೆನ್ಸ್ ಆ್ಯಂಡ್ ಸಿವಿಯಾರಿಟಿ ಆಫ್ ಕೊವಿಡ್-19” ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಶಿಕ್ಷಣ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಉಪನಿರ್ದೇಶನಾಲಯದ ಪ್ಲುರಿನ್ಯಾಷನಲ್ 8ನೇ ಆವೃತ್ತಿಯ ಪ್ರಥಮ ಪ್ರಶಸ್ತಿಗೆ ಡಾ. ಕುಶಾಲ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ. ಕುಶಾಲ ದಾಸ್ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿರುವುದಕ್ಕೆ ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌